ಮುದ್ದು ಮಕ್ಕಳು ನಟ ಹರೀಶ್ ರಾಜ್‌ಗೆ ಮೇಕಪ್ ಮಾಡಿದ್ದಾರೆ ನೋಡಿ..ಲಿಪ್‌ಸ್ಟಿಕ್ ಜಾಸ್ತಿ ಆಯ್ತಲ್ವಾ?
ಕನ್ನಡ ಚಿತ್ರರಂಗದ ಅದ್ಭುತ ನಟ ಹರೀಶ್ ರಾಜ್ (Harish Raj) ಬಿಗ್ ಬಾಸ್ ಸೀಸನ್-7ರಲ್ಲಿ ಸ್ಪರ್ಧಿಸಿದ ನಂತರ ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರು ಅವರದ್ದೇ ವಿಡಿಯೋ. ಫೋಟೋ ಹಾಗೂ ಮೀಮ್ಸ್. ಅದರಲ್ಲೂ ಇತ್ತೀಚಿಗೆ ತಮ್ಮ ಇಬ್ಬರು ಮುದ್ದಾದ ಹೆಣ್ಣುಮಕ್ಕಳು ಮಾಡಿರುವ ಮೇಕಪ್ (Makeup) ಫೋಟೋ ಹಂಚಿಕೊಂಡು ಪ್ರತಿಯೊಬ್ಬ ತಂದೆಯೂ ತಮ್ಮ ಮಗಳ ಬಾಲ್ಯದ ಬಗ್ಗೆ ಮೆಲುಕು ಹಾಕುವಂತೆ ಮಾಡಿದ್ದಾರೆ. ಕಾಮೆಂಟ್ ಮಾಡುವ ಮೂಲಕ ಎಲ್ಲರೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಎರಡು ಸೂಪರ್ ಪ್ರಾಜೆಕ್ಟ್: ಬೆಳ್ಳಿತೆರೆಗೆ ನಟ ಹರೀಶ್ ರಾಜ್ ಕಮ್‌ಬ್ಯಾಕ್!
ಹೌದು! ಹಾಸಿಗೆಯ ಮೇಲೆ ಆರಾಮ್ ಆಗಿ ಮಲಗಿಕೊಂಡಿದ್ದಾರೆ ಹರೀಶ್ ರಾಜ್. ಇಬ್ಬರೂ ತುಂಟ ಕಂದಮ್ಮಗಳು ಲಿಪ್‌ಸ್ಟಿಕ್ (LipStick), ಐ ಶ್ಯಾಡೋ (Eye Shadow) ಹಾಗೂ ಹೇರ್ ಬ್ಯಾಂಡ್ (HairBand) ಹಾಕಿ ತಂದೆಗೆ ಅಲಂಕಾರ ಮಾಡಿದ್ದಾರೆ. 'ನನ್ನ ಮಕ್ಕಳ ಬ್ಯೂಟಿ ಪಾರ್ಲರ್‌ಗೆ ಭೇಟಿ ನೀಡಿದಾಗ..' ಎಂದು ಹರೀಶ್ ರಾಜ್ ಬರೆದುಕೊಂಡು ಫೋಟೋ ಹಂಚಿಕೊಂಡಿದ್ದಾರೆ. ಎಲ್ಲರೂ ಸೂಪರ್, ಅಯ್ಯೋ, ನೀವು ತುಂಬಾ ಲಕ್ಕಿ ಎಂದು ಕಾಮೆಂಟ್ ಮಾಡಿದ್ದಾರೆ.
ನೆಟ್ಟಿಗರು ಹರೀಶ್ ರಾಜ್‌ಗೆ ಡ್ಯಾಡಿ ಕೂಲ್ (Daddy Cool) ಎಂದು ಕ್ರೆಡಿಟ್ ಕೊಟ್ಟಿದ್ದಾರೆ. ಪೇರೆಂಟಿಂಗ್ ಗೋಲ್ಸ್‌ನ (Parenting Tips) ನೀವು ಸೆಟ್ ಮಾಡೋದು ಅನೇಕರಿಗೆ ಮಾದರಿ ಎಂದಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್ (Busy Schedule)ನಲ್ಲೂ ಮಕ್ಕಳ ಜೊತೆ ಸಮಯ ಕಳೆಯುವುದನ್ನು ಎಂದು ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ನಟ ಹೇಳುತ್ತಾರೆ. ಬಿಗ್ ಬಾಸ್ ಮನೆ ಪ್ರವೇಶಿಸಿದಾಗnt ಮಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಹರೀಶ್, ಆಕೆಯ ಧ್ವನಿ ಕೇಳಬೇಕು ಎಂದು ಆಗಾಗ ಕ್ಯಾಮೆರಾ ಮುಂದೆ ಬಂದು ಕೇಳಿ ಕೊಳ್ಳುತ್ತಿದ್ದರು.
ಮತ್ತೆ ಪೊಲಿಟಿಷಿಯನ್ ಶೇಷಪ್ಪ ವಿಡಿಯೋ ವೈರಲ್; ನಟ ಹರೀಶ್ ರಾಜ್‌ಗೆ ಮೆಚ್ಚುಗೆಯ ಸುರಿಮಳೆ
48ಕ್ಕೂ ಹೆಚ್ಚು ಸಿನಿಮಾಗಳಲ್ಲಿ, 12 ಕನ್ನಡ ಧಾರಾವಾಹಿ ಹಾಗೂ 7 ಹಿಂದಿ ಧಾರಾವಾಹಿಯಲ್ಲಿ ನಟಿಸಿರುವ ಹರೀಶ್ ರಾಜ್, ಸದ್ಯ ಎರಡು ಬಿಗ್ ಬಜೆಟ್ ಕನ್ನಡ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀ ಯಡಿಯೂರು ಸಿದ್ದಲಿಂಗೇಶ್ವರಸ್ವಾಮಿ ಮಹಿಮೆ ಪೌರಾಣಿಕ ಧಾರವಾಹಿಯಲ್ಲಿಯೂ ನಟಿಸುತ್ತಿದ್ದಾರೆ.
ಜನವರಿ 2021ರಲ್ಲಿ ಎರಡನೇ ಮಗುವನ್ನು ಬರ ಮಾಡಿಕೊಂಡ ವಿಚಾರವನ್ನು ಹಂಚಿಕೊಂಡಿದ್ದರು. ಎರಡನೇ ಮಗಳಿಗೆ Dharshika ಎಂದು ಹೆಸರಿಟ್ಟಿದ್ದಾರೆ.
