ಮತ್ತೆ ಚಿತ್ರರಂಗದಲ್ಲಿ ಬ್ಯುಸಿಯಾದ ನಟ ಹರೀಶ್ ರಾಜ್. ಕೈಯಲ್ಲಿ ಎರಡು ಪ್ರಾಜೆಕ್ಟ್, ಒಂದನ್ನು ಮಾತ್ರ ರಿವೀಲ್ ಮಾಡಿದ್ದಾರೆ. 

1997ರಲ್ಲಿ ತಾಯಿ ಸಾಹೇಬಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಹರೀಶ್ ರಾಜ್ 48ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಗೂ 12 ಕನ್ನಡ ಧಾರಾವಾಹಿ, 7 ಹಿಂದಿ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಹಲವು ವರ್ಷಗಳ ಸಿನಿ ಜರ್ನಿಯಲ್ಲಿ ಹರೀಶ್ ಆಯ್ಕೆ ಮಾಡಿಕೊಂಡಿರುವ ಪಾತ್ರಗಳೆಲ್ಲಾ ಒಂದಕ್ಕಿಂತ ಒಂದು ಭಿನ್ನವಾಗಿದೆ.

ಇದೀಗ ಎರಡು ಸೂಪರ್ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುವ ಮೂಲಕ 50 ಸಿನಿಮಾಗಳನ್ನು ಪೂರೈಸುತ್ತಾರೆ. ಸಿಂಪಲ್ ಸುನಿ ನಿರ್ದೇಶನದ 'ಸಖತ್' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. '2020 ಲಾಕ್‌ಡೌನ್‌ ಅನಿರೀಕ್ಷಿತ ಬದಲಾವಣೆಗಳನ್ನು ತಂದಿದೆ. ಸಖತ್ ಚಿತ್ರದಲ್ಲಿ ನಾನು ಸ್ವಾಮಿಜಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವೆ. ಈಗ ಪರಿಸ್ಥಿತಿಯಲ್ಲಿ ಹೀರೋ ಹೇಗೆ ಜೀವನ ನಡೆಸುತ್ತಾನೆ ಕಷ್ಟಗಳನ್ನು ಎದುರಿಸುತ್ತಾನೆ ಅವನಿಗೆ ನಾನು ಹೇಗೆ ಸಹಾಯ ಮಾಡುವೆ ಎಂಬುವುದು ಕಥೆ. ಚಿತ್ರಕ್ಕಾಗಿ ನಾನು ಸಂಪೂರ್ಣವಾಗಿ ಬದಲಾಗಿರುವೆ' ಎಂದು ಹರೀಶ್ ರಾಜ್ ಹೇಳಿದ್ದಾರೆ. 

ಮತ್ತೆ ಪೊಲಿಟಿಷಿಯನ್ ಶೇಷಪ್ಪ ವಿಡಿಯೋ ವೈರಲ್; ನಟ ಹರೀಶ್‌ ರಾಜ್‌ಗೆ ಮೆಚ್ಚುಗೆಯ ಸುರಿಮಳೆ

ಎರಡು ಕೊರೋನಾ ವೈರಸ್ ವ್ಯಾಕ್ಸಿನ್ ತೆಗೆದುಕೊಂಡಿರುವ ಹರೀಶ್ ರಾಜ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಧಾರಾವಾಹಿ ಚಿತ್ರೀಕರಣ ಮುಗಿಸಿದ್ದಾರೆ. ಕೈಯಲ್ಲಿ ಮತ್ತೊಂದು ಸಿನಿಮಾ ಪ್ರಾಜೆಕ್ಟ್‌ ಇದ್ದು, ಶೀಘ್ರದಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಇನ್ನು ಗಣೇಶ ಹಬ್ಬದ ದಿನ ಪೊಲೀಸ್‌ ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ, ಯಾವ ಚಿತ್ರದಲ್ಲಿ ಹರೀಶ್ ಪೊಲೀಸ್ ಪಾತ್ರ ಎಂದು ಕುತೂಹಲ ಹೆಚ್ಚಾಗಿದೆ.

View post on Instagram