ಸ್ಯಾಂಡಲ್‌ವುಡ್‌ ಓನ್ ಆ್ಯಂಡ್ ಓನ್ಲಿ ಆ್ಯಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಹಾಗೂ ಪ್ರೇರಣ ನವೆಂಬರ್ 24,2019ರಂದು ಗುರು-ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವೇಳೆ ಅವರಷ್ಟೇ ಸದ್ದು ಮಾಡಿದ್ದು ಅವರ ಅಮಂತ್ರಣ ಪತ್ರಿಕೆ. 

ನೋಡೋಕೆ Chemistry ಬುಕ್‌ಗಿಂತ ದೊಡ್ಡದು, Engineering ಬುಕ್‌ಗಿಂತ ದಪ್ಪದಾಗಿತ್ತು. ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್ ಶೂಟ್‌ ಎಂದು ಪಾರಿವಾಳಗಳ ನಡುವೆ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಈ ಅದ್ಭುತದ ಫೋಟೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿತ್ತು. ಇತ್ತೀಚಿಗೆ ಪ್ರೇರಣ ಧ್ರುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ 'ಬಿಹೈಂಡ್‌ ದೀ ಸೀನ್‌' ಎಂದು ವಿಡಿಯೋವೊಂದನ್ನು ಅಪ್ಲೋಡ್‌ ಮಾಡಿದ್ದಾರೆ. 

ಕೊನೆಗೂ ರಿವೀಲ್ ಆಯ್ತು ಧ್ರುವ ಸರ್ಜಾ ಕಾರ್ ನಂಬರ್ ಸಿಕ್ರೇಟ್ !

ಡಿಸೆಂಬರ್‌ 9,2019ರಂದು ಪೋರ್ಶೆ ಮಕಾನ್ ಎಸ್‌ ಕಾರ್‌ ಖರೀದಿಸಿತ್ತು ಈ ಜೋಡಿ. ಕಾರಿನ ನಂಬರ್ ಕುತೂಹಲ ಹುಟ್ಟಿಸಿದ ಕಾರಣ ಅದರ ಹಿಂದಿನ ವಿಶೇಷತೆಯನ್ನು ವಿಡಿಯೋ ಮೂಲಕವೇ ರಿವೀಲ್ ಮಾಡಿದ್ದರು.

"