ಧ್ರುವ ಸರ್ಜಾ ಹುಟ್ಟುಹಬ್ಬ; ಮಧ್ಯರಾತ್ರಿಯಿಂದಲೇ ಅಭಿಮಾನಿಗಳ ಜೊತೆಗಿರುವ ನಟ
35ರ ಸಂಭ್ರಮಕ್ಕೆ ಕಾಲಿಟ್ಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಅಭಿಮಾನಿಗಳ ಜೊತೆಗಿರುವ ನಟ. ಕೆಡಿ ಸಿನಿಮಾದಲ್ಲಿ ಫುಲ್ ಬ್ಯುಸಿ....ಇಂದು ಅಣ್ಣನ ಸಿನಿಮಾ ರಿಲೀಸ್...

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇಂದು (ಅಕ್ಟೋಬರ್ 6) ಅಭಿಮಾನಿಗಳ ಜತೆಗೆ ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.
ಚಿರಂಜೀವಿ ಸರ್ಜಾ ನಿಧನ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ ಕಳೆದ ಮೂರು ವರ್ಷಗಳಿಂದ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಹೀಗಾಗಿ ಮೂರು ವರ್ಷಗಳ ನಂತರ ತಮ್ಮ ನೆಚ್ಚಿನ ನಟ ತಮ್ಮೊಂದಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಅಭಿಮಾನಿಗಳ ದೊಡ್ಡ ಸಂಭ್ರಮಕ್ಕೆ ಕಾರಣವಾಗಿದೆ.
ಧ್ರುವ ಸರ್ಜಾ ಮನೆ ಬಳಿ ಅ.5ರ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಆಗಮಿಸುತ್ತಿದ್ದಾರೆ.. ತಮ್ಮ ನಿವಾಸಕ್ಕೆ ಬರುವ ಅಭಿಮಾನಿಗಳನ್ನು ಧ್ರುವ ಸರ್ಜಾ ಅವರು ಭೇಟಿ ಮಾಡುತ್ತಿದ್ದಾರೆ.
ತಮ್ಮನನ್ನು ನೋಡುತ್ತಿದ್ದಂತೆ ಅಕ್ಕನ ತುಂಟಾಟ ಶುರು; ಧ್ರುವ ಸರ್ಜಾ ಮಕ್ಕಳ ವಿಡಿಯೋ ವೈರಲ್!
ತಮ್ಮನ ಹುಟ್ಟುಹಬ್ಬಕ್ಕೆ ಅಣ್ಣನ ಸಿನಿಮಾ ತೆರೆಗೆ
ಈ ಬಾರಿ ಧ್ರುವ ಸರ್ಜಾ ಹುಟ್ಟುಹಬ್ಬದ ವಿಶೇಷತೆ ಎಂದರೆ ಚಿರಂಜೀವಿ ಸರ್ಜಾ ನಟನೆಯ ಸಿನಿಮಾ ‘ರಾಜ ಮಾರ್ತಾಂಡ’ ಚಿತ್ರ ತೆರೆ ಕಾಣುತ್ತಿರುವುದು. ರಾಮ್‌ನಾರಾಯಣ್ ನಿರ್ದೇಶನ, ಶಿವಕುಮಾರ್ ನಿರ್ಮಾಣದ ‘ರಾಜಮಾರ್ತಾಂಡ’ ಸಿನಿಮಾ ಇಂದು (ಅ.6) ತೆರೆ ಮೇಲೆ ಮೂಡುತ್ತಿದೆ. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಪಾತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಿರುವುದು ವಿಶೇಷ.
ಮಗಳ ಜೊತೆ ಮೇಘನಾ ರಾಜ್ ಫೋಟೋ ವೈರಲ್; ಕಣ್ಮಣಿ ಎಂದು ಕರೆಯಲು ಕಾರಣವೇನು?
ಕೆಡಿ ಸಿನಿಮಾ ಅಪ್ಡೇಟ್ಸ್:
ಕನ್ನಡದ ಜನಪ್ರಿಯ ನಟ, ನಿರೂಪಕ ರಮೇಶ್ ಅರವಿಂದ್ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಶೀಘ್ರದಲ್ಲಿ ನಟ ರಮೇಶ್ ಅರವಿಂದ್ ಜೋಗಿ ಪ್ರೇಮ್ ನಿರ್ದೇಶನ, ಧ್ರುವ ಸರ್ಜಾ ನಾಯಕತ್ವದ, ಸದ್ಯ ಚಿತ್ರಕರಣದ ಹಂತದಲ್ಲಿರುವ 'KD-The devil' ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಧ್ರುವ ಸರ್ಜಾ ಚಿತ್ರ 'ಕೆಡಿ-ದಿ ಡೆವಿಲ್' ಚಿತ್ರದಲ್ಲಿ ಈಗಾಗಲೇ ಬಾಲಿವುಡ್ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಇದೀಗ ರಮೇಶ್ ಅರವಿಂದ ಚಿತ್ರತಂಡವನ್ನು ಸೇರಿಕೊಳ್ಳುವ ಮೂಲಕ ಇನ್ನಷ್ಟು ನಿರೀಕ್ಷೆ ಮೂಡಲು ಕಾರಣರಾಗಿದ್ದಾರೆ. 'ಕೆಡಿ-ದಿ ಡೆವಿಲ್' ಚಿತ್ರದಲ್ಲಿ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ರೀಷ್ಮಾ ಭಾಗದ ಚಿತ್ರೀಕರಣ ಮರಳುಗಾಡಿನಲ್ಲಿ ನಡೆಯುತ್ತಿದ್ದು, ಬಿಡುವಿನ ವೇಳೆಯಲ್ಲಿ ನಟಿ ಮರಳಿನ ಜತೆ ಆಟವಾಡುತ್ತ ಎಂಜಾಯ್ ಮಾಡುತ್ತಿದ್ದಾರಂತೆ. 'ಪೊಗರು' ಚಿತ್ರದ ಬಳಿಕ ಧ್ರುವ ಸರ್ಜಾ ನಟಿಸುತ್ತಿರುವ 'KD' ಚಿತ್ರವು ಬಿಗ್ ಬಜೆಟ್ ಚಿತ್ರವಾಗಿದೆ. ಚಿತ್ರೀಕರಣ ಮುಗಿಸಿ ಈ ವರ್ಷದೊಳಗೆ ತೆರೆಗೆ ಬರಲಿದ್ದು, 'ಜೋಗಿ ಪ್ರೇಮ್-ಧ್ರುವ ಸರ್ಜಾ' ಕಾಂಬಿನೇಷನ್ ಅಭಿಮಾನಿಗಳಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.