ಸ್ಯಾಂಡಲ್‌ವುಡ್‌ ಡಾಲಿ ಬರ್ತಡೇನ ಅಭಿಮಾನಿಗಳು ಹಾಗೂ ಚಿತ್ರತಂಡದವರು ಸಖತ್ ಸ್ಪೆಷಲ್ ಆಗಿ ಆಚರಿಸುತ್ತಿದ್ದಾರೆ. ಏನೆಲ್ಲಾ ವಿಶೇಷತೆಗಳಿವೆ? 

ನಟ ಧನಂಜಯ್ ಅವರು ಇಂದು (ಆಗಸ್‌ಟ್ 23) ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಟನೆ, ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ಧನಂಜಯ್ ಅವರಿಗೆ ಈ ಬಾರಿ ಹುಟ್ಟು ಹಬ್ಬ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಒಂದು ಕಡೆ ‘ರತ್ನನ್ ಪ್ರಪಂಚ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಸಾಕಷ್ಟು ಮೆಚ್ಚುಗೆ ಗಳಿಸುತ್ತಿದೆ. ಮತ್ತೊಂದು ಕಡೆ ತಮ್ಮದೇ ನಿರ್ಮಾಣದ ‘ಬಡವ ರಾಸ್ಕಲ್’ ಚಿತ್ರದ ಉಡುಪಿ ಹೋಟೆಲ್ ಹಾಡು ಕೂಡ ಕೇಳುಗರ ಗಮನ ಸೆಳೆಯುತ್ತಿದೆ.

ಹುಟ್ಟು ಹಬ್ಬಕ್ಕೆ ‘ಭೈರಾಗಿ’ ಚಿತ್ರದ ಟೀಸರ್ ಬಿಡುಗಡೆ ಆಗುತ್ತಿದೆ. ‘ಹೆಡ್‌ಬುಷ್’ ಚಿತ್ರದ ಫಸ್‌ಟ್ ಲುಕ್ ಹಾಗೂ ಟೀಸರ್ ಬಂದಿದೆ. ಇದರ ನಡುವೆ ‘21 ಅವರ್‌ಸ್’ ಹೆಸರಿನ ಹೊಸ ಸಿನಿಮಾ ಟೈಟಲ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಕನ್ನಡ ಹಾಗೂ ಮಲಯಾಳಂನಲ್ಲಿ ಮೂಡಿ ಬರಲಿರುವ ಈ ಚಿತ್ರವನ್ನು ಜೈಶಂಕರ್ ಪಂಡಿತ್ ನಿರ್ದೇಶನ ಮಾಡಲಿದ್ದಾರೆ.

ಸಖತ್ ಆಗಿದೆ ಡಾಲಿ ಧನಂಜಯ್ 'ರತ್ನನ್‌ ಪ್ರಪಂಚ' ಟ್ರೈಲರ್!

ಈ ನಡುವೆ ‘ಮಾನ್ಸೂನ್ ರಾಗ’ ಚಿತ್ರ ಶೂಟಿಂಗ್ ಮುಗಿಸಿಕೊಳ್ಳುವ ಜತೆಗೆ ಟೀಸರ್ ಕೂಡ ಬಿಡುಗಡೆ ಮಾಡಿಕೊಂಡಿದೆ. ಕನ್ನಡದಲ್ಲಿ ಬ್ಯುಸಿ ಆಗಿದ್ದಾಗಲೇ ತೆಲುಗಿನಲ್ಲಿ ‘ಪುಷ್ಪ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೀಗೆ ಸಾಲು ಸಾಲು ಚಿತ್ರಗಳ ನಡುವೆ ಬ್ಯುಸಿ ಆಗಿರುವ ಧನಂಜಯ್ ಅವರ ಹುಟ್ಟು ಹಬ್ಬ ಕೊರೋನಾ ಸಂಕಷ್ಟದ ನಡುವೆಯೂ ರಂಗೇರಲಿದೆ. ಅವರ ಅಭಿಮಾನಿಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.

View post on Instagram