ಡಾ.ರಾಜ್‌ಕುಮಾರ್ ಅವರ ಪುಣ್ಯತಿಥಿ  ಹಾಗೂ ಹುಟ್ಟಿದ ಹಬ್ಬ ಎರಡೂ ಒಂದೇ ತಿಂಗಳಲ್ಲಿ ಬರುವುದರಿಂದ ಏಪ್ರಿಲ್ ತಿಂಗಳನ್ನೂ  ಕನ್ನಡ ಸಿನಿ ರಸಿಕರು ರಾಜ್‌ ಮಾಸ ಅಂತಲೇ ಆಚರಿಸುತ್ತಾರೆ.  ಏಪ್ರಿಲ್‌ 24 ಚಿತ್ರರಂಗಕ್ಕೆ ಶುಭ ದಿನವೆಂದು ಭಾವಿಸಿ ಸಿನಿಮಾ  ಮುಹೂರ್ತ, ಪೋಸ್ಟರ್‌ ರಿಲೀಸ್‌ ಹಾಗೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. 

ಕೊರೋನಾ ಲಾಕ್‌ಡೌನ್‌ ಇರುವ ಕಾರಣ ಕುಟುಂಬಸ್ಥರು ಅಣ್ಣಾವ್ರ  ಸ್ಮಾರಕಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಈಗಾಗಲೇ  ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್‌ ಕುಟುಂಬ ಪೂಜೆ ಸಲ್ಲಿಸಿದ್ದಾರೆ. ಈ ವಿಶೇಷ ದಿನದಂದು ರಾಜ್‌ಕುಮಾರ್‌ ಮೊಮ್ಮಗ ಯುವರಾಜ್‌ಕುಮಾರ್ ಅವರ ಚೊಚ್ಚಲ ಸಿನಿಮಾದ ಪೋಸ್ಟರ್‌ ರಿಲೀಸ್‌ ಮಾಡುತ್ತಿದ್ದಾರೆ ಈ  ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ . 

ಬದುಕಿನ ಸ್ಫೂರ್ತಿ ಈ 'ಬಂಗಾರದ ಮನುಷ್ಯ'; ಮುತ್ತುರಾಜರ ಭಂಡಾರದಿಂದ ಮುತ್ತಿನ ಮಾತು!

ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್‌ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರಾಜ್‌ಕುಮಾರ್‌ ಹುಟ್ಟುಹಬ್ಬಕ್ಕೆ  ಟ್ಟಿಟರ್‌ನಲ್ಲಿ ಶುಭಕೋರಿದ್ದಾರೆ. 'ವರನಟ ಡಾ|| ರಾಜ್ ಕುಮಾರ್ ರವರ ಹುಟ್ಟುಹಬ್ಬದ ಸವಿನೆನಪಿನಲ್ಲಿ. ಅಣ್ಣಾವ್ರು ತಮ್ಮ ಪಾತ್ರಗಳ ಹಾಗೂ ಆದರ್ಶಮಯ ಜೀವನದ ಮೂಲಕ ಕನ್ನಡ ನಾಡಿನ ಮನೆ ಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ನಿಮ್ಮ ದಾಸ ದರ್ಶನ್ ' ಎಂದು ರಾಬರ್ಟ್‌ ಚಿತ್ರತಂಡದ ವತಿಯಿಂದ ಶುಭಕೋರಿದ್ದಾರೆ.