ದರ್ಶನ್‌ಗೂ ಕಾಡಿಗೂ ಹತ್ತಿರದ ನಂಟು. ಪ್ರಾಣಿಗಳನ್ನೂ ಕಾಡನ್ನೂ ಇನ್ನಿಲ್ಲದಂತೆ ಪ್ರೀತಿಸುವ ದರ್ಶನ್‌ ಕಾಡಿನ ಚಿತ್ರದಲ್ಲಿ ಯಾಕೆ ನಟಿಸಿಲ್ಲ? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ನಟ ದರ್ಶನ್‌ ಹಾಗೂ ರಾಜೇಂದ್ರ ಸಿಂಗ್‌ಬಾಬು ಕಾಂಬಿನೇಷನ್‌ನಲ್ಲಿ ಕಾಡಿನ ಚಿತ್ರ ಸೆಟ್ಟೇರಲಿದೆ. ಕತೆ ಮುಂದಿಟ್ಟುಕೊಂಡು ಚಿತ್ರಕಥೆ ಬರೆಯುತ್ತಿದ್ದಾರೆ ರಾಜೇಂದ್ರಸಿಂಗ್‌ ಬಾಬು. ಈಗಾಗಲೇ ಕತೆ ಕೇಳಿ ದರ್ಶನ್‌ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.

ವನ್ಯಜೀವಿ ಹಾಗೂ ಕಾಡಿನ ರಕ್ಷಣೆ ಜತೆಗೆ ಮೆಡಿಕಲ್‌ ಮಾಫಿಯಾ ಸುತ್ತ ಮೂಡುವ ಸಿನಿಮಾ ಇದು. ‘ಮೃಗಾಲಯ’, ‘ನಾಗರಹೊಳೆ’, ‘ಗಂಧದಗುಡಿ’ ಹಾಗೂ ‘ಸಿಂಹದ ಮರಿ ಸೈನ್ಯ’ ದಂತಹ ಚಿತ್ರಗಳ ನಂತರ ಕಾಡಿನ ಸಂಪತ್ತು, ವನ್ಯ ಜೀವಿಗಳ ಸುತ್ತ ಸಿನಿಮಾ ಬಂದಿಲ್ಲ.

ಇದ್ದಕ್ಕಿಂದ್ದಂತೆ ಡಿ ಬಾಸ್ ದರ್ಶನ್ ತಮಿಳು ನಾಡಿನ ದೇವಸ್ಥಾನದಲ್ಲಿ ಪ್ರತ್ಯಕ್ಷ!

ಕತೆಗೆ ಕಾದಂಬರಿ ಸ್ಫೂರ್ತಿ

ರಾಜೇಂದ್ರಸಿಂಗ್‌ ಬಾಬು ಅವರ ಈ ಚಿತ್ರಕ್ಕೆ ಸ್ಫೂರ್ತಿ ಆಗಿದ್ದು ಇಂಗ್ಲಿಷ್‌ ಕಾದಂಬರಿ. ಆಫ್ರಿಕದ ತಾಂಜೇನಿಯಾ ಕಾಡಿನಲ್ಲಿ Nೕಂಡಾಮೃಗ ಹಾಗೂ ಆನೆಗಳ ಮರಣ ಬೇಟೆ ಕುರಿತ ಪುಸ್ತಕ, ಜೂಲಿಯನ್‌ ರೀಡ್‌ಮೇಯರ್‌ ಅವರ ‘ಕಿಲ್ಲಿಂಗ್‌ ಫಾರ್‌ ಪ್ರಾಫಿಟ್‌’ ಮತ್ತು ಪೆಟ್ರೀಷಿಯಾ ಲೀ ಶಾಪ್‌ರ್‍ ಅವರ ‘ಪೋಚ್‌ರ್‍: ಸೀಕಿಂಗ್‌ ಎ ನ್ಯೂ ಲೈಫ್‌ ಇನ್‌ ತಾಂಜೇನಿಯಾ’ ಎನ್ನುವ ಕಾದಂಬರಿ ಓದುವಾಗ ರಾಜೇಂದ್ರಸಿಂಗ್‌ ಬಾಬು ಅವರಿಗೆ ಹೊಳೆದ ಕತೆ ಇದು.

ನಮ್ಮ ನೆಲಕ್ಕೆ ತಕ್ಕಂತೆ ಕತೆ ಮಾಡಿಕೊಂಡಿದ್ದಾರಂತೆ. ಮೆಡಿಸಿನ್‌ ಪ್ಲಾಂಟ್‌ ಮಾಡುವ ವೈದ್ಯರ ಮಗ ಐಎಫ್‌ಎಸ್‌ ಅಧಿಕಾರಿ ಆಗುತ್ತಾನೆ. ಈ ಅಧಿಕಾರಿ ಇಂಟರ್‌ಪೋಲ್‌ ಆಹ್ವಾನದ ಮೇರೆಗೆ ಆಫ್ರಿಕ ದೇಶಕ್ಕೆ ಹೋಗುತ್ತಾರೆ. ಅಲ್ಲಿ ಹೋದ ಮೇಲೆ ನಾಯಕ ಹೇಗೆ ಬೇರೆ ಬೇರೆ ಔಷಧಿಗಳ ತಯಾರಿಕೆಗೆ ಪ್ರಾಣಿಗಳನ್ನು ಕೊಲ್ಲುವ ಮಾಫಿಯಾ ಬಯಲಿಗೆ ಎಳೆಯುತ್ತಾನೆ ಎಂಬುದು ಚಿತ್ರದ ಕತೆ. ನಾಯಕ ವನ್ಯಜೀವಿಗಳನ್ನು ರಕ್ಷಿಸಲು ಹೋರಾಡಿದರೆ, ನಾಯಕನ ಅಪ್ಪ ಅಮೂಲ್ಯ ಔಷಧಿ ಸಸ್ಯಗಳ ಸಂರಕ್ಷಣೆಗೆ ಹೋರಾಡುತ್ತಾರೆ. ಇದಕ್ಕೆ ಸಸ್ಯ ವಿಜ್ಞಾನಿಯ ಪಾತ್ರಕ್ಕೆ ಲೇಖಕ ಕೆಎನ್‌ ಗಣೇಶಯ್ಯ ಅವರ ಬದುಕು ಹಾಗೂ ಅವರ ಸಾಹಿತ್ಯತಮಗೆ ಪ್ರೇರಣೆ ಎಂಬುದು ನಿರ್ದೇಶಕರ ಮಾತು. ಭಾರತ, ಆಫ್ರಿಕ, ಹಾಂಕಾಂಗ್‌, ಲಂಡನ್‌ನಲ್ಲಿ ಕತೆ ನಡೆಯುತ್ತದೆ.

ಕುದರೆ ಸವಾರಿ, ಗೆಳೆಯರ ಜೊತೆ ಹರಟೆ; ಲಾಕ್‌ಡೌನ್‌ನಲ್ಲಿ ದರ್ಶನ್ ಲೈಫ್!

ನಿಜ ಪ್ರಾಣಿಗಳ ಬಳಕೆ

ಚಿತ್ರದಲ್ಲಿ ಪ್ರಾಣಿಗಳ ದೃಶ್ಯಗಳಿಗೆ ಗ್ರಾಫಿಕ್ಸ್‌ ಬಳಸುವುದಿಲ್ಲ. ನಿಜವಾದ ಪ್ರಾಣಿಗಳನ್ನೇ ಬಳಸಲಾಗುತ್ತದೆ. ಆಫ್ರಿಕದಲ್ಲಿ ತರಬೇತುಗೊಂಡಿರುವ ಅಲ್ಲಿನ ಪ್ರಾಣಿಗಳನ್ನೇ ಚಿತ್ರದಲ್ಲಿ ಬಳಸುವ ಯೋಜನೆ ಹಾಕಿಕೊಂಡಿದ್ದು, ರಾಜೇಂದ್ರ ಸಿಂಗ್‌ ಬಾಬು ಅವರು ಈಗಾಗಲೇ ತಮ್ಮ ಸ್ನೇಹಿತರ ಜತೆಗೆ ಈ ಕುರಿತು ಮಾತನಾಡಿದ್ದಾರಂತೆ. ಹೀಗಾಗಿ ಸಿನಿಮಾ ಸಾಕಷ್ಟುನೈಜತೆಯಿಂದ ಕೂಡಿರುತ್ತದೆ ಎಂಬುದು ನಿರ್ದೇಶಕರು ಕೊಡುವ ವಿವರಣೆ.

ಮಹಾತ್ಮ ಪಿಕ್ಚರ್ಸ್‌ನ 100 ನೇ ಚಿತ್ರ

ಈ ಅದ್ದೂರಿ ಬಜೆಟ್‌ ಚಿತ್ರವನ್ನು ರಾಜೇಂದ್ರಸಿಂಗ್‌ ಬಾಬು ತಮ್ಮ ಮಹಾತ್ಮ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಅಂದುಕೊಂಡಂತೆ ಆದರೆ ಮಹಾತ್ಮ ಪಿಕ್ಚರ್ಸ್‌ನ 100ನೇ ಸಿನಿಮಾ ಇದೇ ಆಗಲಿದೆ. 1945ರಲ್ಲಿ ಹುಟ್ಟಿಕೊಂಡು ಕನ್ನಡ ಚಿತ್ರರಂಗಕ್ಕೆ ಪ್ರವೇಶವಾದ ಮಹಾತ್ಮ ಪಿಕ್ಚರ್ಸ್‌ಗೆ ಮುಂದಿನ ವರ್ಷ 75 ವರ್ಷಗಳ ಸಂಭ್ರಮ. ಈ ಸಂಭ್ರಮದ ಭಾಗವಾಗಿಯೇ ದರ್ಶನ್‌ ಅವರನ್ನು ಅರಣ್ಯಾಧಿಕಾರಿಯನ್ನಾಗಿಸುತ್ತಿರುವ ಸಿನಿಮಾ ಅಧಿಕೃತವಾಗಿ ಸೆಟ್ಟೇರಲಿದೆ.

ಅಲ್ಲದೆ ತಮ್ಮ ಕುಟುಂಬದ ಸಿನಿಮಾ ಪಯಣದ ಹೆಜ್ಜೆ ಗುರುತುಗಳನ್ನು ದಾಖಲಿಸುವ ನಿಟ್ಟಿನಲ್ಲಿ ಸ್ವತಃ ರಾಜೇಂದ್ರ ಸಿಂಗ್‌ ಬಾಬು ಅವರೇ 500 ಪುಟಗಳ ಒಂದು ಪುಸ್ತಕ ಬರೆಯುತ್ತಿದ್ದಾರೆ. ಈ ಪುಸ್ತಕದಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆದ ಹಲವು ಪ್ರಥಮಗಳ ದಾಖಲೆ ಜತೆಗೆ ಈ ಮೊದಲ ಹೆಜ್ಜೆಗಳಿಗೆ ತಮ್ಮ ತಂದೆ ಹಾಗೂ ಮಹಾತ್ಮ ಪಿಕ್ಚರ್ಸ್‌ ಹೇಗೆ ಕಾರಣವಾಯಿತು ಎಂಬುದನ್ನು ಹೇಳಲಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿ ಇಂಗ್ಲಿಷ್‌ನ ಕಾದಂಬರಿ ಓದುವಾಗ ಹೊಳೆದ ಕತೆ. ಜತೆಗೆ ನನಗೆ ವೈದ್ಯರೊಬ್ಬರ ಪುತ್ರ ಕೊಟ್ಟಮಾಹಿತಿಯೂ ಈ ಕತೆಗೆ ಪೂರಕವಾಗುತ್ತಿದೆ. ಆಫ್ರಿಕದ ಕಾಡು, ಅಲ್ಲಿನ ಪೊಲೀಸರು, ಮಿಲ್ಟಿ್ರ, ರಾಜಕಾರಣಿಗಳು, ಕೋರ್ಟ್‌ ಹೀಗೆ ಎಲ್ಲವೂ ಚಿತ್ರದಲ್ಲಿ ಬರಲಿದೆ. ಮೆಡಿಸಿನ್‌, ವನ್ಯಜೀವಿಗಳು, ಅವುಗಳ ಮಾರಣಹೋಮದ ಜತೆಗೆ ಭಾರತಕ್ಕೆ ಇರುವ ನಂಟು ಏನು ಎಂಬುದನ್ನು ಚಿತ್ರದಲ್ಲಿ ಹೇಳಲಾಗುವುದು. ಈ ಚಿತ್ರಕ್ಕೆ ದರ್ಶನ್‌ ಅವರೇ ಸೂಕ್ತ ಅನಿಸಿ ಕತೆ ಅವರಿಗೆ ಹೇಳಿದ್ದೇನೆ. ಒಪ್ಪಿಕೊಂಡಿದ್ದಾರೆ.

-ರಾಜೇಂದ್ರಸಿಂಗ್‌ ಬಾಬು, ನಿರ್ದೇಶಕ