Asianet Suvarna News Asianet Suvarna News

ಲಾಕ್‌‌ಡೌನಲ್ಲಿ ಅರ್ಜುನ್‌ ಸರ್ಜಾ ಮಕ್ಕಳ ವಿಭಿನ್ನ ಟಿಕ್‌ಟಾಕ್‌!

ಲಾಕ್‌ಡೌನ್‌ನಲ್ಲಿ ನಟ ಅರ್ಜುನ್‌ ಸರ್ಜಾ ಪುತ್ರಿಯರ ವಿಭಿನ್ನ ಟಿಕ್‌ಟಾಕ್‌ ವೈರಲ್‌. ವಿಡಿಯೋದಲ್ಲಿರೋರು ಮೂರೇ ಜನ ಅಂದ್ಮೇಲೆ ಇನ್ನೊಬ್ಬರು ಯಾರು?

Kannada actor Arjun sarja tiktok with daughter during lockdown
Author
Bangalore, First Published May 4, 2020, 2:53 PM IST
  • Facebook
  • Twitter
  • Whatsapp

ಸ್ಯಾಂಡಲ್‌ವುಡ್‌ ಹನುಮನ ಭಕ್ತ ಅರ್ಜುನ್‌ ಸರ್ಜಾ ಹಾಗೂ ಕುಟುಂಬ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಟಿಕ್‌ಟಾಕ್‌ ಮಾಡುತ್ತಾ ಟೈಂ ಪಾಸ್‌ ಮಾಡುತ್ತಿದ್ದಾರೆ.  ಅರ್ಜುನ್‌ ಸರ್ಜಾ ಪುತ್ರಿ ಐಶ್ವರ್ಯ ಮತ್ತು ಅಂಜನಾ ತಮ್ಮ ಸಾಕು ನಾಯಿ ಜೊತೆ ಟಿಕ್‌ಟಾಕ್‌ ಮಾಡಿದ್ದಾರೆ.

ಮೊದಲ ಬಾರಿ ಈ ಟಿಕ್‌ಟಾಕ್‌ ವಿಡಿಯೋ ನೋಡಿದರೆ ಕನ್ಫ್ಯೂಸ್‌ ಆಗುವುದಂತೂ  ಗ್ಯಾರಂಟಿ. ಅರೇ!! ನಾಯಿಗೆ ಕೈ ಎಲ್ಲಿಂದ ಬಂತು? 

ಹೌದು! ಅರ್ಜುನ್‌ ಸರ್ಜಾ ತಮ್ಮ ಸಾಕು ನಾಯಿಗೆ ಪುಲ್‌ಓವರ್‌ ಧರಿಸಿದ ಅದರ ಕೈ ತೋಳುಗಳಿಗೆ ಇವರ ಕೈ ಸೇರಿಸಿ ವಿಡಿಯೋದಲ್ಲಿ ಕೇಳುವ ಪ್ರಶ್ನೆಗಳಿಗೆ ಯಾರು ಹೇಗೆ ಎಂದು ತೋರಿಸಿದ್ದಾರೆ.  ಯಾರಿಗೆ 5ಕ್ಕೂ ಹೆಚ್ಚು ಮಕ್ಕಳು ಇರುತ್ತಾರೆ ಎಂದು ಕೇಳಿದಾಗ ಅಂಜನಾ ಕಡೆ ಬೆರಳು ತೋರಿಸಿದ್ದಾರೆ, ಯಾರಿಗೆ ಬೇಗ ಕೂದಲು ಬೆಳೆಯುತ್ತದೆ ಎಂದರೆ ಅದಕ್ಕೂ ಅಂಜನಾ ಕಡೆ ಬೆರಳು ತೋರಿಸಿದ್ದಾರೆ. ಇನ್ನು ಯಾರು ಹೆಚ್ಚು ಹಣ ಖರ್ಚು ಮಾಡುತ್ತಾರೆ, ಮೆಟ್ಟಲು ಇಳಿಯುವಾಗ ಯಾರು ಬೀಳುತ್ತಾರೆ ಎಂಬ ಪ್ರಶ್ನಗೆ ಐಶ್ವರ್ಯಾ ಕಡೆಗೆ ಬೆರಳು ತೋರಿಸಿದ್ದಾರೆ. ವಿಡಿಯೋ ಕೊನೆಯಲ್ಲಿ ಅರ್ಜುನ್‌ ಸರ್ಜಾ ನಾಯಿ ಬೆನ್ನಿನಿಂದ ಹೊರ ಬಂದು ಮುಖ ತೋರಿಸುತ್ತಾರೆ.

 

ಅರ್ಜುನ್‌ ಸರ್ಜಾ ಮನೆಯಲ್ಲಿ ಇಷ್ಟೊಂದು ಜಾಲಿಯಾಗಿರುವುದನ್ನು ನೋಡಿ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ. ಇನ್ನು 'ಪ್ರೇಮ ಬರಹ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಐಶ್ವರ್ಯಾ ಲಕ್ಷ್ಮಿ ಬಾರಮ್ಮ ಚಂದನ್‌ಗೆ ಜೋಡಿಯಾಗಿ ಮಿಂಚಿದ್ದರು. ತಂದೆಯ ನಿರ್ಮಾಣದ ಮೂಲಕವೇ ಲಾಂಚ್‌ ಆಗಬೇಕೆಂದು ಐಶ್ವರ್ಯಾ ಆಸೆಯಾಗಿತ್ತು. ಏರಡನೇ ಪುತ್ರಿ ಅಂಜನಾ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಈಗ ಬೆಂಗಳೂರಿನಲ್ಲಿ ಕುಟುಂಬಸ್ಥರ ಜೊತೆ ಇದ್ದಾರೆ.

ಅರ್ಜುನ್‌ ಇಬ್ಬರು ಮಕ್ಕಳು ಒಟ್ಟಾಗಿ ತಂದೆಯ ಹುಟ್ಟು ಹಬ್ಬಕ್ಕೆ ಹಸು-ಕರುವನ್ನು ಉಡುಗೊರೆಯಾಗಿ ಗಿಫ್ಟ್ ನೀಡಿದ್ದರು. ಆಂಜನೇಯನ ದೇವಸ್ಥಾನ ನಿರ್ಮಾಣ ಮಾಡಬೇಕೆಂದು ಅಂಜನೇಯನ ವಿಗ್ರಹ ಕೆತ್ತುತ್ತಿದ್ದ ಅರ್ಜುನ್‌ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಅರ್ಜುನ್‌ ಅಕ್ಕನ ಮಕ್ಕಳಾಗಿ ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಚಿತ್ರರಂಗದ ಟಾಪ್‌ ನಟರಾಗಿ ಗುರುತಿಸಿಕೊಂಡಿದ್ದಾರೆ. ಧ್ರುವ ಸರ್ಜಾ ವರ್ಷಕ್ಕೊಂದು ಸಿನಿಮಾ ಮಾಡಿದರೂ ಹೊಂದಿರುವ ಅಭಿಮಾನಿಗಳು ಅಪಾರ. 

ಈ ನಟಿಗೆ ಅಪ್ಪನ ಎದುರು ರೊಮಾನ್ಸ್ ಮಾಡಲು ಕಷ್ಟವಾಯ್ತಂತೆ: ಖ್ಯಾತ ನಟನ ಮಗಳ ಮಾತು

ಇತ್ತೀಚೆಗೆ ಧ್ರುವ ಸರ್ಜಾ 'ಪೊಗರು' ಚಿತ್ರದ ಪೋಸ್ಟರ್‌ ಹಾಗೂ ಫಸ್ಟ್ ಸಾಂಗ್ 'ಖರಾಬ್‌' ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಹಾಡನ್ನು ವಿದೇಶಿ ಬಾಕ್ಸರ್‌ಗಳು ಟಿಕ್‌ಟಾಕ್‌ ಮಾಡಿಕೊಂಡು ಶೇರ್ ಮಾಡಿಕೊಂಡಿದ್ದು, ಹೊಸ ದಾಖಲೆ ಸೃಷ್ಟಿಸಿದೆ. 

#MeToo ಅಭಿಯಾನದ ಆರಂಭವಾದಾಗ ನಟಿ ಶ್ರುತಿ ಹರಿಹರನ್, ಅರ್ಜುನ್ ಸರ್ಜಾ ವಿರೋಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ, ಸುದ್ದಿಯಾಗಿದ್ದರು. ಇಬ್ಬರನ್ನು ರೆಬೆಲ್ ಸ್ಟಾರ್ ಅಂಬರೀಷ್ ಸಂದಾನ ಮಾಡಲು ಯತ್ನಿಸಿದರೂ ಫಲ ನೀಡಿರಲಿಲ್ಲ. ಈ ಪ್ರಕರಣವಿನ್ನೂ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ.

Follow Us:
Download App:
  • android
  • ios