ಕೊರೋನಾ ಸಂಕಷ್ಟದಲ್ಲಿ ಬಡವರಿಗೆ, ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ ‘ಜಾನಿವಾಕರ್’ ಚಿತ್ರದ ನಟ ಅಭಯ್‌ವೀರ್.
ಜೈಲಿನಿಂದ ಹೊರ ಬಂದ ಮೇಲೆ ನಟಿ ರಾಗಿಣಿ ಒಪ್ಪಿಕೊಂಡ ಮೊದಲು ಸಿನಿಮಾ ‘ಜಾನಿವಾಕರ್’.ಲಾಕ್‌ಡೌನ್ ಶುರುವಾದಾಗಿನಿಂದ ತಮ್ಮ ಸುತ್ತಮುತ್ತಲಿನ ನೂರಾರು ಬಡ ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ಅಕ್ಕಿ, ಬೇಳೆ, ಅಡುಗೆ ಎಣ್ಣೆಯಂಥ ಆಹಾರ ಸಾಮಗ್ರಿಗಳನ್ನು ಒಳಗೊಂಡ ಫುಡ್ ಕಿಟ್‌ಗಳನ್ನು ವಿತರಿಸಿದ್ದಾರೆ. ಅಲ್ಲದೆ ಕೊರೋನಾ ವಾರಿಯರ್‌ಸ್ಗಳಾದ ಪೊಲೀಸರಿಗೆ ಮಾಸ್‌ಕ್, ಫೇಸ್‌ಶೀಲ್ಡ್, ಸ್ಯಾನಿಟೈಸರ್‌ಗಳನ್ನು ವಿತರಿಸುತ್ತಿದ್ದಾರೆ.
ಈಗಾಗಲೇ ಮುಧೋಳ, ಲೋಕಾಪೂರ ಸುತ್ತಮುತ್ತಲ ಭಾಗಗಳಲ್ಲಿ ಕೂಲಿ ಕಾರ್ಮಿಕರಿಗೆ, ಬೇರೆ ಊರುಗಳಿಂದ ಬಂದ ವಿದ್ಯಾರ್ಥಿಗಳಿಗೆ, ಬಡ ಕುಟುಂಬಗಳಿಗೆ ಸುಮಾರು ಐನೂರಕ್ಕೂ ಹೆಚ್ಚು ದಿನಸಿ ಕಿಟ್‌ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೊರೋನಾ ರೋಗಿಗಳ ಸೇವೆಗಾಗಿ ಆಕ್ಸಿಜನ್ ವ್ಯಾನ್ ನೀಡಿದ ಅರುಣ್ ಗೌಡ!
ಅಭಯ್‌ವೀರ್ ಅವರ ಸರ್ವೇಜನೋ ಸುಖಿನೋ ಭವಂತು ತಂಡದಿಂದ ಬೆಂಗಳೂರಿನಲ್ಲೂ ಸಹ ಸಂಕಷ್ಟದಲ್ಲಿರುವ ನೂರಾರು ಚಲನಚಿತ್ರ ಕಾರ್ಮಿಕರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದ್ದಾರೆ. ಸಚಿನ್‌ಗೌಡ ಪಾಟೀಲ್, ಸುನೀಲ್, ಮಣಿಕಂಠ ಸೇರಿದಂತೆ ಇನ್ನೂ ಹಲವಾರು ಮಂದಿ ಅಭಯ್‌ವೀರ್ ಕೆಲಸಕ್ಕೆ ಕೈಜೋಡಿಸಿದ್ದಾರೆ.
