Asianet Suvarna News Asianet Suvarna News

ಕಾಟೇರನಿಗೆ ಕಂಟಕ, ಲೇಟ್‌ ನೈಟ್‌ ಪಾರ್ಟಿಯಲ್ಲಿದ್ದ ನಟ ದರ್ಶನ್, ಡಾಲಿ ಧನಂಜಯ್‌ ಸೇರಿ 8 ಮಂದಿಗೆ ನೊಟೀಸ್‌!

ಜೆಟ್ ಲಾಗ್ ಪಬ್‌ನಲ್ಲಿ  ಅವಧಿ ಮೀರಿ ಪಾರ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌   ಸೇರಿ ಸ್ಯಾಂಡಲ್‌ವುಡ್‌ನ 8 ಮಂದಿಗೆ ನೋಟಿಸ್‌ ನೀಡಲಾಗಿದೆ.

Kaatera Movie success party at Jetlag Bar Bengaluru police send notice to actor Darshan gow
Author
First Published Jan 8, 2024, 4:34 PM IST

ಬೆಂಗಳೂರು (ಜ.8): ಜೆಟ್ ಲಾಗ್ ಪಬ್‌ನಲ್ಲಿ  ಅವಧಿ ಮೀರಿ ಪಾರ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌   ಸೇರಿ 8 ಮಂದಿಗೆ ನೋಟಿಸ್‌ ನೀಡಲಾಗಿದೆ. ನಟ ದರ್ಶನ್‌ ಅವರ ಕಾಟೇರ ಸಿನೆಮಾ ಇತ್ತೀಚೆಗೆ ಬಿಡುಗಡೆಯಾಗಿ ಸಕ್ಸಸ್ ಕಂಡಿದ್ದು, ಈ ಹಿನ್ನೆಲೆಯಲ್ಲಿ  ಜೆಟ್ ಲಾಗ್  ಸ್ಯಾಂಡಲ್‌ವುಡ್‌ ನ ಹಲವು ಮಂದಿ ಪಾರ್ಟಿ ಮಾಡಿದ್ದರು. ಕೆಲವರು ಪಾರ್ಟಿ ಮಾಡಿ ತೆರಳಿದ್ದರು. ಆದರೆ ಅವಧಿ ಮೀರಿ ಪಾರ್ಟಿ ಮಾಡಿದ ನಟರಾದ ದರ್ಶನ್,   ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ , ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಟ ನೀನಾಸಂ ಸತೀಶ್, ಡಾಲಿ ಧನಂಜಯ್,  ಅಭಿಶೇಕ್ ಅಂಬರೀಷ್ ಹಾಗೂ ಚಿಕ್ಕಣ್ಣ ಗೆ ನೋಟೀಸ್  ನೀಡಿ  ವಿಚಾರಣೆಗೆ ಹಾಜರಾಗುವಂತೆ  ತಿಳಿಸಲಾಗಿದೆ ಎಂದು ಸುದ್ದಿಯಾಗಿದೆ.

ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ನಟ ದರ್ಶನ್ ಗೆ ನೀಡಿರುವ ನೋಟೀಸ್ ಕಾಫಿ ಲಭ್ಯವಾಗಿದೆ. ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದ್ದು, ಇಂದು 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿತ್ತು. ಆದರೆ ದರ್ಶನ್‌ ವಿಚಾರಣೆಗೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ. ಸದ್ಯ ನೋಟೀಸ್ ಕೊಟ್ಟಿರುವ ಬಹುತೇಕರು ದುಬೈನಲ್ಲಿರುವ ಬಗ್ಗೆ  ಮಾಹಿತಿ ಇದ್ದು, ನೋಟೀಸ್ ತಲುಪಿದ ಕೂಡಲೇ ವಿಚಾರಣೆಗೆ ಸುಬ್ರಮಣ್ಯನಗರ ಠಾಣೆಗೆ ಹಾಜರಾಗುವಂತೆ ಹಾಜರಾಗಲು ತಿಳಿಸಲಾಗಿದೆ.

ಸ್ಟಾರ್‌ ನಟನ ಸಿನೆಮಾ ಸಕ್ಸಸ್‌ ಎಣ್ಣೆ ಪಾರ್ಟಿ ಪ್ರಕರಣ, ಸ್ಯಾಂಡಲ್‌ವುಡ್‌ ಹಲವು ತಾರೆಯರಿಗೆ ವಿಚಾರಣೆ ಟೆನ್ಶನ್

ಕಳೆದ ಜನವರಿ 3ರಂದು  ರಾತ್ರಿ ಮೂರು ಗಂಟೆಯವರೆಗೂ ನೀವೂ ಜೆಟ್ ಲಾಗ್ ನಲ್ಲಿರುವುದು ತಿಳಿದು ಬಂದಿದೆ. ಪ್ರಕರಣದ ಮುಂದಿನ ತನಿಖೆಗಾಗಿ ನಿಮ್ಮ ಹೇಳಿಕೆ ಪಡೆಯಬೇಕು.   ಪ್ರಕರಣ ಸಂಬಂಧ ನಿಮ್ಮನ್ನು ಕೂಲಂಕುಷವಾಗಿ ವಿಚಾರಣೆ ಮಾಡಬೇಕಿದೆ. ಜೊತೆಗೆ ನಿಮ್ಮಿಂದ ಹೇಳಿಕೆ ಕೂಡ ಪಡೆಯಬೇಕಿದೆ ಎಂದು CRPC 160 ರ ಅಡಿಯಲ್ಲಿ  ಪೊಲೀಸರು ನೊಟೀಸ್ ಜಾರಿ ಮಾಡಿದ್ದಾರೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ನೋಟೀಸ್ ನಲ್ಲಿ ಪಬ್ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆಯೂ ಉಲ್ಲೇಖವಿದೆ.

ಹಾಲಿವುಡ್‌ ರೇಂಜ್‌ನಲ್ಲಿ ಉಪ್ಪಿಯ UI ಟೀಸರ್, ಬಿಡುಗಡೆಯಾದ 1 ಗಂಟೆಯಲ್ಲಿ 3 ಲಕ್ಷ ವೀಕ್ಷಣೆ!

ಸುಬ್ರಮಣ್ಯನಗರ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಈಗಾಗಲೇ  ಕ್ಲೋಸಿಂಗ್ ಟೈಮ್ ಮುಗಿದರೂ ಅಲ್ಲೇ ಪಾರ್ಟಿಗೆ ಅವಕಾಶ ನೀಡಿದ ಹಿನ್ನೆಲೆ ಜಟ್ಲಾಗ್  ರೆಸ್ಟೋಬಾರ್ ಮಾಲೀಕರಾದ ಶಶಿರೇಖಾ ಮತ್ತು ಮ್ಯಾನೇಜರ್‌ ಪ್ರಶಾಂತ್ ವಿರುದ್ದ  ಎಫ್ಐಆರ್ ದಾಖಲು ಮಾಡಲಾಗಿದೆ.

Follow Us:
Download App:
  • android
  • ios