ಸೋಷಿಯಲ್ ಮೀಡಿಯಾದಲ್ಲಿ ಈ 7 ಕಾಮೆಂಟ್‌ಗಳಿಂದ ಖ್ಯಾತ ಗಾಯಕ ಸೋನು ನಿಗಮ್ ಟ್ರೋಲ್ ಆಗಿ, ಜನರ ವೈಮನಸ್ಸಿಗೆ ಕಾರಣರಾಗಿದ್ದರು. 

ಭಾರತೀಯ ಚಿತ್ರರಂಗ ಕಂಡ ಅದ್ಭುತ ಗಾಯಕ ಸೋನು ನಿಗಮ್‌ ಕಾಂಟ್ರವರ್ಸಿಗೆ ಹೊಸಬರಲ್ಲ. ಹಿಂಪಾದ ಧ್ವನಿಯಿಂದ ಎಷ್ಟು ಗಮನ ಸೆಳೆಯುತ್ತಾರೋ ಅಷ್ಟೇ ತಮ್ಮ ನೇರ ನುಡಿಯಿಂದ ಕೆಲವೊಮ್ಮೆ ಟೀಕೆ ಟಿಪ್ಪಣಿಗಳಿಗೆ ಒಳಗಾಗುತ್ತಾರೆ. ಸಿನಿಮಾ ಹಾಡುಗಳು, ಬಿಗ್ ಬಜೆಟ್ ಸಂಗೀತ ಕಾರ್ಯಕ್ರಮಗಳು ಮಾತ್ರವಲ್ಲದೇ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಮಿಂಚಿದ್ದಾರೆ. ಈ ನಡುವೆ ಸೋನು ನೀಡಿದ ಕೆಲವೊಂದು ಹೇಳಿಕೆ ಹಾಗೂ ಕಾಮೆಂಟ್‌ಗಳು ದೊಡ್ಡ ಹೆಡ್‌ಲೈನ್ಸ್‌ ಕ್ರಿಯೇಟ್ ಮಾಡಿತ್ತು.

ರಿಯಾಲಿಟಿ ಶೋ:
ಸರಿಗಮಪ ಹಾಗೂ ಇಂಡಿಯನ್ ಐಡಲ್ ಸಂಗೀತ ರಿಯಾಲಿಟಿ ಶೋ ತೀರ್ಪುಗಾರರಾಗಿದ್ದ ಸೋನು ಕಾರ್ಯಕ್ರಮದ ಬಗ್ಗೆ ಖಾಸಗಿ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು. 'ನಾವು ತೀರ್ಪುಗಾರರಾಗಿ ಸ್ಪರ್ಧಿಗಳಿಗೆ ಒಳ್ಳೆಯದನ್ನು ಹೇಳಿಕೊಡಬೇಕು ಹೀಗಾಗಿ ಪ್ರಾಮಾಣಿಕವಾಗಿ ನಮ್ಮ ಅಭಿಪ್ರಾಯ ತಿಳಿಸಬೇಕು ಆದರೆ ಕೆಲವೊಬ್ಬರ ಒತ್ತಾಯದಿಂದ ಹೊಗಳಿದರೆ ಯಾವ ಉಪಯೋಗ ಇರುವುದಿಲ್ಲ' ಎಂದಿದ್ದರು.

ಮಾಸ್ಕ್:

ಸೋನು ರಕ್ತದಾನ ಮಾಡುವಾಗ ಮಾಸ್ಕ್ ಧರಿಸದ ಕಾರಣ ನೆಟ್ಟಿಗರು ಪ್ರಶ್ನೆ ಮಾಡಿದ್ದರು. ' ಕಾಮೆಂಟ್ ಮಾಡಿದ ಐನ್‌ಸ್ಟೈನ್‌, ನೀನು ಬಳಸಿದ ಭಾಷೆಯಲ್ಲಿ ನಾನು ಉತ್ತರ ನೀಡುವೆ. (ಬೀಪ್ ಪದಗಳು). ರಕ್ತ ದಾನ ಮಾಡುವಾಗ ಯಾರೂ ಮಾಸ್ಕ್ ಧರಿಸುವಂತಿಲ್ಲ ಅದನ್ನು ತಿಳಿದುಕೊಳ್ಳಿ. ಎಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಾ?' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ಪಬ್ಲಿಕ್‌ನಲ್ಲಿ ಲಿಪ್‌ಲಾಕ್‌ ಮಾಡಿ ಟ್ರೋಲ್‌ ಆದ ಮುಂಗಾರು ಮಳೆ ಗಾಯಕ

ಪುತ್ರ:

ಪುತ್ರ ಗಾಯಕನಾಗುವುದು ಬೇಡ ಎಂದು ಹೇಳಿದ್ದಾರೆ. 'ನಿಜವಾಗಿಯೂ ನನ್ನ ಪುತ್ರ ವೃತ್ತಿಯಲ್ಲಿ ಗಾಯಕನಾಗುವುದು ನನಗೆ ಇಷ್ಟವಿಲ್ಲ. ಅದರಲ್ಲೂ ಈ ದೇಶದಲ್ಲಿ ಬೇಡ. ಅವನು ಭಾರತದಲ್ಲಿ ಇಲ್ಲ, ದುಬೈನಲ್ಲಿ ವಾಸವಿದ್ದಾನೆ. ಹುಟ್ಟುತ್ತಲೇ ಅವನು ಗಾಯಕ. ಆದರೆ ಅವನಿಗೆ ಬೇರೆ ವಿಚಾರಗಳಲ್ಲೂ ಆಸಕ್ತಿ ಇದೆ' ಎಂದಿದ್ದರು. 

ಶೋಗಳ ಅಸಲಿ ಮುಖ:

ನಿರ್ದೇಶಕ ವಿವೇಕ್ ರಾಜನ್‌ ಜೊತೆ ಮಾತನಾಡುವಾಗ ರಿಯಾಲಿಟಿ ಶೋಗಳು ಮಾಡುವ ಗಿಮಿಕ್‌ಗಳ ಬಗ್ಗೆ ರಿವೀಲ್ ಮಾಡಿದ್ದಾರೆ. 'ಕೆಲವೊಂದು ಕಾರ್ಯಕ್ರಮಗಳಲ್ಲಿ ಗಾಯಕರಿಗೆ ಹಾಡಲು ಬಿಡುವುದಿಲ್ಲ ಬದಲಿಗೆ ಹಾಡು ಪ್ರಸಾರ ಮಾಡುತ್ತಾರೆ ಡಬ್ ಮಾಡಬೇಕು. ಯಾವ ತಪ್ಪುಗಳನ್ನು ತೋರಿಸಲು ಇಷ್ಟ ಪಡುವುದಿಲ್ಲ ಎಲ್ಲವೂ ಕರೆಕ್ಟ್ ಇರಬೇಕು' ಎಂದು ಹೇಳಿದ್ದಾರೆ. 

ಮ್ಯೂಸಿಫ್ ಮಾಫಿಯಾ:

'ಶೀಘ್ರವೇ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಜನರು ಸಾಯುವುದನ್ನು ನೀವು ನೋಡಬಹುದು. ಚಿಕ್ಕ ವಯಸ್ಸಿಗೆ ಇಂಡಸ್ಟ್ರಿಗೆ ಕಾಲಿಟ್ಟು ಪುಣ್ಯ ಮಾಡಿದೆ. ಇನ್ನು 15 ವರ್ಷ ನನಗೆ ಹಾಡಲು ಅವಕಾಶ ನೀಡದಿದ್ದರೂ ಪರ್ವಾಗಿಲ್ಲ ನನಗೆ ಮತ್ತೊಂದು ಪ್ರಪಂಚವಿದೆ ಆದರೆ ಈಗ ಬರುತ್ತಿರುವ ಗಾಯಕರಲ್ಲಿ ಆಕ್ರೋಶ ನೋಡಿದ್ದೀನಿ. ಗೆಲ್ಲಬೇಕು ಎನ್ನುವ ಹಠವಿದೆ ಆದರೆ ಇಂಡಸ್ಟ್ರೀ ಜನರಲ್ಲಿ ರಕ್ತ ಕಣ್ಣೀರು ಬರಿಸುತ್ತಿದ್ದಾರೆ' ಎಂದಿದ್ದಾರೆ.

ತೆರೆ ಮೇಲೆ ಆದೃಷ್ಟ ಪರೀಕ್ಷಿಸಲು ಹೋಗಿ ಫ್ಲಾಪ್‌ ಆದ ಸಿಂಗರ್ಸ್‌!

ಆಜಾನ್ ಟ್ಟೀಟ್:

'ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ನಾನು ಮುಸ್ಲಿಂ ಅಲ್ಲ ಆದರೆ ದಿನ ಬೆಳಗ್ಗೆ ಆಜಾನ್ ಕೇಳಬೇಕು. ಭಾರತದಲ್ಲಿ ಬಲವಂತದ ಧಾರ್ಮಿಕತೆ ಯಾವಾಗ ಕೊನೆಗೊಳ್ಳುತ್ತದೆ' ಎಂದು ಟ್ಟೀಟ್ ಮಾಡಿದ್ದರು.

ಖಾತೆ ಡಿಲೀಟ್:

ಆಖಾನ್ ಟ್ಟೀಟ್ ನಂತರ ಸೋನು ನಿಗಮ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ 2017ರಲ್ಲಿ ಟ್ಟಿಟರ್ ಖಾತೆ ಡಿಲೀಟ್ ಮಾಡಿದ್ದರು.