ಈ ಚಿತ್ರದ ಹೆಸರು. ‘ಎಂಬಿಎ’. ಹಾಗಂತ ಇದು ಎಂಬಿಎ ಓದುತ್ತಿರುವ ಅಥವಾ ಓದಿರುವವರ ಕತೆನಾ ಎಂದರೆ ಸಿನಿಮಾ ನೋಡಬೇಕು ಎನ್ನುತ್ತದೆ ಚಿತ್ರತಂಡ. ಹೀಗೆ ಹೇಳುವ ಮುನ್ನ ಅವರು ಚಿತ್ರದ ಟ್ರೇಲರ್ ಪ್ರದರ್ಶನ ಮಾಡಿದರು.
ಡಬಲ್ ಮೀನಿಂಗ್ ಡೈಲಾಗ್‌ಗಳಿಗೆ ಬ್ರಾಂಡ್ ಅಂಬಾಸಿಡರ್‌ನಂತೆ ಇಡೀ ಟ್ರೇಲರ್ ಮೂಡಿ ಬಂದಿದೆ. ಯುವ ಜನರ ವಿಲಾಸಿ ಜೀವನ, ಶೋಕಿಗಳ ಸುತ್ತ ಟ್ರೇಲರ್ ರೂಪಿಸಿದ್ದು, ‘ಎಂಬಿಎ’ ವಿದ್ಯಾರ್ಥಿಗಳೆಲ್ಲ ಹೀಗೆ ಇರುತ್ತಾರೆಯೇ ಎಂದರೆ ‘ನಿಜವಾಗಲೂ ಎಂಬಿಎ ಎನ್ನುವ ಮೂರು ಅಕ್ಷರಕ್ಕೆ ಬೇರೆಯದ್ದೇ ಅರ್ಥವಿದೆ. ಇದು ಎಂಬಿಎ ವಿದ್ಯಾರ್ಥಿಗಳ ಕತೆನಾ, ಅಲ್ವಾ ಎಂಬುದನ್ನು ನೀವು ಸಿನಿಮಾ ನೋಡಬೇಕು. ಹೊಸ ರೀತಿಯ ಪ್ರೇಮ ಕತೆಯನ್ನು ಹೇಳಿದ್ದೇನೆ’ ಎಂದರು ನಿರ್ದೇಶಕ ಹೆಚ್‌ಪಿ.
ಇನ್ನು ಹೌಸ್‌ಫುಲ್ ಗ್ಯಾರಂಟಿ, ಶುರುವಾಯಿತು ಸ್ಟಾರ್ ಸಿನಿಮಾಗಳ ಭರಾಟೆ!
ಚಿತ್ರದ ಟೈಟಲ್‌ಗೆ ಬೇರೆ ಬೇರೆ ಅರ್ಥವಿದ್ದು, ಸರಿಯಾದ ಉತ್ತರ ಕಳುಹಿಸಿದವರಿಗೆ ಚಿತ್ರತಂಡ 50 ಸಾವಿರ ಬಹುಮಾನ ಕೂಡ ಘೋಷಣೆ ಮಾಡಿದೆ. ‘ಮೆಂಬರ್ ಆಫ್ ಬ್ಯಾಡ್ ಆಕ್ಟಿವಿಟೀಸ್’, ‘ಮೈಸೂರು ಬಾಯ್‌್ಸ ಅಸೋಸಿಯೇಶನ್’, ‘ಮಂಡ್ಯ ಬಾಯ್‌್ಸ ಅಸೋಸಿಯೇಶನ್’ ಹೀಗೆ ಹಲವು ರೀತಿ ಉತ್ತರಗಳು ಬಂದಿವೆಯಂತೆ. ಇದರಲ್ಲಿ ಯಾವುದು ಎಂಬುದನ್ನು ಸಿನಿಮಾದಲ್ಲಿ ಹೇಳಿದ್ದಾರಂತೆ. ಕಾಲೇಜಿನಲ್ಲಿ ನಡೆಯುವ ಸಸ್ಪೆನ್ಸ್ ಹಾಗೂ ಥ್ರಿಲ್ಲರ್, ಮರ್ಡರ್ ಮಿಸ್ಟರಿ ಸುತ್ತ ಈ ಸಿನಿಮಾ ಸಾಗುತ್ತದೆ. ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ಸಂಭಾಷಣೆಗಾರ ಮಳವಳ್ಳಿ ಸಾಯಿಕೃಷ್ಣ ಅವರು. ಪಬ್ಲಿಕ್ ಪ್ರೊಡಕ್ಷನ್ ಐಎನ್‌ಸಿ ಮೂಲಕ ಈ ಚಿತ್ರವನ್ನು ನಿರ್ಮಿಸಲಾಗಿದೆ.
"
ಪುನೀತ್‌ಗೌಡ, ಗೂಳಿಸೋಮ, ಕಾವ್ಯಗೌಡ, ಸೌಮ್ಯಶಾನ್‌ಭೋಗ್ ಚಿತ್ರದ ನಾಯಕ ನಾಯಕಿ. ಹರ್ಷಕಾಗೋಡು ಸಂಗೀತ ಸಂಯೋಜಿಸಿದ್ದಾರೆ. ದರ್ಶನ್‌ದೇವ್ ಛಾಯಾಗ್ರಾಹಣ ಚಿತ್ರಕ್ಕಿದೆ. ಮಾಚ್‌ರ್ ಮೊದಲ ವಾರ ಥಿಯೇಟರ್ ಹಾಗೂ ಓಟಿಟಿಯಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 5, 2021, 10:17 AM IST