ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರ ಕೊಟ್ಟ ಕಿಚ್ಚ. ದಚ್ಚು ಬಗ್ಗೆ ಕೇಳಿರುವ ಎರಡೂ ಪ್ರಶ್ನೆಗೆಳಿ ಉತ್ತರ ಕೊಟ್ಟು ಅಭಿಮಾನಿಗಳಿಗೆ ಹತ್ತಿರವಾದ ನಟ....

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇತ್ತೀಚಿಗೆ #AskMeAnything ಅಂತೇಳಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡುತ್ತಾರೆ. ಅಭಿಮಾನಿಗಳು ಕಿಚ್ಚನನ್ನು ಕೇಳಬೇಕು ಅಂದುಕೊಂಡಿರುವ ಪ್ರಶ್ನೆಗಳನ್ನು ಇಲ್ಲಿ ಪೋಸ್ಟ್‌ ಮಾಡುತ್ತಾರೆ, ಅದನ್ನು ರೀ-ಟ್ವೀಟ್ ಮಾಡಿಕೊಂಡು ಕಿಚ್ಚ ಉತ್ತರ ಕೊಡುತ್ತಾರೆ. ಬಿಗ್ ಬಾಸ್, ಮುಂದಿನ ಸಿನಿಮಾ ಪ್ರಾಜೆಕ್ಟ್‌ಗಳು, ಸಿನಿಮಾ ಶೂಟಿಂಗ್, ಅಡುಗೆ ಹೀಗೆ ಡಿಫರೆಂಟ್ ಡಿಫರೆಂಟ್ ವಿಚಾರಗಳ ಬಗ್ಗೆ ಅಭಿಮಾನಿಗಳು ಪ್ರಶ್ನೆ ಕೇಳುತ್ತಾರೆ. ಆದರೆ ಇಂದು ಅಭಿಮಾನಿಗಳಿಬ್ಬರು ನಟ ದರ್ಶನ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ. 

ಹೌದು! ನಟ ದರ್ಶನ್ ಮತ್ತು ಸುದೀಪ್ ಆತ್ಮೀಯ ಸ್ನೇಹಿತರು ಆಗಿದ್ದರು ಅನ್ನೋ ವಿಚಾರ ಎಲ್ಲರಿಗೂ ಗೊತ್ತಿದೆ. ಯಾವ ಕಾರಣಕ್ಕೆ ಜಗಳ ಆಯ್ತು, ಯಾವ ಕಾರಣಕ್ಕೆ ಮುಂದು ಬಿತ್ತು, ಯಾವ ಕಾರಣಕ್ಕೆ ಅಭಿಮಾನಿಗಳ ನಡುವೆ ಜಗಳ ಆಗುತ್ತಿದೆ ಎಂದು ಈ ಕ್ಷಣದವರೆಗೂ ಯಾರಿಗೂ ಕ್ಲಾರಿಟಿ ಇಲ್ಲ. ಅದರೆ ಎಂದೂ ಒಬ್ಬರನ್ನೊಬ್ಬರು ಬೈದುಕೊಂಡು ಓಡಾಡಿಲ್ಲ, ಎಂದೂ ಕೆಟ್ಟದನ್ನು ಬಯಸದೆ ಪರೋಕ್ಷವಾಗಿ ಪ್ರೀತಿ ಮತ್ತು ಸಪೋರ್ಟ್ ಮಾಡಿಕೊಂಡು ಇದ್ದಾರೆ. ಕರುನಾಡ ಕುವರ ವಿಷ್ಣು ಹೆಸರಿನ ಟ್ವಿಟರ್‌ ಅಕೌಂಟ್‌ ವ್ಯಕ್ತಿ 'ಸರ್ ನಿಮ್ದು ಮತ್ತೆ ದರ್ಶನ್ ಅವರದು ಸಮಸ್ಯೆನ ಯಾವಾಗ solve ಮಾಡ್ಕೋತೀರಾ ಇನ್ನು ಎಷ್ಟು ಟೈಮ್ ತಗೋತೀರಾ' ಎಂದು ಪ್ರಶ್ನಿಸಿದ್ದರು. 'ಸಮಸ್ಯೆ ಏನು ಅಂತ ಇಬ್ರು ಹುಡುಕುತ್ತಾ ಇದ್ದೀವಿ' ಎಂದು ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದರು.

ನಾನು ನೋಡಿಲ್ಲ ಅಂತ ನಿಮಗ್ಯಾರೂ ಹೇಳಿಲ್ಲವೇ!; 'ಕಾಟೇರ' ಚಿತ್ರದ ಬಗ್ಗೆ ಸುದೀಪ್ ಗೊಂದಲದ ಹೇಳಿಕೆ!

ಸುದೀಪ್‌ ಎಂಬ ಮತ್ತೊಬ್ಬ ಅಭಿಮಾನಿ ದರ್ಶನ್‌ ಮತ್ತು ಕಿಚ್ಚ ತಬ್ಬಿಕೊಂಡಿರುವ ಫೋಟೋ ಹಂಚಿಕೊಂಡು 'ದಾಸ ದರ್ಶನ್‌ ಬಗ್ಗೆ ಒಂದು ಪದ ಹೇಳಿ' ಎಂದು ಮನವಿ ಮಾಡಿದ್ದರು. ಆಗ ತಬ್ಬಿಕೊಳ್ಳುವ ಎಮೋಜಿ ಜೊತೆಯಲಿ '..i wsh him the best always' ಎಂದು ಬರೆದುಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣ ತುಂಬಾ ಇವರಿಬ್ಬರ ಫೋಟೋ ಮತ್ತು ಈ ಟ್ವೀಟ್‌ಗಳು ವೈರಲ್ ಆಗುತ್ತಿದೆ. ಅಲ್ಲದೆ ಈ ಎರಡು ಟ್ವೀಟ್‌ಗಳಿಗೆ ದರ್ಶನ್‌ ಪ್ರತಿಕ್ರಿಯೆ ನೀಡಬೇಕು ಎಂದು ಆಶಿಸುತ್ತಿದ್ದಾರೆ. 

ನಿನಗಾ ಇಬ್ರು ಮಕ್ಕಳು?; ನಟ ದರ್ಶನ್ ರಿಯಾಕ್ಷನ್ ರಿವೀಲ್ ಮಾಡಿದ ಅಮೂಲ್ಯ