Asianet Suvarna News Asianet Suvarna News

ನಾನು ಕನ್ವರ್ಟೆಡ್‌ ಕ್ರಿಶ್ಚಿಯನ್ ಅನ್ನೋದು ಧೈರ್ಯದಿಂದ ಹೇಳುತ್ತೀನಿ: ನಟಿ ಮಹಾಲಕ್ಷ್ಮಿ

ಅಮರ್ ಚಿತ್ರದ ನಂತರ ಸಖತ್ ಸುದ್ದಿಯಲ್ಲಿರುವ ಮಹಾಲಕ್ಷ್ಮಿ. 30 ವರ್ಷಗಳ ನಂತರ ಮಾಡುತ್ತಿರುವ ಬಿಗ್ ಕಮ್‌ ಬ್ಯಾಕ್ ಹೇಗಿದೆ.....

I am converted Christian says kannada actress Mahalakshmi vcs
Author
First Published Sep 25, 2023, 10:30 AM IST

ಕನ್ನಡ ಚಿತ್ರರಂಗದಲ್ಲಿ ಮಿಂಚಿರುವ ಹೆಸರಾಂತ ನಾಯಕಿ ಮಹಾಲಕ್ಷ್ಮಿ 30 ವರ್ಷಗಳ ನಂತರ ಮತ್ತೆ ಕಿರುತೆರೆ ಮತ್ತು ಬೆಳ್ಳಿ ತೆರೆಗೆ ಕಾಲಿಡುತ್ತಿದ್ದಾರೆ. ಈ ನಡುವೆ ಮಾಧ್ಯಮಗಳ ಜೊತೆ ಮಾತನಾಡಿ ತಾವು ಕನ್ವರ್ಟ್‌ ಆಗಿರುವುದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. 

'ಗಾಳಿ ಮಾತುಗಳಿಗೆ ನಾನು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ರೂಮರ್‌ ಎಂದು ಹೇಳುವುದು ಯಾಕೆ? ಅದು ಸತ್ಯ ಅಥವಾ ಸುಳ್ಳು ಎರಡೂ ಆಗಿರಬಹುದು. ಖಂಡಿತವಾಗಿಯೂ ನಾನು ಗಾಸಿಪ್‌ಗಳಿಗೆ ತಲೆ ಕೊಡುವುದಿಲ್ಲ ನಿರ್ಲಕ್ಷ್ಯ ಮಾಡುತ್ತೀನಿ. ನಾನು ಕ್ರಿಶ್ಚಿಯನ್...ಕನ್ವರ್ಟೆಡ್‌ ಕ್ರಿಶ್ಚಿಯನ್ ಅನ್ನೋ ವಿಚಾರವನ್ನು ಧೈರ್ಯವಾಗಿ ಹೇಳುತ್ತೀನಿ. ನನ್ನ ಬಗ್ಗೆ ಬಂದಿರುವ ಸುದ್ದಿಗಳು ಎಲ್ಲಾ ಗಾಸಿಪ್‌ಗಳು ಎಂದು ಈಗಾಗಲೆ ಹಲವು ಮಾಧ್ಯಮಗಳ ಮೂಲಕ ಸ್ಪಷ್ಟನೆ ಕೊಟ್ಟಿದ್ದೀನಿ. ನಾನು Nun ಆಗಿರುವುದು ಶುದ್ಧ ಸುಳ್ಳು ಹಾಗೆ ಸಾಧ್ಯವೂ ಇಲ್ಲ ಏಕೆಂದರೆ ನಾನು ಪಕ್ಕಾ ಫ್ಯಾಮಿಲಿ ಮಹಿಳೆ' ಎಂದು ಮಹಾಲಕ್ಷ್ಮಿ ಮಾತನಾಡಿದ್ದಾರೆ.

ಮೊದಲ ಸಲ ಸಾಬೀತು ಮಾಡಿಲ್ಲ ಅಂದ್ರೆ ದಾರಿ ಗೊತ್ತಾಗದಂತೆ ಹೂಳುತ್ತಾರೆ: ಪುತ್ರಿಯರ ಬಗ್ಗೆ ದುನಿಯಾ ವಿಜಯ್

'ಅಮರ್ ಸಿನಿಮಾದಲ್ಲಿ ನನ್ನ ಜೀವನದ ಕಥೆ ಹಿಡಿದುಕೊಂಡು ಸಿನಿಮಾ ಮಾಡಿರುವುದು ಎನ್ನುತ್ತಾರೆ ಆದರೆ ಸಿನಿಮಾ ಅನ್ನೋದು ನಿರ್ದೇಶಕರ ಇಮ್ಯಾಜಿನೇಷಕ್ ಅದರ ಬಗ್ಗೆ ನಾನು ಏನೂ ಹೇಳುವುದಕ್ಕೆ ಆಗಲ್ಲ. ಸಿನಿಮಾ ರಿಲೀಸ್ ಆದ ಮೇಲೆ ಜನರು ಮಾತನಾಡಿದ್ದರು. ಚಿತ್ರತಂಡದವರನ್ನು ಸಂಪರ್ಕಿಸಿ ಈ ವಿಚಾರದ ಬಗ್ಗೆ ಕೇಳುವ ಪ್ರಯತ್ನ ಕೂಡ ಮಾಡಲಿಲ್ಲ ಅದೆಲ್ಲಾ ಸಮಯ ವ್ಯರ್ಥ ಮಾಡುತ್ತದೆ' ಎಂದು ಮಹಾಲಕ್ಷ್ಮಿ ಹೇಳಿದ್ದಾರೆ. 

ಹುಡುಗಿ ಚೇಂಜ್ ಆದ್ರೂ ಡ್ರೆಸ್ ಚೇಂಜ್ ಆಗಿಲ್ಲ; ರಕ್ಷಿತ್ ಶೆಟ್ಟಿಗೆ ಎಚ್ಚರಿಕೆ ಕೊಟ್ಟ ನೆಟ್ಟಿಗರು!

'ನನ್ನ ಜೀವನ ಚೆನ್ನಾಗಿದೆ. ನನ್ನ ಫ್ಯಾಮಿಲಿಯನ್ನು ಕ್ಯಾಮೆರಾ ಮುಂದೆ ತರುವುದಿಲ್ಲ ನನಗೆ ಇಷ್ಟವಿಲ್ಲ ವೈಯಕ್ತಿಕ ಮತ್ತು ವೃತ್ತಿ ಜೀವನ ಬೇರೆ ಬೇರೆ. ಗಾಸಿಪ್‌ಗಳು ಸಾಕಷ್ಟು ಇರುತ್ತದೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅಮರ್ ಸಿನಿಮಾದಲ್ಲಿ ನನ್ನ ಕಥೆ ಹಾಗೆ ಹೀಗೆ ಎಂದು ಮಾಡುತ್ತಿದ್ದರು ಅದು ಸುಳ್ಳು ನಾನು ಪಾದ್ರಿಯಾಗಿಲ್ಲ ನನಗೆ ಫ್ಯಾಮಿಲಿ ಇದೆ ಖುಷಿಯಾಗಿದ್ದೀನಿ ಹೀಗಿರುವಾಗ ನಾನು ಯಾಕೆ  ತಲೆ ಕೆಡಿಸಿಕೊಂಡು ವಿಚಾರಿಸಬೇಕು. ನಾನು 20 ವರ್ಷ ಇದ್ದಾಗ ಮದುವೆ ಮಾಡಿಕೊಂಡೆ ನನಗೆ ಇಬ್ಬರು ಮಕ್ಕಳಿದ್ದಾರೆ ಜೀನದಲ್ಲಿ ಖುಷಿಯಾಗಿದ್ದೀವಿ ಚೆನ್ನಾಗಿ ಓದಿಕೊಂಡು ಕೆಲಸ ಮಾಡುತ್ತಿದ್ದಾರೆ. ನನ್ನ ಜೀವನದಲ್ಲಿ ಪಾದ್ರಿಯಾಗಲು ಸಮಯವಿಲ್ಲ. ಕ್ಯಾಥಲಿಕ್‌ ಹಾಸ್ಟಲ್‌ನಲ್ಲಿ ಬೆಳೆದಿರುವ ಕಾರಣ ನನಗೆ ಜೀಸಸ್‌ ಮೇಲೆ ತುಂಬಾ ಪ್ರೀತಿ ಇದೆ  ಹೀಗಾಗಿ ಚರ್ಚ್‌ಗೆ ಭೇಟಿ ನೀಡುತ್ತಿದ್ದೆ. ನನ್ನ ಬಾಲ್ಯದಿಂದ ನಾನು ಬೈಬಲ್ ಓದಿಕೊಂಡು ಬಂದಿರುವೆ' ಎಂದಿದ್ದಾರೆ ಮಹಾಲಕ್ಷ್ಮಿ. 

Follow Us:
Download App:
  • android
  • ios