777 ಚಾರ್ಲಿ ಟೀಸರ್‌ ವೈರಲ್‌ ಆಗುತ್ತಿದೆ. ಹಿಂದಿಯಲ್ಲೂ 6 ಮಿಲಿಯನ್‌ ವ್ಯೂವ್ ದಾಖಲಿಸಿದೆ. ಈ ಟೀಸರ್‌ನಲ್ಲಿ ಮುಖ್ಯ ಆಕರ್ಷಣೆ ಚಾರ್ಲಿ ಎಂಬ ನಾಯಿಯದ್ದು. ಆದರೆ ಒಂದು ಕಾಲಕ್ಕೆ ಇದು ಯಾರಿಗೂ ಬೇಡದ ನಾಯಿಯಾಗಿತ್ತು! 

777 ಚಾರ್ಲಿ ಸಿನಿಮಾದ ಟೀಸರ್‌ ರಿಲೀಸ್‌ ಆಗಿ ಬಹಳ ದಿನವಾಯ್ತು. ಈ ಟೀಸರ್‌ ನೋಡಿದವರೆಲ್ಲ ಇದರಲ್ಲಿ ಬರುವ ಚಾರ್ಲಿ ನಾಯಿಯ ಫ್ಯಾನ್‌ಗಳಾಗಿದ್ದಾರೆ. ಆ ಲೆವೆಲ್‌ಗೆ ಈ ಚಾರ್ಲಿ ಪರ್ಫಾಮೆನ್ಸ್ ಮೆರೆದಿದೆ. ನಾಯಿಯನ್ನೇ ಮುಖ್ಯವಾಗಿಟ್ಟುಕೊಂಡು ಹಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ ಕನ್ನಡದಲ್ಲಿ ಅಂಥಾ ಸಿನಿಮಾಗಳು ಕಾಣ ಸಿಗೋದಿಲ್ಲ. ಈ ಹಿನ್ನೆಲೆಯಲ್ಲಿ 777 ಚಾರ್ಲಿ ಹೊಸ ಬಗೆಯ ಸಿನಿಮಾ. ಚಾರ್ಲಿ ಅನ್ನೋ ನಾಯಿಯೇ ಈ ಸಿನಿಮಾದ ಹೀರೋ. ಸ್ಕ್ರೀನ್‌ ಮೇಲೆ ಆ ಪರಿ ಮೋಡಿ ಮಾಡಿರುವ ನಾಯಿ ರಿಯಲ್‌ ಲೈಫ್‌ ಸಖತ್‌ ಇಂಟೆರೆಸ್ಟಿಂಗ್‌.

ಕಿರಣ್‌ರಾಜ್‌ ಅವರು ಚಾರ್ಲಿ ಸಿನಿಮಾದ ಪ್ಲಾನಿಂಗ್‌ನಲ್ಲಿರುವಾಗ ಮಾಡಿದ ಮೊದಲ ಕೆಲಸ ಡಾಗ್‌ ಟ್ರೈನರ್‌ಗಳ ಹುಡುಕಾಟ. 25ರಿಂದ 30 ಜನ ಟ್ರೈನರ್‌ಗಳನ್ನು ಕರೆಸಿ ಮಾತನಾಡಿಸಿದ್ರೂ ಯಾರೂ ಸರಿ ಹೋಗಿಲ್ಲ. ಒಮ್ಮೆ ನಿರ್ದೇಶಕ ಕಿರಣ್‌ ರಾಜ್‌, 'ಕವಲು ದಾರಿ' ಸಿನಿಮಾ ನಿರ್ದೇಶಕ ಹೇಮಂತ್‌ ಜೊತೆಗೆ ಮಾತನಾಡುತ್ತಿದ್ದಾಗ ಮಾತಿನ ನಡುವೆ ಡಾಗ್‌ ಟ್ರೈನರ್‌ಗಾಗಿ ಹುಡುಕಾಡುತ್ತಿರುವುದು, ಸರಿಹೊಂದುವವರು ಸಿಗದೇ ಒದ್ದಾಡುತ್ತಿರೋದನ್ನೆಲ್ಲ ಹೇಳಿದ್ದಾರೆ. ಆಗ ಹೇಮಂತ್‌ ಅವರಿಗೆ ಡಾಗ್‌ ಟ್ರೈನರ್ ಬಗ್ಗೆ ಹೇಳ್ತಾರೆ. ಆ ಟ್ರೈನರೇ ಪ್ರಮೋದ್‌ ಬಿ. ಸಿ. ಇವರು "ಕವಲು ದಾರಿ' ಸಿನಿಮಾದಲ್ಲಿ ಅನಂತ್‌ನಾಗ್‌ ಅವರಿಗೂ ಒಂದು ನಾಯಿಯನ್ನ ಟ್ರೈನ್ ಮಾಡಿ ಕೊಟ್ಟಿರುತ್ತಾರೆ. 

ನಿಮ್ಮೆಲ್ಲರ ಮೆಚ್ಚುಗೆ ಪುಟ್ಟ ಚಾರ್ಲಿಗೆ ಅರ್ಪಣೆ: ಕಿರಣ್‌ರಾಜ್ ...

ಪ್ರಮೋದ್ ವಿಷಯ ಗೊತ್ತಾದಾಗ ಕಿರಣ್ ಅವರು ಪ್ರಮೋದ್‌ ಅವರಿಗೆ ಕಾಲ್‌ ಮಾಡಿ, ಅವರ ಹಿನ್ನೆಲೆ ತಿಳಿದು ಸಂದರ್ಶನಕ್ಕೆ ಕರೆಸ್ತಾರೆ. ಡಾಗ್‌ ಟ್ರೈನರ್ ಪ್ರಮೋದ್ ಓದಿದ್ದು ಇಂಜಿನಿಯರಿಂಗ್‌. ಒಂದಿಷ್ಟು ವರ್ಷ ಸಾಫ್ಟ್ ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡಿದ್ದವರು. ಒಂದು ಹಂತದಲ್ಲಿ ಕೆಲಸದ ಬಗ್ಗೆ ಜಿಗುಪ್ಸೆ ಬಂದು ಆ ಕೆಲಸ ಬಿಟ್ಟು ಐಎಎಸ್‌ ಮಾಡಾಣ ಅಂತ ಟ್ರೈ ಮಾಡುತ್ತಿರುತ್ತಾರೆ. ಕೊನೆಗೆ ಅದನ್ನೂ ಅರ್ಧಕ್ಕೆ ನಿಲ್ಲಿಸಿ ಡಾಗ್ ಸೈಕಾಲಜಿ ಬಗ್ಗೆ ಅಧ್ಯಯನ ಮಾಡಿ ಪ್ರೊಫೆಶನಲ್‌ ಡಾಗ್‌ ಟ್ರೈನರ್‌ ಆಗ್ತಾರೆ. ಇಂಥಾ ಹಿನ್ನೆಲೆಯ ಪ್ರಮೋದ್ ಅವರಿಗೆ ನಾಯಿಗಳನ್ನು ಕಂಡರೆ ಪ್ರೀತಿ. ಆ ಪ್ರೀತಿ ತೋರಿಸಿಯೇ ಅವರು ನಾಯಿಗಳನ್ನು ಟ್ರೈನ್ ಮಾಡೋದು. 

"

ಕನ್ನಡದಲ್ಲಿ ಶುರುವಾಗಿದೆ ಸ್ಪೂಫ್ ಟ್ರೆಂಡ್; ಸಚಿನ್ ಶೆಟ್ಟಿ ವಿಡಿಯೋ ವೈರಲ್! ...

ನಾಲ್ಕೈದು ಸುತ್ತಿನ ಮಾತುಕತೆ ಬಳಿಕ ಪ್ರಮೋದ್ ಅವರೇ ಈ ಸಿನಿಮಾಕ್ಕೆ ಡಾಗ್‌ ಟ್ರೈನರ್ ಅಂತ ಸೆಲೆಕ್ಟ್ ಮಾಡ್ತಾರೆ. ಆಮೇಲೆ ಇದಕ್ಕೋಸ್ಕರ ನಾಯಿಗಳ ಹುಡುಕಾಟ ಶುರುವಾಗುತ್ತೆ. ಇನ್ನೂರರಷ್ಟು ನಾಯಿಗಳನ್ನು ಹುಡುಕಿದರೂ ಸಿನಿಮಾಕ್ಕೆ ಬೇಕಾದಂಥಾ ನಾಯಿ ಸಿಗೋದಿಲ್ಲ. ಕೊನೇಗೆ ಸಿಕ್ಕಿದ್ದು ಈಗ ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ನಾಯಿ ಚಾರ್ಲಿ. ಸ್ನೇಹಿತರೊಬ್ಬರು ಈ ನಾಯಿ ಬಗ್ಗೆ ಪ್ರಮೋದ್ ಅವರಿಗೆ ಹೇಳ್ತಾರೆ. ಆಗ ಇದು ಮಹಾ ತಂಟಕೋರ, ತರಲೆ ನಾಯಿ ಮರಿ. ಮನೆಯವರಿಗೆ ಇದರ ಉಪಟಳ ಸಾಕಾಗಿ ಯಾರಾದ್ರೂ ಸಾಕೋರಿದ್ದರೆ ಕೊಡಲು ಮುಂದಾಗಿರುತ್ತಾರೆ. ಅದೃಷ್ಟವಶಾತ್ ಪ್ರಮೋದ್ ಹುಡುಕುತ್ತಿದ್ದ ನಾಯಿಯ ಲಕ್ಷಣಗಳೆಲ್ಲ ಇದರಲ್ಲೇ ಇರುತ್ತವೆ. ಯಾರಿಗೂ ಬೇಡದ ಈ ನಾಯಿ ಮುಂದೆ 777 ಚಾರ್ಲಿಯಂಥಾ ಪಾನ್‌ ಇಂಡಿಯಾ ಸಿನಿಮಾದ ಹೀರೋ ಆಗುತ್ತೆ. ಇದರ ಅಭಿನಯಕ್ಕೆ ಕೋಟ್ಯಂತರ ಜನ ಫಿದಾ ಆಗ್ತಾರೆ. 

ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ '777 ಚಾರ್ಲಿ' ಟೀಸರ್; 4 ದಿನದಲ್ಲಿ 5 ಮಿಲಿಯನ್! ...

ಅಷ್ಟಕ್ಕೂ ಈ ನಾಯಿಯ ತಿಂಡಿಪೋತ ಗುಣ, ಸದಾ ಆಟಕ್ಕೆ ಹಾತೊರೆಯುವ ಸ್ವಭಾವವನ್ನೇ ಬಳಸಿಕೊಂಡು ಪ್ರಮೋದ್ ಸತತ ನಾಲ್ಕು ವರ್ಷ ಈ ನಾಯಿಯನ್ನು ಟ್ರೈನ್ ಮಾಡುತ್ತಾರೆ. ಅದರ ಸೈಕಾಲಜಿಯನ್ನೆಲ್ಲ ಅರಿತು, ಚಾರ್ಲಿಯ ನಟನಾ ಚಾತುರ್ಯವನ್ನು ಜನರೆದುರು ಸಾಬೀತು ಪಡಿಸುತ್ತಾರೆ.