ರವಿವರ್ಮನ ಪೇಂಟಿಂಗ್‌ಗಳೇ ಮಾತಾಡುವಂತೆ ಮಾಡಿದ ವಿಡಿಯೋಗೆ ಮೆಚ್ಚುಗೆ!

‘ಹಾಸ್ಟೆಲ್‌ ಹುಡುಗ್ರು ಬೇಕಾಗಿದ್ದಾರೆ’ ಹೀಗೊಂದು ಟೈಟಲ್‌ ಇಟ್ಕೊಂಡು ಮೂವತ್ತು ಜನ ಹೊಸ ಹುಡುಗರು ಚಂದನವನಕ್ಕೆ ಎಂಟ್ರಿ ಕೊಟ್ತಿದ್ದಾರೆ. ರಾಜಾ ರವಿವರ್ಮನ ಪೇಂಟಿಂಗ್‌ ಬಳಸಿ ಹೊರಬಿಟ್ಟಿರುವ ಪ್ರಮೋಶನಲ್‌ ವೀಡಿಯೋಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಜ.28ಕ್ಕೆ ಪುನೀತ್‌ ರಾಜ್‌ಕುಮಾರ್‌ ಈ ಚಿತ್ರದ ಪೋಸ್ಟರ್‌ ಲಾಂಚ್‌ ಮಾಡಲಿದ್ದಾರೆ.

Hostel hudugaru bekagiddare movie ravivarma painting video viral vcs

ಲೂಸಿಯಾ ಸಿನಿಮಾಕ್ಕೆ ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿದ್ದ ನಿತಿನ್‌ ಕೃಷ್ಣಮೂರ್ತಿ ಈ ಚಿತ್ರದ ನಿರ್ದೇಶಕ. ಎಕ್ಸಾಂ ಹಿಂದಿನ ರಾತ್ರಿ ಬಾಯ್‌್ಸ ಹಾಸ್ಟೆಲ್‌ನಲ್ಲಿ ನಡೆಯೋ ಕಿತಾಪತಿಯೊಂದರ ಹಿಂದೆ ಈ ಸಿನಿಮಾ ಸಾಗುತ್ತದೆ. ‘ರಾಜ್ಯಾದ್ಯಂತ ಸುಮಾರು 5000-6000 ಜನರನ್ನು ಈ ಸಿನಿಮಾಕ್ಕಾಗಿ ಆಡಿಶನ್‌ ಮಾಡಿ 30 ಜನರನ್ನು ಹಾಸ್ಟೆಲ್‌ಗೆ ಸೇರಿಸಲಾಗಿದೆ. ಈ ಸಿನಿಮಾದಲ್ಲಿ ಅಷ್ಟೂಜನಕ್ಕೆ ಸಮಾನ ಡೈಲಾಗ್‌ ಇದೆ. ಹೀರೋ ಕಾನ್ಸೆಪ್ಟ್‌ಗಿಂತ ಭಿನ್ನವಾದ ಸಿನಿಮಾ ವರ್ಟೆ ಸ್ಟೈಲ್‌ ಅಂತ ಹೊಸ ಬಗೆಯ ಮೇಕಿಂಗ್‌ ಇದು. ಫೌಂಡ್‌ ಫುಟೇಜ್‌ ಥರದ ಜಾನರ್‌. ಸ್ವಲ್ಪ ಮಟ್ಟಿಗೆ 6-5 ಸಿನಿಮಾದ ರೀತಿ ಇದೆ. ಆದರೆ ಆ ಸಿನಿಮಾಗಳಂತೆ ಇದು ಹಾರರ್‌ ಅಲ್ಲ, ಕಾಮಿಡಿ’ ಎನ್ನುತ್ತಾರೆ ನಿತಿನ್‌ ಕೃಷ್ಣಮೂರ್ತಿ.

ನಟಿ ಶ್ರುತಿ ಹಾಗೂ ಪುತ್ರಿ ಗೌರಿಯನ್ನು ಮುದ್ದಾಡಿ ಕಣ್ಣೀರಿಟ್ಟ ನಟಿ ಉಮಾಶ್ರೀ 

‘ಒಂದು ಕಡೆ ಕ್ಯಾಮರ ಇಟ್ಟು ಡೈಲಾಗ್‌ ಹೇಳೋ ಥರ ಇರಲ್ಲ. ಎಲ್ಲೋ ಕ್ಯಾಮರಾ ಇರುತ್ತೆ. ಮತ್ತೆಲ್ಲೂ ಘಟನೆಗಳು ನಡೀತಾ ಹೋಗುತ್ತವೆ. ಜೊತೆಗೊಂದು ಕ್ಯಾಮರ ಫಾಲೋ ಮಾಡುತ್ತೆ. ಹೇಗ್ಹೇಗೋ ಹಾಸ್ಟೆಲ್‌ ಸೇರಿಕೊಂಡ ಇಬ್ಬರು ಹುಡುಗಿಯರೂ ಕತೆಯಲ್ಲಿ ಬರುತ್ತಾರೆ’ ಎನ್ನುತ್ತಾರೆ ನಿತಿನ್‌.

"

ಗುಲ್‌ಮೊಹರ್‌ ಫಿಲಂಸ್‌ ಹಾಗೂ ವರುಣ್‌ ಸ್ಟುಡಿಯೋ ವತಿಯಿಂದ ವರುಣ್‌ ಕುಮಾರ್‌ ಗೌಡ, ಪ್ರಜ್ವಲ್‌ ಬಿಪಿ, ನಿತಿನ್‌ ಕೃಷ್ಣಮೂರ್ತಿ ಹಾಗೂ ಅರವಿಂದ್‌ ಕಶ್ಯಪ್‌ ಚಿತ್ರ ನಿರ್ಮಿಸುತ್ತಿದ್ದಾರೆ. ಅರವಿಂದ ಕಶ್ಯಪ್‌ ಸಿನಿಮಾಟೋಗ್ರಫಿ, ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನವಿದೆ. ಶೇ.85 ಭಾಗ ಶೂಟಿಂಗ್‌ ಮುಗಿದಿದೆ.

ಅಮ್ಮ-ಮಗಳು ಸೇಮ್ ಟು ಸೇಮ್; 'ಕನಸಿನ ರಾಣಿ'ಯ ಟ್ಯಾಟೂ ವೈರಲ್! 

ರವಿವರ್ಮನ ಪೇಂಟಿಂಗ್‌ ಮಾತಾಡಿದ್ದು

‘ನಮ್‌ ಸಿನಿಮಾದಲ್ಲಿ ಹುಡುಗರೇ ಎಲ್ಲಾ. ಹೆಣ್ಮಕ್ಕಳ ಸೌಂಡೂ ಇರಲಿ ಅಂತ ರವಿವರ್ಮನ ಪೇಂಟಿಂಗ್‌ಗಳನ್ನೇ ಹೊಸ ಸಾಫ್ಟ್‌ವೇರ್‌ ಮೂಲಕ ಮಾತಾಡೋ ಹಾಗೆ ಮಾಡಿದ್ವಿ. ರಂಗಭೂಮಿ ಕಲಾವಿದರು ದನಿಯಾದ್ರು. ಒಮ್ಮೆ ಈ ಪ್ರಮೋಶನಲ್‌ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದೇ ಭರಪೂರ ಮೆಚ್ಚುಗೆಯ ಮಾತು ಹರಿದು ಬಂತು. ರಕ್ಷಿತ್‌ ಶೆಟ್ಟಿ, ರಿಷಬ್‌ರಂಥವರೂ ನಮ್ಮನ್ನು ಸಪೋರ್ಟ್‌ ಮಾಡಿದರು’ ಎನ್ನುವ ನಿತಿನ್‌ಗೆ ಮುಂದೆ ಇನ್ನಷ್ಟುಕ್ರಿಯೇಟಿವ್‌ ಆಗಿ ಚಿತ್ರ ಪ್ರೊಮೋಟ್‌ ಮಾಡುವ ಐಡಿಯಾಗಳಿವೆ.

 

Latest Videos
Follow Us:
Download App:
  • android
  • ios