ಕೊರೋನಾ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನ ಶೈಕ್ಷಣಿಕ ಸಂಸ್ಥೆಗಳನ್ನು ಸೆಪ್ಟೆಂಬರ್‌ವರೆಗೂ ಕ್ಲೋಸ್ ಮಾಡಲಾಗಿದೆ. ಬಹುತೇಕ ಪಾಠ ಪ್ರವಚನಗಳು ಹಾಗೂ ಪರೀಕ್ಷೆ ಆನ್‌ಲೈನ್‌ನಲ್ಲಿಯೇ ನಡೆಯಲಿವೆ. ಇಂಥ ಪರಿಸ್ಥಿತಿಯಲ್ಲಿ ಅಲ್ಲಿನ ವಿದ್ಯಾರ್ಥಿಗಳು ಆಯಾ ದೇಶಕ್ಕೆ ಮರಳುತ್ತಿದ್ದಾರೆ. ಭಾರತಕ್ಕೂ ಹಲವು ಮಂದಿ ವಾಪಾಸ್ಸಾಗಿದ್ದು, ಅದರಲ್ಲಿ ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಹಾಗೂ ಸುಹಾಸಿನಿ ಪುತ್ರ ನಂದನ್ ಸಹ ಸೇರಿದ್ದಾರೆ.

ಕಾಲಿವುಡ್‌ಗೆ ರಚಿತಾ ರಾಮ್ ಹಾರಲು ಸುಹಾಸಿನಿ ಕೊಟ್ರು ಮಾಸ್ಟರ್ ಪ್ಲ್ಯಾನ್?

ಕಾನೂನಿನ ಪ್ರಕಾರ ವಿದೇಶದಿಂದ ಆಗಮಿಸಿರುವ ಪ್ರತಿಯೊಬ್ಬರ ಕೈಗೂ 'Home Quarantined' ಸ್ಟ್ಯಾಂಪ್‌ ಹಾಕಲಾಗುತ್ತದೆ ಹಾಗೂ ಅವರು ತಮ್ಮ ನಿವಾಸದಲ್ಲೇ ಬಂಧಿತರಾಗಬೇಕು. ಲಂಡನ್‌ನಿಂದ ಮುರಳಿದ ನಂದನ್‌ ತಮ್ಮ ಮನೆಯಲ್ಲೇ ಪ್ರತ್ಯೇಕವಾದ ಕೊಠಡಿಯಲ್ಲಿ ಬಂಧಿತರಾಗಿದ್ದಾರೆ. ಈಗಾಗಲೇ  5 ದಿನಗಳು ಕಳೆದಿದ್ದು, 9 ದಿನ ಉಳಿದಿವೆ. ಯಾರೊಂದಿಗೂ ಸಂಪರ್ಕ ಬೆಳೆಸದಂತೆ ಮುಂಜಾಗೃತೆ ವಹಿಸಲಾಗುತ್ತಿದೆ.

ಊಟದ ವ್ಯವಸ್ಥೆ: ನಂದನ್‌ ಇರುವ ರೂಂನಲ್ಲಿ ಒಂದು ಜಾಗವಿದ್ದು ಅಲ್ಲಿ ಊಟ ಇಡುವ ಮುನ್ನ ಹಾಗೂ ನಂತರ ಸ್ಪ್ರೇ ಮಾಡಲಾಗುತ್ತದೆ. ನಂದನ್‌ ಕೂಡ ಊಟ ತೆಗೆದುಕೊಳ್ಳುವ ಮುನ್ನ ಹಾಗೂ ಸೇವಿಸಿದ ನಂತರ ಇಡುವ ಮುನ್ನ ಆ ಜಾಗವನ್ನು ಸ್ವಚ್ಛಗೊಳಿಸುತ್ತಾರೆ. 

ಮೊದಲ ಶಾಟ್‌ನಲ್ಲೇ ವಿಷ್ಣುಗೆ ಕಪಾಳ ಮೋಕ್ಷ ಮಾಡಿದ ಸುಹಾಸಿನಿ!

'ಇದು ದೊಡ್ಡ ವಿಚಾರವೇನಲ್ಲ. ಯಾರೂ ಗಾಭರಿಗೊಳ್ಳುವ ಅಗತ್ಯವಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು' ಎಂದು ನಂದನ್‌ ಮಾತನಾಡಿದ್ದಾರೆ.