Asianet Suvarna News Asianet Suvarna News

ಕಾಂತಾರ ಚಾಪ್ಟರ್‌ 1 ಫಸ್ಟ್‌ ಲುಕ್‌ ಟೀಸರ್‌ ಹತ್ತಿರತ್ತಿರ 2 ಕೋಟಿ ವೀಕ್ಷಣೆ ದಾಖಲೆ

ಫಸ್ಟ್‌ ಲುಕ್‌ನಲ್ಲೇ ದಾಖಲೆ ಮಾಡಿದ ಕಾಂತಾರ ಚಾಪ್ಟರ್ 1. ಮುಹೂರ್ತದಲ್ಲಿ ಸಾಖತ್ ಕೊಟ್ಟ ಸ್ಟಾರ್‌ಗಳು ಮತ್ತು ಇಡೀ ಕಾಂತಾರ ತಂಡ...

Hombale films Rishab shetty Kantara 2 first look hits 2 million views vcs
Author
First Published Nov 30, 2023, 1:02 PM IST

ರಿಷಬ್‌ ಶೆಟ್ಟಿ ನಟನೆ, ನಿರ್ದೇಶನ, ಹೊಂಬಾಳೆ ಫಿಲಂಸ್‌ ನಿರ್ಮಾಣದ ‘ಕಾಂತಾರ ಚಾಪ್ಟರ್‌ 1’ ಸಿನಿಮಾದ ಫಸ್ಟ್‌ಲುಕ್‌ ಯೂಟ್ಯೂಬ್‌ನಲ್ಲಿ ನಂ.1 ಟ್ರೆಡಿಂಗ್‌ನಲ್ಲಿದೆ. ಈವರೆಗೆ ಹತ್ತಿರತ್ತಿರ 2 ಕೋಟಿ ಜನ ಈ ಸಿನಿಮಾದ ಫಸ್ಟ್ ಲುಕ್‌ ಟೀಸರ್‌ ವೀಕ್ಷಣೆ ಮಾಡಿದ್ದಾರೆ. 24 ಗಂಟೆಗಳ ಅವಧಿಯಲ್ಲಿ 1 ಕೋಟಿ 20 ಲಕ್ಷಕ್ಕೂ ಅಧಿಕ ಮಂದಿ ಕಾಂತಾರ ಪ್ರೀಕ್ವಲ್‌ನ ನೋಡಿದ್ದು ದಾಖಲೆ. ದಕ್ಷಿಣ ಭಾರತೀಯ ನಟರಾದ ಪ್ರಭಾಸ್‌, ರಕ್ಷಿತ್‌ ಶೆಟ್ಟಿ, ಪೃಥ್ವಿರಾಜ್‌ ಮೊದಲಾದವರು ಟೀಸರ್‌ ಬಗ್ಗೆ ಪ್ರಶಂಸಿಸಿದ್ದಾರೆ.

ಗೂಗಲ್‌ನಲ್ಲೂ ‘ಕಾಂತಾರ 1’ ರಿಲೀಸ್‌ ದಿನಾಂಕದ ಬಗ್ಗೆ ಅತೀ ಹೆಚ್ಚು ಸರ್ಚ್‌ ನಡೆದಿದ್ದು, ಗೂಗಲ್‌ ಇಂಡಿಯಾ ಎಕ್ಸ್‌ನಲ್ಲಿ ಈ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದೆ. ಈ ವೇಳೆ ‘ಕಾಂತಾರ 1’ ಎಂಬುದನ್ನು ಕನ್ನಡದಲ್ಲೇ ಬರೆದದ್ದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

ಕಾಂತಾರ ಚಾಪ್ಟರ್ 1 ಫಸ್ಟ್‌ ಲುಕ್ ರಿಲೀಸ್; ರಿಷಬ್ ಶೆಟ್ಟಿ ಅವತಾರಕ್ಕೆ ಉಘೇ ಎಂದ ಸಿನಿ ರಸಿಕರು!

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಕಾಂತಾರ ಫಸ್ಟ್‌ಲುಕ್‌ ಬಿಡುಗಡೆಯಾಗಿತ್ತು. ಒಂದೇ ವಿಡಿಯೋದಲ್ಲಿ ಸೆಟ್ಟಿಂಗ್‌ನಲ್ಲಿ ಭಾಷೆ (ಸೌಂಡ್‌ ಟ್ರ್ಯಾಕ್‌) ಬದಲಾಯಿಸುವ ಅವಕಾಶ ನೀಡಿದ್ದು ವಿಶೇಷವಾಗಿತ್ತು.

ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ‘ಕಾಂತಾರ 1’ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ ರಿಷಬ್ ಶೆಟ್ಟಿ, ‘ಚಿತ್ರದ ಫಸ್ಟ್‌ಲುಕ್‌, ಟೀಸರ್‌ಗೆ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆ ಬಗ್ಗೆ ಖುಷಿ ಇದೆ. ಇದು ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಈಗ 24 ಗಂಟೆ ಕೆಲಸ ಮಾಡಿದರೂ ಕಡಿಮೆ ಅನ್ನುವ ಹಾಗಾಗಿದೆ. ನನ್ನನ್ನು ದೇಶಕ್ಕೆ ಪರಿಚಯಿಸಿದ ಸಿನಿಮಾ ಕಾಂತಾರ. ಈ ಚಿತ್ರಕ್ಕೆ, ಜನರ ಪ್ರೀತಿಗೆ ಎಂದೂ ಕೃತಜ್ಞ’ ಎಂದಿದ್ದಾರೆ.

‘ಕಾಂತಾರ ಚಾಪ್ಟರ್‌ 1’ ಚಿತ್ರ ಏಳು ಭಾಷೆಗಳಲ್ಲಿ 2024ರಲ್ಲಿ ಬಿಡುಗಡೆಯಾಗಲಿದೆ. ವಿಜಯ ಕಿರಗಂದೂರು ನಿರ್ಮಾಣದ ಈ ಸಿನಿಮಾ ಸುಮಾರು 125 ಕೋಟಿ ರು. ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ.

 

Follow Us:
Download App:
  • android
  • ios