ರಿಷಬ್‌ ಶೆಟ್ಟಿ ನಿರ್ದೇಶನದ ಸಿನಿಮಾ 'ಕಾಂತಾರ' ಫಸ್ಟ್ ಲುಕ್‌ ರಿವೀಲ್ ಆಗಿದೆ.

ನಿರ್ಮಾಪಕ ವಿಜಯ ಕಿರಗಂದೂರು ಅವರು ಹೊಂಬಾಳೆ ಫಿಲಂಸ್‌ನ 11ನೇ ಸಿನಿಮಾವನ್ನು ಘೋಷಿಸಿದ್ದಾರೆ. ಇಂದು 11.43 ನಿಮಿಷಕ್ಕೆ ಈ ಸಿನಿಮಾದ ಶೀರ್ಷಿಕೆ ಮತ್ತು ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್‌ನಲ್ಲಿ ‘ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ’ ಎಂಬ ಟ್ಯಾಗ್‌ಲೈನ್‌ ಕುತೂಹಲ ಕೆರಳಿಸಿದೆ.

ಡಿಫರೆಂಟ್ ಡೈರೆಕ್ಟರ್ ರಿಷಬ್‌ ಶೆಟ್ಟಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 'ರಿಷಬ್ ಶೆಟ್ಟಿ ನಿರ್ದೇಶನ, ನಟನೆಯಲ್ಲಿ 'ಕಾಂತಾರ'- ಒಂದು ದಂತಕಥೆ' ಎಂದು ರಿವೀಲ್ ಮಾಡಲಾಗಿದೆ. ಇದರೊಂದಿಗೆ ಸುದೀಪ್‌ ನಟನೆಯ ಸಿನಿಮಾ ಇದು ಎಂಬ ಊಹೆಯಗೆ ಬ್ರೇಕ್ ಬಿದ್ದಿದೆ. 

ಹೊಂಬಾಳೆ ಫಿಲಂಸ್‌ ಚಿತ್ರ 'ರಿಚರ್ಡ್‌ ಆಂಟನಿ'ಗೆ ರಕ್ಷಿತ್ ಶೆಟ್ಟಿ ಡೈರಕ್ಟರ್!

ವಿಜಯ್‌ ಕಿರಗಂದೂರು ಒಳ್ಳೆಯ ಸಿನಿಮಾಗಳನ್ನು ನಿರ್ಮಿಸುತ್ತಿರುವ ಅಭಿರುಚಿಯುಳ್ಳ ನಿರ್ಮಾಪಕ. ನಿರ್ದೇಶಕರಿಗೆ ಪೂರ್ತಿ ಸ್ವಾತಂತ್ರ್ಯ ನೀಡುವುದು ಅವರ ಶೈಲಿ. ಹೀಗಾಗಿ ಹೊಂಬಾಳೆ ಫಿಲಂಸ್‌ನಿಂದ ಮತ್ತೊಂದು ಉತ್ತಮ ಚಿತ್ರ ಬರುವುದರಲ್ಲಿ ಸಂದೇಹವಿಲ್ಲ. 

ಬೆಂಕಿ ಇರುವ ಬ್ಯಾಗ್ರೌಂಡ್‌ನಲ್ಲಿ ಜಲ್ಲಿಕಟ್ಟಿನ ಗ್ರಾಫಿಕ್ಸ್ ಅನ್ನು ರಿಲೀಸ್ ಮಾಡಲಾಗಿದೆ. ಪೋಸ್ಟರ್‌ ನೋಡಿದ ಕೂಡಲೇ ಕಿಚ್ಚಿದೆ ಎಂದು ತಿಳಿಯುತ್ತದೆ. ಸಿನಿಮಾ ಚಿತ್ರೀಕರಣ ಇದೇ ಆಗಸ್ಟ್ 27ರಂದು ಆರಂಭವಾಗಲಿದೆ.

2014ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ 'ನಿನ್ನಿಂದಲೆ' ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ ಮೊದಲ ಚಿತ್ರ. 2015ರಲ್ಲಿ ಯಶ್ ನಟನೆಯ 'ಮಾಸ್ಟರ್‌ಪೀಸ್', 2017ರಲ್ಲಿ ಪುನೀತ್ ನಟನೆಯ 'ರಾಜಕುಮಾರ', 2018ರಲ್ಲಿ ಯಶ್‌ನ ಪಾನ್ ಇಂಡಿಯಾ ಚಿತ್ರ 'ಕೆಜಿಎಫ್ ಚಾಪ್ಟರ್ 1', 2021ರಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಿದ 'ಯುವರತ್ನ' ಸಿನಿಮಾ, ಈ ವರ್ಷ ಬಿಡುಗಡೆಗೆ ಸಜ್ಜಾಗಿರುವ ಯಶ್ 'ಕೆಜಿಎಫ್ ಚಾಪ್ಟರ್ 2', ಪ್ರಭಾಸ್ ನಟನೆಯ 'ಸಲಾರ್', ಶ್ರೀಮುರಳಿ ನಟನೆಯ 'ಭಗೀರ', ಪುನೀತ್‌ನ 'ದ್ವಿತ್ವ', ರಿಷಬ್ ಶೆಟ್ಟಿ ಜೊತೆಗಿನ 'ರಿಚರ್ಡ್‌ ಆಂಟೋನಿ' 10ನೇ ಸಿನಿಮಾ, ಆದರೆ 11ನೇ ಚಿತ್ರವೂ ರಿಷಬ್‌ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರಲಿದೆ.

Scroll to load tweet…