ರಾಘವೇಂದ್ರ ಸ್ಟೋರ್ಸ್ ನಲ್ಲಿ ನವರಸ ನಾಯಕ ಹೊಂಬಾಳೆ ಫಿಲ್ಮ್ಸ್ ನಲ್ಲಿ ಅಖಾಡಕ್ಕಿಳಿದ ಹಿರಿಯ ನಟ ಜಗ್ಗೇಶ್‌ !

ಹೊಂಬಾಳೆ ಫಿಲ್ಮ್ಸ್ನ ವಿಜಯ್‌ ಕಿರಗಂದೂರು ನಿರ್ಮಾಣದ 12ನೇ ಸಿನಿಮಾ ಇಂದು ಘೋಷಣೆ ಆಗುತ್ತಿದೆ ಎಂಬ ಸುದ್ದಿಯೇ ಸಖತ್ ಕುತೂಹಲ ಸೃಷ್ಟಿಸಿತ್ತು. ಫಸ್ಟ್‌ ಲುಕ್‌ ಕೂಡ ಬಿಡುಗಡೆಯಾಗಲಿದೆ. ಪುನೀತ್‌ ಹಾಗೂ ಸಂತೋಷ್‌ ಆನಂದ್‌ರಾಮ್‌ ಕಾಂಬಿನೇಶನ್‌ ಚಿತ್ರವೇ ಅಥವಾ ಹೊಸ ಸಿನಿಮಾನಾ ಎನ್ನುವುದು ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿತ್ತು.

ಈಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಹೊಂಬಾಳೆ ಫಿಲ್ಮ್ಸ್ ತನ್ನ 12 ನೇ ಸಿನಿಮಾದ ಟೈಟಲ್‌ ಹಾಗೂ ಅದ ಹೀರೋ ಐಟೆಂಟಿಟಿ ರಿವೀಲ್‌ ಮಾಡಿದೆ. ಕನ್ನಡದ ಹಿರಿಯ ನಟ ವನರಸ ನಾಯಕ ಜಗ್ಗೇಶ್‌ ಇದೇ ಮೊದಲು ಹೊಂಬಾಳೆ ಫಿಲಂಸ್‌ ಬ್ಯಾನರ್‌ ಮೂಲಕ ನಟಿಸುತ್ತಿದ್ದಾರೆ. ಈ ಸಿನಿಮಾಗೆ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಆಕ್ಷನ್ ಕಟ್ ಹೇಳಿದ್ದಾರೆ.

ಒಂದಾದ ಟಾಲಿವುಡ್-ಸ್ಯಾಂಡಲ್‌ವುಡ್ ಪವರ್ ಸ್ಟಾರ್ಸ್

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 12 ನೇ ಚಿತ್ರದ ಹೆಸರು ರಾಘವೇಂದ್ರ ಸ್ಟೋರ್ಸ್.‌ ಇದರ ನಾಯಕ ನಟ ಜಗ್ಗೇಶ್.‌ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್.‌ ಹೊಂಬಾಳೆ ಫಿಲ್ಮ್ಸ್ ಇದನ್ನು ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ.