Asianet Suvarna News

ರಕ್ಷಿತ್ ಶೆಟ್ಟಿಯ ಪುಣ್ಯಕೋಟಿಗೆ ಹೊಂಬಾಳೆ ಫಿಲಂಸ್ ಸಾಥ್!

ಹೊಂಬಾಳೆ ಪ್ರೊಡಕ್ಷನ್ ದೊಡ್ಡ ಬಜೆಟ್ ಚಿತ್ರ 'ಪುಣ್ಯಕೋಟಿ'ನಿರ್ಮಾಣದ ಸಾರಥ್ಯ ವಹಿಸಲಿದೆ ಎಂಬುದು ಹೊಸ ಸುದ್ದಿ. 
 

Hombale film to produce Rakshit shetty punyakoti film vcs
Author
Bangalore, First Published Jun 26, 2021, 10:35 AM IST
  • Facebook
  • Twitter
  • Whatsapp

ವಿಜಯ್ ಕಿರಗಂದೂರು ಅವರ ಹೊಂಬಾಳೆ ಪ್ರೊಡಕ್ಷನ್‌ನಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಗೆ ಮತ್ತೆ ಜೀವ ಬಂದಿದೆ. ‘777 ಚಾರ್ಲಿ’ ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳ ನಂತರ ಸಿಂಪಲ್ ಸ್ಟಾರ್ ಕೈಗೆತ್ತಿಕೊಳ್ಳಲಿರುವ ‘ಪುಣ್ಯಕೋಟಿ’ ಚಿತ್ರಕ್ಕೆ ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣದ ಸಾರಥ್ಯ ವಹಿಸಲಿದೆ ಎಂಬುದು ಹೊಸ ಸುದ್ದಿ. ಸದ್ಯದಲ್ಲೇ ಇವರ ಕಾಂಬಿನೇಷನ್‌ನ ಚಿತ್ರವನ್ನು ನಿರ್ಮಾಪಕರೇ ಘೋಷಣೆ ಮಾಡಲಿದ್ದಾರೆ ಎನ್ನುತ್ತವೆ ಮೂಲಗಳು.

ಪುಣ್ಯಕೋಟಿ ಸಿನಿಮಾ: ಮತ್ತೊಂದು ವಿಚಾರ ತಿಳಿಸಿದ ರಕ್ಷಿತ್ ಶೆಟ್ಟಿ 

ಈದರೆ, ಈ ಬಗ್ಗೆ ರಕ್ಷಿತ್ ಶೆಟ್ಟಿ ಅಥವಾ ನಿರ್ಮಾಪಕ ವಿಜಯ್ ಕಿರಗಂದೂರು ಅವರು ್ದಇಕೃತವಾಗಿ ಹೇಳಿಲ್ಲ. ಹಾಗೆ ನೋಡಿದರೆ ಈ ಹಿಂದೆಯೇ ಹೊಂಬಾಳೆ ಪ್ರೊಡಕ್ಷನ್‌ನಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾ ಸೆಟ್ಟೇರಲಿದೆ ಎನ್ನುವ ಸುದ್ದಿ ಇತ್ತು. ಈಗ ಮತ್ತೆ ಅದೇ ಸುದ್ದಿ ಸದ್ದು ಮಾಡುತ್ತಿದ್ದು, ಈ ಬಾರಿ ಯಾವ ಚಿತ್ರಕ್ಕೆ ಹೊಂಬಾಳೆ ಬಂಡವಾಳ ಹೂಡಲಿದೆ ಎನ್ನುವುದು ಹೊಸದಾಗಿ ಸೇರ್ಪಡೆಯಾಗಿದೆ.

Follow Us:
Download App:
  • android
  • ios