'ಬಿಂದಾಸ್' ತಾರೆ ಹನ್ಸಿಕಾ ಮೋಟ್ವಾನಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಕೇಸ್! ಖ್ಯಾತ ನಟಿಯಿಂದ ದೂರು ದಾಖಲು
ಕನ್ನಡದ 'ಬಿಂದಾಸ್'ನಲ್ಲಿ ನಟಿಸಿರುವ ನಟಿ ಹನ್ಸಿಕಾ ಮೋಟ್ವಾನಿ ವಿರುದ್ಧ ಅತ್ತಿಗೆ, ಕಿರುತೆರೆ ನಟಿ ಮುಸ್ಕಾನ್ ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ. ಏನಿದು ಆರೋಪ?
'ಶಕಲಕಾ ಬೂಮ್ ಬೂಮ್', 'ಕೋಯಿ ಮಿಲ್ ಗಯಾ' ಮುಂತಾದ ಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿರುವ ಹಂಸಿಕಾ ಮೋಟ್ವಾನಿ ಈಗ ಸೌತ್ ಚಿತ್ರರಂಗದ ಪ್ರಮುಖ ನಟಿ. ಕನ್ನಡದಲ್ಲಿ ಹನ್ಸಿಕಾ ಪುನೀತ್ ರಾಜ್‌ಕುಮಾರ್ ಜೊತೆ 'ಬಿಂದಾಸ್' ಸಿನಿಮಾದಲ್ಲಿ ನಟಿಸಿದ್ದಾರೆ. ಹನ್ಸಿಕಾ ಮೋಟ್ವಾನಿ ಚಿಕ್ಕ ವಯಸ್ಸಿನಲ್ಲೇ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ತೆಲುಗಿನ ಟಾಪ್ ಹೀರೋ ಅಲ್ಲು ಅರ್ಜುನ್ (Allu Arjun) ಜೊತೆ ಹೀರೋಯಿನ್ ಆಗಿ ಪ್ರೇಕ್ಷಕರ ಮನ ಗೆದ್ದವರೀಕೆ. ತಮ್ಮ ಮುದ್ದು ಮೊಗ ಹಾಗೂ ಅಭಿನಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ ಹನ್ಸಿಕಾ. ಇತ್ತೀಚೆಗೆ ಅವರು ಹಾರ್ಮೋನ್ ಇಂಜೆಕ್ಷನ್ (Harmon Injuction) ಕುರಿತಂತೆ ಬಹಳ ಚರ್ಚೆಗೆ ಗ್ರಾಸವಾಗಿದ್ದರು. ಬಾಲಕಿಯಾಗಿರುವಾಗಲೇ ಯುವತಿಯಂತೆ ಕಾಣಲು ಈಕೆ ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. 31 ವರ್ಷದ ಹನ್ಸಿಕಾ ಮೋಟ್ವಾನಿ 2007 ರಲ್ಲಿ ಹಿಮೇಶ್ ರೇಶಮಿಯಾ (Himesh Reshmiya) ಅವರ 'ಆಪ್ಕಾ ಸುರೂರ್' ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದಾಗ, ಅವರ ದೈಹಿಕ ರೂಪಾಂತರವನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು. ಆಗಲೇ ಗುಸುಗುಸು ಶುರುವಾಗಿತ್ತು. ಸಿನಿಮಾದಲ್ಲಿ ಅವಕಾಶ ಕೈತಪ್ಪಿ ಹೋಗಬಾರದು ಎಂಬ ಕಾರಣಕ್ಕೆ ಹನ್ಸಿಕಾ ಇಂಜೆಕ್ಷನ್ ಬಳಸಿದ್ದು, ಇದು ನಟಿ ದಿಢೀರ್ ದಪ್ಪಗಾಗಲು ಕಾರಣ ಎನ್ನಲಾಗಿತ್ತು.
ಇಂಥ ಹನ್ಸಿಕಾ ವಿರುದ್ಧ ಈಗ ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಾಗಿದೆ. ನಟಿಯ ವಿರುದ್ಧ ಅತ್ತಿಗೆ ಅಂದರೆ ಇವರ ಸಹೋದರ ಪ್ರಶಾಂತ್ ಅವರು ಹೆಂಡತಿ ಮುಸ್ಕಾನ್ ನ್ಯಾನ್ಸಿ ಜೇಮ್ಸ್ ಅವರು ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲು ಮಾಡಿದ್ದಾರೆ. ಹನ್ಸಿಕಾ ಸೇರಿದಂತೆ ಇಡೀ ಕುಟುಂಬದ ವಿರುದ್ಧ ದೂರು ದಾಖಲಾಗಿದೆ. ಹನ್ಸಿಕಾ ಹಾಗೂ ಅವರ ತಾಯಿ ತಮ್ಮ ವೈವಾಹಿಕ ಜೀವನಕ್ಕೆ ಅಡ್ಡಿಪಡಿಸುತ್ತಿದ್ದಾರೆ, ನನ್ನ ಹಾಗೂ ಗಂಡನ ನಡುವೆ ಪದೇ ಪದೇ ಜಗಳಕ್ಕೆ ಕಾರಣ ಆಗುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಪೊಲೀಸರು ಎಲ್ಲರ ವಿರುದ್ಧ ಎಫ್ಐಆರ್ ದಾಖಲಿಸಿರುವುದಾಗಿ ತಿಳಿದು ಬಂದಿದೆ. ಪತಿ ಪ್ರಶಾಂತ್ ಮೋಟ್ವಾನಿ ಸೇರಿದಂತೆ, ಅತ್ತೆ ಮೋನಾ, ನಾದಿನಿ ಹನ್ಸಿಕಾ ವಿರುದ್ಧ ಮುಸ್ಕಾನ್ ದೂರು ದಾಖಲಿಸಿದ್ದಾರೆ.
ಮದ್ವೆ ಆದ್ಮೇಲೆ ಆ ಭಾಗಕ್ಕೆ ಸರ್ಜರಿ ಮಾಡಿಸಿಕೊಂಡ್ರಾ ಹನ್ಸಿಕಾ ಮೋಟ್ವಾನಿ? ಏನಿದು ವಿಷ್ಯ?
ಅಂದಹಾಗೆ ಮುಸ್ಕಾನ್ ಮತ್ತು ಪ್ರಶಾಂತ್ ಅವರು ಮದುವೆಯಾಗಿ ನಾಲ್ಕುವರ್ಷಗಳಾಗಿವೆ. 2020ರಲ್ಲಿ ಇವರ ಮದುವೆ ನಡೆದಿತ್ತು. ಆದರೆ ಎರಡೇ ವರ್ಷದಲ್ಲಿ ಅಂದರೆ 2022ರಲ್ಲಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಆದರೆ ಇದು ಇಲ್ಲಿಯವರೆಗೆ ಗುಟ್ಟಾಗಿಯೇ ಉಳಿದಿಲ್ಲ. ಮುಸ್ಕಾನ್ ಕೂಡ ಕಿರುತೆರೆ ಕಲಾವಿದೆ. ಕೆಲವು ಸೀರಿಯಲ್ಗಳಲ್ಲಿ ನಟಿಸಿ ಫೇಮಸ್ ಆದವರು. ಥೋಡಿ ಖುಷಿ ಥೋಡಿ ಗಮ್ ಸೀರಿಯಲ್ನಲ್ಲಿ ಖ್ಯಾತಿ ಪಡೆದವರು. ಇದೀಗ ಅವರು ವಿಷಯವನ್ನು ಬಹಿರಂಗಗೊಳಿಸಿದ್ದಾರೆ.
ಹಲವು ದಿನಗಳಿಂದ ತನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗುತ್ತಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಸ್ಥರು ವಂಚನೆ ಮಾಡಿದ್ದಾರೆ. ಪತಿಯ ಕುಟುಂಬಸ್ಥರು ನನ್ನ ಮತ್ತು ಗಂಡನ ಮಧ್ಯೆ ಬರುತ್ತಿದ್ದಾರೆ. ಅವರ ಮಾತು ಕೇಳಿ ನನ್ನ ಪತಿ ನನಗೆ ಕಿರುಕುಳ ಕೊಡುತ್ತಿದ್ದಾರೆ. ದುಬಾರಿ ಗಿಫ್ಟ್ಗಳನ್ನು ನೀಡುವಂತೆ ಹಾಗೂ ಹಣವನ್ನು ನೀಡುವಂತೆ ಪೀಡಿಸುತ್ತಾರೆ ಎಂದೆಲ್ಲಾ ಮುಸ್ಕಾನ್ ಆರೋಪಿಸಿದ್ದಾರೆ. 2024ರ ಡಿಸೆಂಬರ್ 18ರಂದು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದು, ಇದೀಗ ಬೆಳಕಿಗೆ ಬಂದಿದೆ.
23 ವರ್ಷಗಳ ಬಳಿಕ ಶಾರುಖ್ ಪತ್ನಿ ಗೌರಿ ಮತಾಂತರ? ವೈರಲ್ ಫೋಟೋಗಳ ಹಿಂದೆ ಭಯಾನಕ ಸತ್ಯ!