ನಟಭಯಂಕರ ಶೂಟಿಂಗ್‌ನಲ್ಲಿ ಪ್ರಥಮ್ ಬ್ಯುಸಿ | ಶೂಟಿಂಗ್ ಸೆಟ್‌ಗೆ ಸರ್ಪ್ರೈಸ್ ಆಗಿ ಭೇಟಿ ಕೊಟ್ಟ ಗಣೇಶ್ | ನಟಭಯಂಕರ ಟೀಂಗೆ ಗಣೇಶ್ ವಿಶ್ 

ಬೆಂಗಳೂರು (ಏ. 15): ಸಿನಿಮಾ ಶೂಟಿಂಗ್ ಸೆಟ್ ಗೆ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಹೋಗುವುದು ಸಹಜ. ಸೆಟ್ ಗೆ ಹೋಗಿ ನಟ, ನಟಿಯರನ್ನು ಮಾತಾಡಿಸಿಕೊಂಡು ಅವರ ಜೊತೆಗೊಂದು ಸೆಲ್ಫಿ ತೆಗೆದುಕೊಳ್ಳುವುದು ಸಹಜ. ಇಲ್ಲೊಂದು ಸ್ಪೆಷಲ್ ನಡೆದಿದೆ. 

ನಟ ಪ್ರಥಮ್ ’ನಟಭಯಂಕರ’ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಶೂಟಿಂಗ್ ಸೆಟ್ ಗೆ ನಟ ಗಣೇಶ್ ಸರ್ಪ್ರೈಸ್ ವಿಸಿಟ್ ನೀಡಿದ್ದಾರೆ. 

"

ನೀನು ನಿರ್ದೇಶನ ಮಾಡುತ್ತಿದ್ದೀಯಾ, ಒಳ್ಳೆಯದಾಗ್ಲಿ. ನಿನ್ನ ಸಿನಿಮಾವನ್ನು ನೋಡೇ ನೋಡ್ತೀನಿ. ತುಂಬಾ ಇಷ್ಟವಾದಾಗ ಮಾತ್ರ ನಾನು ಅಲ್ಲಿ ಬರೋದು. ಇದುವರೆಗೂ ಎಲ್ಲಿಗೂ ಹೋಗಿಲ್ಲ. ಅಭಿಮಾನಿಗಳೇ ನಿಜವಾದ ಬಾಸ್. ನಿಮ್ಮ ತಂಡದ ಜೊತೆ ನಾನಿದೀನಿ ಎಂದು ಗಣೇಶ್ ಹೇಳಿದ್ದಾರೆ. 

View post on Instagram