ಮೇ 31 ಹಾಗೂ ಜೂನ್ 1ರಂದು ಉಚಿತ ಕೋವಿಶೀಲ್‌ಡ್ ಲಸಿಕೆ  ಬೆಳಗ್ಗೆ 10 ರಿಂದ 5 ರವರೆಗೂ ಲಸಿಕೆ ಹಾಕಲಾಗುತ್ತದೆ

ಚಿತ್ರರಂಗದ ಕಲಾವಿದರಿಗೆ ಉಚಿತ ಕೋವಿಶೀಲ್‌ಡ್ ಲಸಿಕೆ ಅಭಿಯಾನ ನಡೆಯಲಿದೆ. ಮೇ 31 ಹಾಗೂ ಜೂನ್ 1ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಉಚಿತ ಲಸಿಕೆ ಹಾಕಲಾಗುತ್ತಿದೆ. ಎರಡು ದಿನಗಳ ಕಾಲ ಬೆಳಗ್ಗೆ 10 ರಿಂದ 5 ರವರೆಗೂ ಲಸಿಕೆ ಹಾಕಲಾಗುತ್ತದೆ. ಲಸಿಕೆ ಹಾಕಿಸಿಕೊಳ್ಳಲು ಬರುವ ಕಲಾವಿದರಿಗೆ ಆಧಾರ್ ಕಾರ್ಡ್ ಕಡ್ಡಾಯ.

ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಸಂಸದೆ ಹಾಗೂ ನಟಿ ಸುಮಲತಾ ಅಂಬರೀಶ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಬಿಬಿಎಂಪಿ ಆಯುಕ್ತರು ಸಿನಿಮಾ ಕಲಾವಿದರಿಗೆ ನೀಡುತ್ತಿರುವ ಎರಡು ದಿನಗಳ ಈ ಉಚಿತ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಬೆಂಗಳೂರು: ಕೋವ್ಯಾಕ್ಸಿನ್ 2ನೇ ಡೋಸ್​ಗೆ ಕಾಯ್ತಿದ್ದೀರಾ..? ಈ 27 ಕೇಂದ್ರಗಳಲ್ಲಿ ಲಭ್ಯ 

ಈಗಾಗಲೇ ಕೊರೋನಾ ಕಾರಣಕ್ಕೆ ಸ್ಯಾಂಡಲ್‌ವುಡ್ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಅನೇಕ ಮಂದಿ ಕೋವಿಡ್ ದಾಳಿಗೆ ತುತ್ತಾಗಿದ್ದರೆ, ಕೆಲವರು ಮರಣವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಉಚಿತ ಲಸಿಕೆ ಅಭಿಮಾನ ಮಹತ್ವ ಪಡೆದಿದೆ.

View post on Instagram