ಭಾರತದ ಅತಿ ಹೆಚ್ಚು ಸಿನಿಮಾಗಳಲ್ಲಿ ಎಡಿಟರ್ ಅಗಿ ಕಾರ್ಯ ನಿರ್ವಹಿಸಿರುವ ಶ್ರೀಕರ್ ಪ್ರಸಾದ್ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ.
ಕನ್ನಡ, ತೆಲುಗು,ತಮಿಳು, ಹಿಂದಿ, ಇಂಗ್ಲೀಷ್, ಮಲೆಯಾಳಂ ಸೇರಿ ಭಾರತದ 17 ಭಾಷೆಗಳ ಚಿತ್ರಗಳಲ್ಲಿ ವೀಡೀಯೋ ಎಡಿಟರ್ ಆಗಿ ಕಾರ್ಯ ನಿರ್ವಹಿಸಿರುವ ಶ್ರೀಕರ್ ಪ್ರಸಾದ್ ಅವರ ಮುಡಿಗೆ ಮತ್ತೊಂದು ಗರಿ ಸೇರಿದೆ. ಎಲ್ಲ ಭಾಷಾ ಚಿತ್ರಗಳಲ್ಲೂ ತಮ್ಮ ಪ್ರಾವಿಣ್ಯತೆ ತೋರಿದ ಪ್ರಸಾದ್ ಅವರು ಮತ್ತೊಂದು ರೆಕಾರ್ಡ್ ಮಾಡಿದ್ದಾರೆ.
ಟಾಲಿವುಡ್ ಚಿತ್ರರಂಗದ ಮೂಲಕ ವೃತ್ತಿ ಆರಂಭಿಸಿದ ಶ್ರೀಕರ್ ಪ್ರಸಾದ್, ಮೂಲತಃ ಚೆನ್ನೈನವರು. 7 ಬಾರಿ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ಪಡೆದಿರುವ ಶ್ರೀಕರ್ ಅವರ ಹೆಸರು ಈ ಹಿಂದೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನ 'ಪೀಪಲ್ ಆಫ್ ದಿ ಇಯರ್ 2013'ನಲ್ಲಿಯೂ ಸೇರಿಸಲಾಗಿತ್ತು.
ಲಿಮ್ಕಾ ರೆಕಾರ್ಡ್'ಗೆ ನಗರದ ಯೆಜ್ಡಿ- ಜಾವಾ ಬೈಕ್'ಗಳು
ಅತಿ ಹೆಚ್ಚು ಭಾಷೆಗಳಲ್ಲಿ ಸಂಕಲನ ಮಾಡಿರುವ ದಾಖಲೆ ಇದೀಗ ಇವರಿಗೆ ಸಂದಿದೆ. ಇತ್ತೀಚಿಗೆ ಬಿಡುಗಡೆಯಾದ 'ಸೂಪರ್ 30' 'ಸೈರಾ ನರಸಿಂಹ ರೆಡ್ಡಿ' 'ದರ್ಬಾರ್' ಹಾಗೂ 'ಸಾಹೋ' ಚಿತ್ರಗಳ ಸಂಕಲನಕಾರನಾಗಿಯೂ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೇ ರಿಲೀಸ್‌ಗೂ ಮುನ್ನವೇ ಸುದ್ದಿಯಾಗುತ್ತಿರುವ ಚಿತ್ರಗಳಾದ 'ಆರ್‌ಆರ್‌ಆರ್' ಹಾಗೂ 'ಇಂಡಿಯಾ 2' ಚಿತ್ರಗಳಲ್ಲೂ ಶ್ರೀಕರ್ ಕೆಲಸ ಮಾಡುತ್ತಿದ್ದಾರೆ.
