Asianet Suvarna News Asianet Suvarna News

ಲಿಮ್ಕಾ ರೆಕಾರ್ಡ್'ಗೆ ನಗರದ ಯೆಜ್ಡಿ- ಜಾವಾ ಬೈಕ್'ಗಳು

ನಗರದಲ್ಲಿ ಜಾವಾ ಮತ್ತು ಯೆಜ್ಡಿ ಬೈಕ್‌ ಹೊಂದಿರುವವರು 2015ರಲ್ಲಿ ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡು ದಾಖಲೆ ನಿರ್ಮಿಸಿದ್ದೆವು. ಈ ವೇಳೆ ಲಿಮ್ಕಾ ಸದಸ್ಯರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದರು. ಇದೀಗ 2017ರ ಜನವರಿಯಲ್ಲಿ ಈ ಬೈಕ್‌'ಗಳನ್ನು ಲಿಮ್ಕಾ ದಾಖಲೆಗೆ ಸೇರ್ಪಡೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

yezdi and java bikes in bengaluru limca record

ಬೆಂಗಳೂರು(ಏ. 09): ಯುವಕರ ನೆಚ್ಚಿನ ಬೈಕ್‌ಗಳಾದ ಜಾವಾ ಮತ್ತು ಯೆಜ್ಡಿ ಬೈಕ್‌ಗಳು ಲಿಮ್ಕಾ ದಾಖಲೆಯಲ್ಲಿ ಸ್ಥಾನ ಪಡೆದಿವೆ. ಬೆಂಗಳೂರು ಜಾವಾ ಯೆಜ್ಡಿ ಮೋಟಾರ್‌ಸೈಕಲ್‌ ಕ್ಲಬ್‌ ಮತ್ತು ‘ಜಾವಾ ನನ್ನ ಜೀವ' ಸಂಸ್ಥೆಯ ಸಹಯೋಗದಲ್ಲಿ ಶನಿವಾರ ನಗರದ ಪ್ರೆಸ್‌'ಕ್ಲಬ್‌'ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯ ಲೋಕೇಶ್‌ ಮಾತನಾಡಿ, ಯೆಜ್ಡಿ ಮತ್ತು ಜಾವಾ ಬೈಕ್‌'ಗಳ ಉತ್ಪಾದನೆ ಸ್ಥಗಿತಗೊಂಡು 21 ವರ್ಷ ಕಳೆದಿದೆ. ಅಂದರೆ 1996ರಲ್ಲಿ ಉತ್ಪಾದನೆ ಮತ್ತು ಮಾರಾಟ ಸ್ಥಗಿತಗೊಂಡಿದೆ. ಈ ನಡುವೆ ನಗರದಲ್ಲಿ ಇಂದಿಗೂ 537 ಬೈಕ್‌'ಗಳು ಸಂಚಾರ ಮುಂದುವರಿಸಿವೆ. ಅವುಗಳ ಕಾರ್ಯಕ್ಷಮತೆ ಮತ್ತು ಇನ್ನು ಕೆಲ ಮಾನದಂಡ ಆಧರಿಸಿ ‘ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌' ಸಂಸ್ಥೆ ಲಿಮ್ಕಾ ದಾಖಲೆಗೆ ಸೇರಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನಗರದಲ್ಲಿ ಜಾವಾ ಮತ್ತು ಯೆಜ್ಡಿ ಬೈಕ್‌ ಹೊಂದಿರುವವರು 2015ರಲ್ಲಿ ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡು ದಾಖಲೆ ನಿರ್ಮಿಸಿದ್ದೆವು. ಈ ವೇಳೆ ಲಿಮ್ಕಾ ಸದಸ್ಯರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದರು. ಇದೀಗ 2017ರ ಜನವರಿಯಲ್ಲಿ ಈ ಬೈಕ್‌'ಗಳನ್ನು ಲಿಮ್ಕಾ ದಾಖಲೆಗೆ ಸೇರ್ಪಡೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಬಿಗ್‌'ಬಾಸ್‌ ಖ್ಯಾತಿಯ ಎನ್‌.ಸಿ. ಅಯ್ಯಪ್ಪ, ಸಂಘದ ಸದಸ್ಯ ಚಕ್ರವರ್ತಿ ಸೇರಿದಂತೆ ಇನ್ನಿತರ ಸದಸ್ಯರು ಇದ್ದರು.

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios