Karnataka Budget 2023: ಖಾಸಗಿ ಸಹಭಾಗಿತ್ವದಲ್ಲಿ ಮೈಸೂರಿನಲ್ಲಿ ಚಿತ್ರನಗರಿ, ಸಿಎಂ ಸಿದ್ದರಾಮಯ್ಯ

ಡಾ.ರಾಜ್‌ ಸ್ಮಾರಕದ ಬಳಿ ಚಿತ್ರರಂಗದ ಇತಿಹಾಸ ದಾಖಲಿಸುವ ಮ್ಯೂಸಿಯಂ, ಕನ್ನಡದ ಗುಣಾತ್ಮಕ ಚಿತ್ರಗಳಿಗೆ ಸಹಾಯಧನ ನೀಡಲು ಆಯ್ಕೆ ಸಮಿತಿ ರಚನೆ

Film City in Mysuru With Private Partnership Says CM Siddaramaiah grg

ಮೈಸೂರು(ಜು.08):  ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸುವ ಕುರಿತಂತೆ ಬಜೆಟ್‌ನಲ್ಲಿ ಮತ್ತೊಮ್ಮೆ ಘೋಷಣೆಯಾಗಿದ್ದು, ಈ ಬಾರಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ತಿಳಿಸಿದ್ದಾರೆ.

2015-16ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಚಿತ್ರನಗರಿ ಸ್ಥಾಪಿಸಲು ಘೋಷಿಸಲಾಗಿತ್ತು. ಆನಂತರ ಅದು ಜಾರಿಗೆ ತಂದಿರಲಿಲ್ಲ. ಈ ಹಿಂದೆ ಘೋಷಿಸಿದಂತೆ ಮೈಸೂರಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿ ನಿರ್ಮಿಸಲಾಗುವುದು ಎಂದು ಹೇಳಲಾಗಿದೆ. ಬೆಂಗಳೂರಿನ ಡಾ. ರಾಜ್‌ಕುಮಾರ್‌ ಸ್ಮಾರಕದ ಬಳಿ ಕನ್ನಡ ಚಿತ್ರರಂಗ ಬೆಳೆದು ಬಂದ ಇತಿಹಾಸ ದಾಖಲಿಸುವ ವಸ್ತು ಸಂಗ್ರಹಾಲಯ ನಿರ್ಮಾಣ, ಕನ್ನಡದ ಗುಣಾತ್ಮಕ ಚಿತ್ರಗಳಿಗೆ ಸಹಾಯಧನ ನೀಡಲು ಆಯ್ಕೆ ಸಮಿತಿ ರಚಿಸುವ ಬಗ್ಗೆಯೂ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಕನಸಾಗಿಯೇ ಉಳಿದ ಚಿತ್ರನಗರಿ ಯೋಜನೆ: ಸರ್ಕಾರದ ಮುಂದೆ ಬೇಡಿಕೆ ಇಡಲು ಚಿತ್ರರಂಗ ಸಿದ್ಧತೆ

ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೀಡುತ್ತಿರುವ ಮಾಸಾಶನವನ್ನು 10ರಿಂದ 12 ಸಾವಿರ ರು.ಗೆ ಹೆಚ್ಚಿಸುವುದು ಹಾಗೂ ಮಾಸಾಶನ ಪಡೆಯುವ ಪತ್ರಕರ್ತರು ಮೃತಪಟ್ಟರೆ ನೀಡಲಾಗುವ ಕುಟುಂಬ ಮಾಸಾಶನ ಮೊತ್ತವನ್ನು 3 ಸಾವಿರ ರು.ನಿಂದ ಆರು ಸಾವಿರ ರು.ಗೆ ಹೆಚ್ಚಿಸುವುದಾಗಿ ತಿಳಿಸಲಾಗಿದೆ.

ಚಿತ್ರನಗರಿ, ವಸ್ತು ಸಂಗ್ರಹಾಲಯ ಸ್ವಾಗತಾರ್ಹ

ನಮ್ಮ ಬಹು ವರ್ಷಗಳ ಬೇಡಿಕೆಯೇ ಚಿತ್ರನಗರಿ. ಈ ಬಾರಿಯ ಬಜೆಟ್‌ನಲ್ಲಾದರೂ ಪೂರ್ಣಗೊಳ್ಳುತ್ತದೆಂಬ ನಂಬಿಕೆ ಇದೆ. ಚಿತ್ರೋದ್ಯಮದ ಆಸೆಯಂತೆ ಚಿತ್ರನಗರಿ ನಿರ್ಮಿಸುತ್ತೇವೆ ಎನ್ನುವ ಸಿಎಂ ಸಿದ್ದರಾಮಯ್ಯ ಅವರ ಪ್ರಕಟಣೆ ಒಳ್ಳೆಯದು. ಕಾರಣಾಂತರಗಳಿಂದ ಸ್ಥಗಿತ ಮಾಡಿದ್ದ ಸಹಾಯಧನವನ್ನು ಈ ವರ್ಷದಿಂದ ಕೊಡಲು ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ಚಿತ್ರರಂಗದ ಪರವಾಗಿ ಕೃತಜ್ಞತೆಗಳು. ಇನ್ನು ಕಂಠೀರವ ಸ್ಟುಡಿಯೋದ ಡಾ ರಾಜ್‌ಕುಮಾರ್‌ ಸ್ಮಾರಕದ ಬಳಿ ಚಿತ್ರರಂಗ ನಡೆದು ಬಂದ ಇತಿಹಾಸವನ್ನು ದಾಖಲಿಸುವ ವಸ್ತು ಸಂಗ್ರಹಾಲಯ ನಿರ್ಮಾಣದ ಘೋಷಣೆ ತುಂಬಾ ಉಪಯುಕ್ತ ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮಾ ಹರೀಶ್‌ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios