Asianet Suvarna News Asianet Suvarna News

ಮುಂಬೈ ಸ್ಟ್ರೀಟ್‌ನಲ್ಲಿ ರಾಕಿ ಭಾಯ್: ಮುಗಿಬಿದ್ದ ಫ್ಯಾನ್ಸ್

  • ಮುಂಬೈ ಸ್ಟ್ರೀಟ್‌ನಲ್ಲಿ ರಾಕಿ ಭಾಯ್ ಯಶ್
  • ಕೆಜಿಎಫ್ ಸ್ಟಾರ್‌ನನ್ನು ನೋಡಿ ಮುಗಿಬಿದ್ದ ಮಂದಿ
Fans rush to take selfie with KGF star Yash in Mumbai street dpl
Author
Bangalore, First Published Oct 10, 2021, 6:19 PM IST
  • Facebook
  • Twitter
  • Whatsapp

ಕೆಜಿಎಫ್ ಸಿನಿಮಾ ನಂತರ ರಾಕಿಂಗ್ ಸ್ಟಾರ್ ಯಶ್(Yash) ನ್ಯಾಷನಲ್ ಸ್ಟಾರ್ ಆಗಿದ್ದಾರೆ. ದೇಶಾದ್ಯಂತ ಮಾತ್ರವಲ್ಲದೆ ವಿದೇಶದಲ್ಲಿಯೂ ಭಾರಿ ಹಿಟ್ ಆದ ಸಿನಿಮಾದ ನಟ ಅಂದ್ರೆ ಈಗ ನಾರ್ತ್ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಸಖತ್ ಕ್ರೇಜ್. ಯಶ್‌ನನ್ನು ನೋಡಿ ಜನರು ಫಿದಾ ಆಗಿದ್ದಾರೆ. ಸ್ಯಾಂಡಲ್‌ವುಡ್(Sandalwood) ನಟನ ಸ್ಟಾರ್ ರೇಂಜ್ ತೋರಿಸೋ ವಿಡಿಯೋ ಒಂದು ಈಗ ವೈರಲ್(Viral) ಆಗಿದೆ.

ನಟ ಯಶ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ(Mumbai) ಯಶ್‌ನನ್ನು ನೋಡಿದ ಜನ ಫುಲ್ ಖುಷಿಯಾಗಿ ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ನಟ ಯಶ್ ಸರಳತೆಯಿಂದ ಅಭಿಮಾನಿಗಳಿಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ದೇಶಾದ್ಯಂತ ಸದ್ದು ಮಾಡಿದ ಕೆಜಿಎಫ್ ಸಿನಿಮಾ ಹೀರೋ ಎದುರು ಬಂದ್ರೆ ಸುಮ್ನೇನಾ ಮತ್ತೆ ?

Daughter's Day: ರಾಕಿಂಗ್ ಕಪಲ್ ಶೇರ್ ಮಾಡಿಕೊಂಡ ಮುದ್ದಾದ ಫೋಟೋ!

ಸಿನಿಮಾ ಸಂಬಂಧಿಸಿ ನಟ ಹೈದರಾಬಾದ್ ಹಾಗೂ ಮುಂಬೈಗೆ ಪ್ರಯಾಣಿಸುತ್ತಿರುತ್ತಾರೆ. ಕೆಜಿಎಫ್ ಶೂಟಿಂಗ್ ಕೂಡಾ ಹೈದರಾಬಾದ್‌ನಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ನಟ ಏರ್ಪೋಟ್‌ನಲ್ಲಿ ಕಾಣಿಸಿಕೊಂಡಾಗಲೂ ಅಭಿಮಾನಿಗಳು ಖುಷಿಯಾಗಿದ್ದರು. ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ಯಶ್ ಏರ್‌ಪೋರ್ಟ್‌ ಲುಕ್‌ ಹೊಸ ಕ್ರೇಜ್ ಕ್ರಿಯೇಟ್ ಮಾಡುತ್ತಿದೆ.

"

ಒಂದಷ್ಟು ಸಮಯದ ಹಿಂದೆ ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್ ಮುಂಬೈ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿತ್ತು. ಕ್ಯಾರವ್ಯಾನ್‌ನಿಂದ ಇಳಿಯುವಾಗ ಅಭಿಮಾನಿಗಳು ಸೆಲ್ಫಿಗಾಗಿ ಮುಗ್ಗಿ ಬಿದ್ದಿದ್ದರು.

ಯಶ್ ಜೊತೆ ಸಿನಿಮಾ ಮಾಡಬೇಕು ಎಂದು ಬಾಲಿವುಡ್‌ನಿಂದ ನಿರ್ಮಾಪಕರು ಬರುತ್ತಿದ್ದಾರ. ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ಯಶ್ ಸೈಲೆಂಟ್ ಆಗಿ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಯಾವ ಸದ್ಯ ಕಾಲ್‌ಶೀಟ್‌ ಫ್ರೀ ಇಲ್ಲ ಎಂದಿದ್ದಾರೆ. ಕಾಲ್‌ಶೀಟ್‌ ಇಲ್ಲ ಎಂದು ನಿರ್ಮಾಪಕರು ಮುಂಬೈಗೆ ವಾಪಸ್ ಆಗಿದ್ದಾರೆ ಅನ್ನೋದು ಸುದ್ದಿಯೂ ಕೇಳಿ ಬಂದಿತ್ತು.

Follow Us:
Download App:
  • android
  • ios