ಇದೇ ಮಾಚ್‌ರ್‍ 15ರಂದು ತೆರೆಗೆ ಬರುವುದಕ್ಕೆ ಸಿದ್ದವಾಗಿದೆ. ಬಹುತೇಕ ಹೊಸಬರನ್ನೇ ಹಾಕಿಕೊಂಡು ಸಂದೀಪ್‌, ಈ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ. ನಟ ಉಪೇಂದ್ರ ಅವರ ಜೊತೆ ಐದು ವರ್ಷಗಳ ಕಾಲ ಸಹಾಯಕ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಅನುಭವದ ಮೇರೆಗೆ ತಾನೇ ಕತೆ ಬರೆದು ‘ಫೇಸ್‌ ಟು ಫೇಸ್‌’ ಚಿತ್ರವನ್ನು ನಿರ್ದೇಶಿಸಿದ್ದಾರೆ ಸಂದೀಪ್‌ ಜನಾರ್ದನ್‌.

ಭಾನುಪ್ರಕಾಶ್‌ ಈ ಚಿತ್ರದ ನಾಯಕ, ಈಗಾಗಲೇ ‘ಪ್ರೀತಿ ಕಿತಾಬು’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಪೂರ್ವಿ ಜೋಷಿ ಈ ಚಿತ್ರದ ನಾಯಕಿ. ದಿವ್ಯಾ ಉರುಡುಗ ಚಿತ್ರದ ಮತ್ತೊಬ್ಬ ನಾಯಕಿ. ‘ನಾನು ಕತೆ ಬರೆದ ಮೇಲೆ ಸಾಕಷ್ಟುವರ್ಷ ನಿರ್ಮಾಪಕರಿಗಾಗಿ ಕಾದೆ. ಆದರೆ, ನಿರ್ಮಾಪಕರು ಸಿಗಲಿಲ್ಲ. ಕೊನೆಗೆ ನನ್ನ ಅಮ್ಮ ಸುಮಿತ್ರಾ ಅವರಿಗೆ ನನ್ನ ಕಷ್ಟಅರ್ಥವಾಗಿ ಹಣ ಹೂಡಿದರು. ಕಡಿಮೆ ಬಜೆಟ್‌ನಲ್ಲಿ ಮಾಡಬೇಕೆಂದು ನಿರ್ಧರಿಸಿದೆ. ಆದರೆ ಗುಣಮಟ್ಟಬೇಕೆಂದು ಹೊರಟಾಗ ಬಂಡವಾಳ ಡಬ್ಬಲ್‌ ಆಯಿತು.

ರೋಚಕವಾಗಿದೆ ’ಫೇಸ್ 2 ಫೇಸ್’ ಟ್ರೇಲರ್

ಟೈಲರಿಂಗ್‌ ಮಾಡಿಕೊಂಡು ಜೀವನ ಮಾಡುತ್ತಿರುವ ನಮಗೆ ಸಿನಿಮಾ ಯಾಕೆ ಬೇಕು ಅನಿಸಿದ್ದು ಇದೆ. ಆದರೆ, ನನ್ನ ಪ್ರತಿಭೆ ಏನೂ ಅಂತ ತೋರಿಸಬೇಕಿತ್ತು. ಹೀಗಾಗಿ ಸಿನಿಮಾಗೆ ನಾವೇ ಬಂಡವಾಳ ಹೂಡಿದ್ವಿ. ಇದು ಎರಡು ಮುಖವಾಡ ಇರುವ ಕತೆಯಾಗಿದೆ. ಕ್ರೇಜಿಮೈಂಡ್‌ ಶ್ರೀ ಸಂಕಲನ ಈ ಚಿತ್ರಕ್ಕಿದೆ. ಇಲ್ಲಿಯವರೆಗೂ ಸುಮಾರು ಮೂರು ಕೋಟಿಗೂ ಅಧಿಕ ಖರ್ಚು ಮಾಡಲಾಗಿದೆ. ಸಿನಿಮಾ ಜನರಿಗೆ ಇಷ್ಟವಾದರೆ ನಾವು ಸೇಫ್‌’ ಎಂದು ಭವಿಷ್ಯದ ಕನಸಿನಲ್ಲಿ ಚಿತ್ರದ ಕುರಿತು ಹೇಳಿಕೊಳ್ಳುತ್ತಾರೆ ನಿರ್ದೇಶಕ ಸಂದೀಪ್‌ ಜನಾರ್ದನ್‌.