ಬೆಂಗಳೂರು (ಫೆ.18): ಯುವ ಪ್ರತಿಭೆಗಳು ಸೇರಿಕೊಂಡು ಸಿದ್ಧಪಡಿಸುತ್ತಿರುವ ಸಿನಿಮಾ ಫೇಸ್ 2 ಫೇಸ್. ಇದೊಂದು ಥ್ರಿಲ್ಲರ್ ಫ್ರೇಮ ಕಥೆ ಹೊಂದಿರುವ ಸಿನಿಮಾ. ಇದು ತ್ರಿಕೋನ ಪ್ರೇಮಕಥೆಯನ್ನು ಹೊಂದಿದೆ. 

ಸಂದೀಪ್ ಜನಾರ್ಧನ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿಕ್ಕ ಮಗಳೂರು, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಜಯಂತ್ ಕಾಯ್ಕಿಣಿ, ವಿ ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. ನಾಯಕನಾಗಿ ರೋಹಿತ್ ಭಾನು ಪ್ರಕಾಶ್ ನಟಿಸಿದ್ದಾರೆ.  ಪೂರ್ವಿ ಜೋಷಿ ಹಾಗೂ ದಿವ್ಯಾ ಹುರುಡಗ ನಾಯಕಿಯರಾಗಿ ನಟಿಸಿದ್ದಾರೆ. 

ಈ ಚಿತ್ರದ ಟ್ರೇಲರ್ ರಿಲೀಸಾಗಿದ್ದು ರೋಚಕತೆ ಮೂಡಿಸಿದೆ.