ಪೆಂಟಗನ್ ಹೆಸರಿನಲ್ಲಿ ಐದು ಕತೆಗಳನ್ನು ಒಳಗೊಂಡ ಸಿನಿಮಾ ದುನಿಯಾ ಕಿಶೋರ್ ಹಾಗೂ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಟನೆ

ನಿರ್ದೇಶಕ ಗುರು ದೇಶಪಾಂಡೆ ಪೆಂಟಗನ್ ಹೆಸರಿನಲ್ಲಿ ಐದು ಕತೆಗಳನ್ನು ಒಳಗೊಂಡ ಸಿನಿಮಾ ನಿರ್ಮಿಸುತ್ತಿದ್ದು, ಈ ಪೈಕಿ ಒಂದು ಕತೆಗೆ ದುನಿಯಾ ಕಿಶೋರ್ ಹಾಗೂ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ.

ಇವರಿಬ್ಬರು ನಟಿಸುತ್ತಿರುವ ಕತೆಯನ್ನು ಗುರು ದೇಶಪಾಂಡೆ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ತಂಡಕ್ಕೆ ನಟಿ ಅಪೂರ್ವ ಸೇರ್ಪಡೆಗೊಂಡಿದ್ದರು.

'ಪೆಂಟಗನ್‌'ನ ಐವರು ನಿರ್ದೇಶಕರ ಕತೆ ಕೇಳಿ;ಉಳಿದ ವಿವರಗಳು ಲಭ್ಯವಿಲ್ಲ!.

ಈಗ ಪೃಥ್ವಿ ಹಾಗೂ ಕಿಶೋರ್ ಜತೆಯಾಗಿದ್ದಾರೆ. ‘4 ಕತೆಗಳಿಗೆ ಚಿತ್ರೀಕರಣ ಮುಕ್ತಾಯ ಆಗಿದೆ. ಐದನೇ ಕತೆ ನಾನು ನಿರ್ದೇಶನ ಮಾಡುತ್ತಿದ್ದೇನೆ. ಇದೊಂದು ನೈಜ ಘಟನೆಗಳನ್ನು ಆಧರಿಸಿದ ಕತೆ’ ಎನ್ನುತ್ತಾರೆ ಗುರು ದೇಶಪಾಂಡೆ

ಸ್ಯಾಂಡಲ್‌ವುಡ್‌ ನಿರ್ದೇಶಕ ಗುರು ದೇಶಪಾಂಡೆ ಪತ್ನಿ ಪ್ರೀತಿಕಾ ಇದೀಗ ಪೆಂಟಗನ್ ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮೇ.24 ಪ್ರೀತಿಕಾ ಹುಟ್ಟುಹಬ್ಬದ ಪ್ರಯುಕ್ತಾ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ.