Asianet Suvarna News Asianet Suvarna News

ಪಂಡರೀಬಾಯಿಗೆ ನನ್ 'ಗುರು' ಅಂತಿದ್ರಂತೆ ಡಾ. ರಾಜ್‌ಕುಮಾರ್ !

ಡಾ ರಾಜ್‌ಕುಮಾರ್ ಅವರು ಮೊಟ್ಟಮೊದಲು ನಟಿಸಿದ ಸಿನಿಮಾ 'ಬೇಡರ ಕಣ್ಣಪ್ಪ'. ನಿರ್ದೇಶಕರು ಏನು ಹೇಳುತ್ತಿದ್ದಾರೆ ಎಂಬುದೇ ಅರ್ಥವಾಗದೇ ಅಣ್ಣಾವ್ರು ಅಂದು ತುಂಬಾ ದಿಗಿಲು ಗೊಂಡಿದ್ದರು. ಆಗ ಸಹಾಯ ಮಾಡಿದ್ದೇ ಈ ನಟಿ ಪಂಡರಿಬಾಯಿ.. ಏನ್ ಮಾಡಿದ್ರು ನಟಿ ಪಂಡರೀಬಾಯಿ?..

Dr Rajkumar respects actress Pandari Bai throughout his life srb
Author
First Published Sep 14, 2024, 1:10 PM IST | Last Updated Sep 14, 2024, 1:10 PM IST

ಕನ್ನಡದ ವರನಟ ಡಾ ರಾಜ್‌ಕುಮಾರ್ (Dr Rajkumar) ಅವರಿಗೆ ಪಂಡರಿಬಾಯಿ (Pandari Bai) ಅಂದ್ರೆ ತುಂಬಾ ಅಕ್ಕರೆ. ಅಕ್ಕರೆ ಅನ್ನೋದಕ್ಕಿಂತ ಅವರನ್ನು ಕಂಡರೆ ಡಾ ರಾಜ್‌ ಅವರಿಗೆ 'ಗುರು' ಎನ್ನುವ ಭಾವನೆಯೇ ಬಲವಾಗಿತ್ತು ಎನ್ನಲಾಗಿದೆ. ಅದಕ್ಕೆ ಬಲವಾದ ಕಾರಣ ಕೂಡ ಇದೆ. ಡಾ ರಾಜ್‌ಕುಮಾರ್ ಅವರು ಮೊಟ್ಟಮೊದಲು ನಟಿಸಿದ ಸಿನಿಮಾ 'ಬೇಡರ ಕಣ್ಣಪ್ಪ' ಈ ಸಿನಿಮಾ ಶೂಟಿಂಗ್ ಸಮಯದಲ್ಲಿ ಡಾ ರಾಜ್‌ಕುಮಾರ್ ಜೊತೆ ನಟಿ ಪಂಡರಿಬಾಯಿ ಇದ್ದರು. 

ಡಾ ರಾಜ್‌ಕುಮಾರ್, ಪಂಡರಿ ಬಾಯಿ, ನರಸಿಂಹ ರಾಜು, ಜಿವಿ ಅಯ್ಯರ್ ಹಾಗೂ ರಾಜಸುಲೋಚನಾ. ಹೆಚ್‌ಆರ್ ಶಾಸ್ತ್ರಿ  ಬೇಡರ ಕಣ್ಣಪ್ಪ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರವು 1954ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಮುಖಾಂತರ ಡಾ ರಾಜ್‌ಕುಮಾರ್ ಎಂಬ 'ಮುತ್ತು' ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ. ಈ ಚಿತ್ರದಲ್ಲಿ ಶೂಟಿಂಗ್ ವೇಳೆಯಲ್ಲಿ ನಡೆದ ಘಟನೆಯೇ ಡಾ ರಾಜ್‌ ಹಾಗು ಪಂಡರಿಬಾಯಿ ನಡುವಿನ ಆಪ್ತ ಸಂಬಂಧಕ್ಕೆ ಕಾರಣ. 

ಇಪ್ಪತ್ತೈದು ವರ್ಷಗಳ ಬಳಿಕ ಮತ್ತೆ ಬಂದ 'ನಾನು'..; ಉಪೇಂದ್ರ ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ?

ಅಂದು ಆಗಿದ್ದು ಇಷ್ಟು. ಡಾ ರಾಜ್‌ಕುಮಾರ್ ಅವರಿಗೆ ಅದು ಮೊದಲ ಸಿನಿಮಾ. ಹೇಳಿಕೇಳಿ ಡಾ ರಾಜ್‌ ಅವರಿಗೆ ಬರುತ್ತಿದ್ದ ಭಾಷೆಗಳು ಎಂದರೆ ಕನ್ನಡ ಹಾಗು ತಮಿಳು. ಆದರೆ, ಬೇಡರ ಕಣ್ಣಪ್ಪ ಚಿತ್ರದ ನಿರ್ದೇಶಕರಾದ ಹೆಚ್‌ಎಲ್‌ಎನ್ ಸಿಂಹ (HLN Simha) ಅವರು ಹೆಚ್ಚಾಗಿ ಮಾತನಾಡುತ್ತಿದ್ದುದು ಇಂಗ್ಲೀಷಿನಲ್ಲೇ ಆಗಿತ್ತು. ನಿರ್ದೇಶನ ಮಾಡುವಾಗ ಅವರು ಕೊಡುತ್ತಿದ್ದ ಸೂಚನೆಗಳೆಲ್ಲವೂ ಇಂಗ್ಲೀಷಿನಲ್ಲೇ ಇರುತ್ತಿದ್ದವಾದ್ದರಿಂದ ಡಾ ರಾಜ್‌ ಅವರಿಗೆ ತುಂಬಾ ಕಷ್ಟವಾಗಿತ್ತು. 

ನಿರ್ದೇಶಕರು ಏನು ಹೇಳುತ್ತಿದ್ದಾರೆ ಎಂಬುದೇ ಅರ್ಥವಾಗದೇ ಅಣ್ಣಾವ್ರು ಅಂದು ತುಂಬಾ ದಿಗಿಲು ಗೊಂಡಿದ್ದರು. ಆಗ ಸಹಾಯ ಮಾಡಿದ್ದೇ ಈ ನಟಿ ಪಂಡರಿಬಾಯಿ ಅವರು. ಕಾರಣ, ನಟಿ ಪಂಡರಿಬಾಯಿ ಅವರಿಗೆ ಇಂಗ್ಲಿಷ್ ಆ ಕಾಲದಲ್ಲಿಯೇ ಚೆನ್ನಾಗಿ ಬರುತ್ತಿತ್ತು. ಜೊತೆಗೆ, ಕನ್ನಡ, ತಮಿಳು ಹಾಗು ತೆಲುಗು ಭಾಷೆಗಳನ್ನೂ ಅವರು ಚೆನ್ನಾಗಿ ಬಲ್ಲವರಾಗಿದ್ದು, ಈ ಎಲ್ಲಾ ಭಾಷೆಗಳಲ್ಲಿ ಮಾತುಕತೆ ನಡೆಸುತ್ತಿದ್ದರು. ಹೀಗಾಗಿ ಅವರು ನಿರ್ದೇಶಕ ಸಿಂಹ ಅವರು ಹೇಳಿದ ಇಂಗ್ಲಿಂಷ್ ಸೂಚನೆಗಳನ್ನು ಟ್ರಾನ್ಸ್‌ಲೇಟ್ ಮಾಡಿ ಕನ್ನಡದಲ್ಲಿ ಡಾ ರಾಜ್‌ಕುಮಾರ್ ಅವರಿಗೆ ಹೇಳುತ್ತಿದ್ದರಂತೆ. 

ಕಾಲಾಪತ್ಥರ್ ಚಿತ್ರ ವಿಮರ್ಶೆ: ಅಹಂಕಾರದ ಅಂತರ್ಯದ್ಧದಲ್ಲಿ ದಡ ಸೇರಲು ಅಣ್ಣಾವ್ರೇ ದೇವ್ರು..!

ಈ ಚಿತ್ರದಲ್ಲಿ ನಟಿ ಪಂಡರೀಬಾಯಿ ಅವರು ನೆರವಿಗೆ ನಿಂತಿಲ್ಲ ಎಂದಿದ್ದರೆ ನಟ ಡಾ ರಾಜ್‌ಕುಮಾರ್ ಅವರು ಅಂದು ತುಂಬಾ ಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದರು. ಆಮೇಲೆ ಡಾ ರಾಜ್‌ಕುಮಾರ್ ಅವರು ತಕ್ಕ ಮಟ್ಟಿಗೆ ಇಂಗ್ಲಿಷ್ ಭಾಷೆಯನ್ನು ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದರು. ಆದರೆ ಮೊದಲ ಚಿತ್ರ ಬೇಡರ ಕಣ್ಣಪ್ಪ ವೇಳೆ ಅವರಿಗೆ ಪಂಡರೀಬಾಯಿ ಅವರೇ ಆಸರೆ ಎಂಬಂತಾಗಿದ್ದರು. ಅದಕ್ಕಾಗಿ ಅವರು ಬದುಕಿನ ಕೊನೆಯ ದಿನಗಳವರೆಗೂ ನಟಿ ಪಂಡರಿಬಾರಿ ಅವರನ್ನು ಗುರು ಸ್ಥಾನದಲ್ಲೇ ಇಟ್ಟು ಗೌರವಿಸುತ್ತಿದ್ದರು. 

Latest Videos
Follow Us:
Download App:
  • android
  • ios