ಡಾ. ರಾಜ್ ಸಿನಿಮಾದ ಹಾಡುಗಳೆಲ್ಲಾ ಎಂದೂ ಮರೆಯಲಾಗದಂತದ್ದು. ಅವರ ಸಿನಿಮಾದ ಕೇಳಲೇಬೇಕಾದ 5 ಹಾಡುಗಳು ಇಲ್ಲಿವೆ ನೋಡಿ. 

ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡುವೆ...

’ಕವಿರತ್ನ ಕಾಳಿದಾಸ’ ಚಿತ್ರದ ಈ ಹಾಡಿನಲ್ಲಿ ರಾಜ್ ಮತ್ತು ಜಯಪ್ರದಾ ಇದ್ದಾರೆ. ಕಾಳಿದಾಸನ ಶೃಂಗಾರ ಮತ್ತು ರಸಿಕರ ರಾಜನ ರಸಿಕತೆ ಬೆರೆತ ಹಾಡು ಇದು.

ಬಾಳಿಗೊಂದು ಎಲ್ಲೆ ಎಲ್ಲಿದೆ....

ರಾಜ್‌ಗೆ ಅಧ್ಯಾತ್ಮಿಕ ಹಾಡುಗಳೆಂದರೆ ಇಷ್ಟ. ಅಂಥ ಗೀತೆಗಳು ಸಿಕ್ಕಾಗ ಅವರ ಅಭಿನಯಕ್ಕೂ ಮತ್ತೊಂದು ಎತ್ತರ. ಪ್ರೇಮದಕಾಣಿಕೆ ಎಂಬ ಥ್ರಿಲ್ಲರ್ ಸಿನಿಮಾದಲ್ಲಿ ಇಂಥದ್ದೊಂದು ಹಾಡನ್ನು ಅಳವಡಿಸಿರುವುದೇ ಅಚ್ಚರಿ. ಈ ಹಾಡು ಎಲ್ಲ ಸಂದರ್ಭಕ್ಕೂ ಸೂಕ್ತ.

ಓ... ಎಂಥ ಸೌಂದರ್ಯ ಕಂಡೆ
ರವಿಚಂದ್ರ ಚಿತ್ರದ ಈ ಹಾಡಿನಲ್ಲಿ ಒಂದು ಅಚ್ಚರಿಯಿದೆ. ಹಾಡು ಶೃಂಗಾರಮಯ. ಅಭಿನಯ ಗೌರವಪೂರ್ಣ. ಈ ಸನ್ನಿವೇಶವನ್ನು ರಾಜ್ ಅತ್ಯದ್ಭುತವಾಗಿ ನಿರ್ವಹಿಸಿದ್ದಾರೆ. ಸಾಂದರ್ಭಿಕತೆ ಮತ್ತು ಅರ್ಥಪೂರ್ಣತೆ ದೃಷ್ಟಿಯಿಂದ ಅತ್ಯುತ್ತಮ ಗೀತೆ. 

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು

ಆಕಸ್ಮಿಕ ಚಿತ್ರದ ಈ ಹಾಡು ಕನ್ನಡ ನಾಡಗೀತೆ ಯಾಗುವ ಮಟ್ಟಕ್ಕೆ ಜನಪ್ರಿಯವಾದ ಹಾಡು. ಹಂಸಲೇಖ ಅದ್ಭುತವಾದ ಪದಗಳನ್ನು ಪೋಣಿಸಿ ಬರೆದ ಹಾಡು.

ಚೆಲುವೆಯೇ ನಿನ್ನ ನೋಡಲು ಮಾತುಗಳು ಬರದವನು

’ಹೊಸ ಬೆಳಕು’  ಚಿತ್ರದ ಗೀತೆ. ತಾನು ಪ್ರೀತಿಸದ ಉಪ ನಾಯಕಿಯನ್ನು ಕಂಡ ನಾಯಕ ಹಾಡುವ ಹಾಡು. ಇಲ್ಲಿ ಹೊಗಳಿಕೆಯಿದೆ, ಅವಳಿಂದ ದೂರವಿರುವ ಸೂಚನೆಯೂ ಇದೆ.