ಡಾ ರಾಜ್ ಅವರು ತಮ್ಮ ಚಿತ್ರಗಳಿಗೆ ಮಾತ್ರವಲ್ಲ, ಬೇರೆಯವರ ಚಿತ್ರಗಳಿಗೂ ಹಾಡುತ್ತಿದ್ದರು. ಆದರೆ, ಸ್ವಲ್ಪ ಕಡಿಮೆ. ಆದರೆ ಅದಕ್ಕೆ ಬಲವಾದ ಕಾರಣವಿತ್ತು. ಅದು ಹಲವರಿಗೆ ಗೊತ್ತಿಲ್ಲ. ಡಾ ರಾಜ್‌ಕುಮಾರ್ ಅವರು ನಾಟಕರಂಗದಿಂದ ಬಂದವರು. ಅಲ್ಲಿ..
ಡಾ ರಾಜ್‌ಕುಮಾರ್ (Dr Rajkumar) ಅವರ ಬಗ್ಗೆ ಅದೆಷ್ಟು ವಿಷಯ ಹೇಳಿದರೂ ಕಡಿಮೆ. ಇನ್ನಷ್ಟು ಸಂಗತಿಗಳು ಹೇಳೋದಕ್ಕೆ ಇದ್ದೇ ಇರುತ್ತವೆ. ಇಡೀ ಭಾರತದಲ್ಲಿ ನಟನೆ ಹಾಗೂ ಗಾಯನ ಎರಡನ್ನೂ ವೃತ್ತಿಪರವಾಗಿ ಮಾಡುವ ಏಕೈಕ ವ್ಯಕ್ತಿ ಎಂದರೆ ಅದು ಡಾ ರಾಜ್‌ಕುಮಾರ್. ಅಲ್ಲೊಂದು ಇಲ್ಲೊಂದು ಹಾಡೋದು ಬೇರೆ, ತಮ್ಮದು ಹಾಗೂ ಬೇರೆಯವರ ಚಿತ್ರಗಳಿಗೆ ಹಾಡೋದು ಬೇರೆ.
ಡಾ ರಾಜ್ ಅವರು ತಮ್ಮ ಚಿತ್ರಗಳಿಗೆ ಮಾತ್ರವಲ್ಲ, ಬೇರೆಯವರ ಚಿತ್ರಗಳಿಗೂ ಹಾಡುತ್ತಿದ್ದರು. ಆದರೆ, ಸ್ವಲ್ಪ ಕಡಿಮೆ. ಆದರೆ ಅದಕ್ಕೆ ಬಲವಾದ ಕಾರಣವಿತ್ತು. ಅದು ಹಲವರಿಗೆ ಗೊತ್ತಿಲ್ಲ. ಡಾ ರಾಜ್‌ಕುಮಾರ್ ಅವರು ನಾಟಕರಂಗದಿಂದ ಬಂದವರು. ಅಲ್ಲಿ ಅವರವರ ಪಾತ್ರಗಳಿಗೆ ಆಯಾ ಕಲಾವಿದರೇ ಹಾಡೋದು ಅನಿವಾರ್ಯ. ನಾಟಕದಲ್ಲಿ ಅಭಿನಯಿಸುವಾಗ ಸಂಗೀತದ ಅರಿವು ಹಾಗೂ ಗಾಯನದ ಅಗತ್ಯವಿತ್ತು. ಅಣ್ಣಾವ್ರಿಗೆ ಸಂಗೀತ ಚೆನ್ನಾಗಿ ಗೊತ್ತಿತ್ತು. ವೈಟ್ ಅಂಡ್ ಬ್ಲಾಕ್ ಚಿತ್ರಗಳಲ್ಲಿ ಹಾಡಿದ್ದರು.
ಮೊದಲ ಚಿತ್ರದ ಟೈಮಲ್ಲೇ ಇಬ್ಬರು ದಿಗ್ಗಜರಿಂದ ಪಟ್ಟಾಭಿಷೇಕ ಮಾಡಿಸಿಕೊಂಡಿದ್ದ ಅಪ್ಪು..!
ಆದರೆ, ಡಾ ರಾಜ್‌ಕುಮಾರ್ ಅವರು ಕಾಲಕಳೆದಂತೆ ಬಹಳಷ್ಟು ಸಿನಿಮಾಗಳಲ್ಲಿ ನಟಿಸತೊಡಗಿದರು. ಸಹಜವಾಗಿಯೇ ಬಹಳಷ್ಟು ಹಾಡುಗಳಿಗೆ ಧ್ವನಿಯಾಗಬೇಕಾಯ್ತು. ಆದರೆ, ಬೇರೆ ಹಿನ್ನೆಲೆ ಗಾಯಕರಿಗೆ ಅವಕಾಶ ಸಿಗಬೇಕು ಎಂದು ಹೇಳಿದ್ದರು. ಹೀಗಾಗಿ ಡಾ ರಾಜ್‌ಕುಮಾರ್ ಅಭಿನಯಕ್ಕೆ ಹಲವರ ಗಾಯನ ನಿರಂತರವಾಗಿ ನಡೆದಿತ್ತು. ಪಿಬಿ ಶ್ರೀನಿವಾಸ್, ಜೇಸುದಾಸ್, ಘಂಟಸಾಲಾ ಹಾಗೂ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರೆಲ್ಲರ ಹಿನ್ನೆಲೆ ಗಾಯನ ಡಾ ರಾಜ್‌ಕುಮಾರ್ ನಟನೆಯ ಡಾ ರಾಜ್‌ಕುಮಾರ್ ಸಿನಿಮಾಗಳಿಗೆ ಇತ್ತು.
ಈ ಹಿನ್ನೆಲೆಯಲ್ಲಿ ಅವರು ಬೇರೆಯವರ ಚಿತ್ರಗಳಲ್ಲಿ ಹೆಚ್ಚಾಗಿ ಹಾಡುತ್ತಿರಲಿಲ್ಲ. ತಾವೇ ತಮ್ಮ ಚಿತ್ರಗಳಿಗೆ ಹಾಡಲು ಶುರು ಮಾಡಿದ ನಂತರ ಬದಲಾವಣೆ ಆಯ್ತು. ಆದರೆ, ಬೇರೆಯವರ ಹಾಡೋ ಚಾನ್ಸ್ ಕಿತ್ತುಕೊಂಡ ಭಾವನೆ ಅಣ್ಣವ್ರನ್ನು ಕಾಡತೊಡಗಿತ್ತು. ಹೀಗಾಗಿ ಅವರು ತಾವು ಹಾಡಿದ್ದಕ್ಕೆ ಸಂಭಾವನೆ ಪಡೆಯುತ್ತಿರಲಿಲ್ಲ. ಅಣ್ಣಾವ್ರು ಹಾಡಿದ ಚಿತ್ರಗಳು ಹಿಟ್ ಆಗುತ್ತಿದ್ದವು. ಹಿರಿಯ ಹಾಗೂ ಕಿರಿಯ ನಟರುಗಳ ಚಿತ್ರಗಳಿಗೂ ಗಾಯನ ಮಾಡುತ್ತಿದ್ದರು. ತಮ್ಮ ಹಾಡಿನಿಂದ ಬಂದ ಹಣ ಸಮಾಜಸೇವೆಗೆ ಮೀಸಲು ಆಗಿಡುತ್ತಿದ್ದರು.
ಗೌರವ ಪಡೆದು ಪ್ರಥಮ್ ಮಾಡಿರೋ ಪೋಸ್ಟ್ ವೈರಲ್.. 'ಅಣ್ಣಾ, ಬಾಸು ಅನ್ನೋಕು ದುಡ್ಡು ಕೊಡ್ತಾರಪ್ಪ..'
ಸಮಾಜಮುಖಿ ಕಾರ್ಯಗಳಿಗೆ ಅಣ್ಣಾವ್ರು ಹಾಡಿದ ಆ ಹಾಡುಗಳ ಸಂಭಾವನೆ ಬಳಕೆ ಆಗುತ್ತಿತ್ತು. ರಸಸಂಜೆ ಕಾರ್ಯಕ್ರಮಗಳಲ್ಲಿ ಅಣ್ಣಾವ್ರು ಹಾಡುತ್ತಿದ್ದರು, ಅದರ ಸಂಭಾವನೆ ಕೂಡ ಸಮಾಜಸೇವೆಗೆ ಮೀಸಲು ಇಡುತ್ತಿದ್ದರು. ಡಾ ರಾಜ್‌ಕುಮಾರ್ ರಸಸಂಜೆಗೆ ಸಾವಿರಾರು ಮಂದಿ ಸೇರುತ್ತಿದ್ದರು. ಆ ರಸಸಂಜೆ ಕಾರ್ಯಕ್ರಮದಿಂದ ಬಂದ ಹಣದಿಂದ ಸಂಘ-ಸಂಸ್ಥೆಗಳ ಕಲ್ಯಾಣಕಾರ್ಯಗಳು ನಡೆಯುತ್ತಿದ್ದವು. ಅಪ್ಪಾಜಿಯ ಇದೇ ಕಾಯಕವನ್ನು ಪುನೀತ್ ರಾಜ್‌ಕುಮಾರ್ (Puneeth Rajkumar) ಕೂಡ ಮುಂದುವರಿಸಿದ್ದರು. ಅಪ್ಪು ಹಾಡುತ್ತಿದ್ದುದು ಕೂಡ ಇದೇ ಕಾರಣಕ್ಕೆ ಎನ್ನಲಾಗುತ್ತದೆ.
