Asianet Suvarna News Asianet Suvarna News

ಡಾ ರಾಜ್‌ಕುಮಾರ್-ಡಾ ವಿಷ್ಣುವರ್ಧನ್ ಮಧ್ಯೆ ದ್ವೇಷವಿತ್ತೇ; ತೀರಾ ಹಳೆಯ ಗುಟ್ಟು ರಟ್ಟಾಯ್ತು!

ಒಂದು ಘಟನೆ ಡಾ ರಾಜ್‌ಕುಮಾರ್ ನಟನೆಯ 'ಬಂಗಾರದ ಮನುಷ್ಯ ಹಾಗೂ ಡಾ ವಿಷ್ಣುವರ್ಧನ್ ನಟನೆಯ 'ನಾಗರಹಾವು' ಚಿತ್ರಗಳ ಬಿಡುಗಡೆ ಸಂದರ್ಭದಲ್ಲಿ ನಡದಿದೆ ಎನ್ನಲಾಗಿದೆ. ಸಾಗರ್ ಥಿಯೇಟರ್‌ನಲ್ಲಿ ವಿಷ್ಣುವರ್ಧನ್ ನಟನೆಯ 'ನಾಗರಹಾವು' ಚಿತ್ರವು 100 ದಿನಗಳನ್ನು ಪೂರೈಸಿತ್ತು..

Dr Rajkumar and Dr Vishnuvardhan star war and controversy gossip at Sandalwood srb
Author
First Published Feb 14, 2024, 1:48 PM IST

ಸ್ಯಾಂಡಲ್‌ವುಡ್ ಸ್ಟಾರ್ ವಾರ್ ಎಂದರೆ ಮೊದಲಿಗೆ ನೆನಪಿಗೆ ಬರುವದೇ ಮೇರು ನಟರಾದ ಡಾ ರಾಜ್‌ಕುಮಾರ್ (Dr Rajkumar) ಹಾಗು ವಿಷ್ಣುವರ್ಧನ್ (Dr Vishnuvardhan) ನಡುವೆ ಇತ್ತು ಎನ್ನಲಾಗುವ 'ಕೋಲ್ಡ್ ವಾರ್' ಗಾಸಿಪ್. ಆದರೆ, ನಿಜವಾಗಿ ನೋಡಿದರೆ ಡಾ ರಾಜ್-ವಿಷ್ಣು ಮಧ್ಯೆ ಯಾವುದೇ ಮನಸ್ತಾಪ ಅಥವಾ ಜಗಳಗಳು ಇರಲಿಲ್ಲ ಎನ್ನಲಾಗಿದೆ. ಆದರೆ, ಅವರಿಬ್ಬರ ಅಭಿಮಾನಿಗಳು ಹಾಗೆಂದು ಅಂದುಕೊಂಡಿದ್ದರು, ಮಾತನಾಡಿಕೊಳ್ಳುತ್ತಿದ್ದರು. ಯಾರೋ ಕಿಡಿಗೇಡಿಗಳು ಈ ಬಗ್ಗೆ ಗಾಳಿ ಸುದ್ದಿ ಹಬ್ಬಿಸುತ್ತಿದ್ದರು. ಅದನ್ನು ಇನ್ನಷ್ಟು ಜನರು ನಂಬುತ್ತಿದ್ದರು ಎನ್ನಲಾಗಿದೆ. ಡಾ ರಾಜ್-ವಿಷ್ಣು ಮಧ್ಯೆ ಇದ್ದ ಆಪ್ತತೆಯನ್ನು ಕದಡುತ್ತಿದ್ದರು ಎನ್ನಲಾಗಿದೆ.

ಅದೇ ರೀತಿಯ ಒಂದು ಘಟನೆ ಡಾ ರಾಜ್‌ಕುಮಾರ್ ನಟನೆಯ 'ಬಂಗಾರದ ಮನುಷ್ಯ ಹಾಗೂ ಡಾ ವಿಷ್ಣುವರ್ಧನ್ ನಟನೆಯ 'ನಾಗರಹಾವು' ಚಿತ್ರಗಳ ಬಿಡುಗಡೆ ಸಂದರ್ಭದಲ್ಲಿ ನಡದಿದೆ ಎನ್ನಲಾಗಿದೆ. ಸಾಗರ್ ಥಿಯೇಟರ್‌ನಲ್ಲಿ ವಿಷ್ಣುವರ್ಧನ್ ನಟನೆಯ 'ನಾಗರಹಾವು' ಚಿತ್ರವು 100 ದಿನಗಳನ್ನು ಪೂರೈಸಿತ್ತು. ಅದೇ ರಸ್ತೆಯ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಡಾ ರಾಜ್‌ಕುಮಾರ್ ನಟನೆಯ 'ಬಂಗಾರದ ಮನುಷ್ಯ' ಚಿತ್ರವು ಬರೋಬ್ಬರಿ ಒಂದು ವರ್ಷ (1 ವರ್ಷ) ಪೂರೈಸಿತ್ತು. ಸಾಗರ್ ಥಿಯೇಟರ್‌ನಲ್ಲಿ 'ನಾಗರಹಾವು' ಚಿತ್ರದ ಶತಮಾನದಿನೋತ್ಸವ ಸಂಭ್ರಮ ಆಚರಿಸಲು ನಟರಾದ ಅಂಬರೀಷ್ ಹಾಗು ವಿಷ್ಣುವರ್ಧನ್ ಬಂದಿದ್ದರು. 

ಫೋಟೋ ಜೊತೆ ನಿಂತ ಪ್ರಕಾಶ್ ರಾಜ್; ನಿರ್ದಿಗಂತ ಮೂಲಕ ಎಂಥ ಕಥೆಯನ್ನು ಪ್ರೆಸೆಂಟ್ ಮಾಡ್ತಿದ್ದಾರೆ ನೋಡ್ರಿ!

ಆ ವೇಳೆ ಯಾರೋ ಒಬ್ಬ ಕಿಡಿಗೇಡಿ ಸಾಗರ್ ಚಿತ್ರಮಂದಿರದತ್ತ ಕಲ್ಲು ತೂರಿದ್ದ. ಆ ಕಾರಣಕ್ಕೆ ಸ್ವಲ್ಪ ಹೊತ್ತು ಗಲಾಟೆ ನಡೆಯಿತು. ಅಂದಿನ ಗಲಾಟೆಗೆ ರೆಕ್ಕೆ ಪುಕ್ಕ ಸೇರಿಕೊಂಡು ಅದೊಂದು ದೊಡ್ಡ ಯುದ್ಧ (Controvesey) ಎಂಬಂತೆ ಬಿಂಬಿಸಲಾಯಿತು ಎನ್ನಲಾಗಿದೆ. ಆ ಘಟನೆಯನ್ನು ಬಂಗಾರದ ಮನುಷ್ಯ (Bangarada Manushya) ಹಾಗು ನಾಗರಹಾವು (0Nagarahavu) ನಡುವಿನ ಸ್ಪರ್ಧೆ, ಡಾ ರಾಜ್ ಹಾಗು ಡಾ ವಿಷ್ಣು ನಡುವಿನ ಶೀತಲ ಸಮರ ಎಂಬಂತೆ ಮಾಡಲಾಯಿತು ಎನ್ನಲಾಗಿದೆ. ಈ ಬಗ್ಗೆ ಸ್ವತಃ ನಟರಾದ ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರು ಮಾತನಾಡಿದ್ದರು, 'ನಮ್ಮ ನಡುವೆ ಏನಿಲ್ಲ, ಏನೇನೂ ಇಲ್ಲ'ಎಂದಿದ್ದರು.

ಅಯ್ಯೋ, ನಟ ನಾನಿಗೆ ಹುಚ್ಚ ಅಂದಿದ್ಯಾಕೆ; ಪವರ್ ಕಟ್ ಆದ್ರೆ ಹಾಗೆಲ್ಲಾ ಮಾಡ್ತಿದ್ರಾ 'ಈಗ' ನಟ!

'ಆವತ್ತು ಯಾರೋ ಒಬ್ಬ ಕಿಡಿಗೇಡಿ ನಾಗರಹಾವು ಚಿತ್ರ ಪ್ರದರ್ಶನ ನಡೆಯುತ್ತಿದ್ದ ಸಾಗರ್ ಥಿಯೇಟರ್‌ನತ್ತ ಕಲ್ಲು ತೂರಿದ್ದ. ಈ ಬಗ್ಗೆ ಅಭಿಮಾನಿಗಳ ಮಧ್ಯೆ ಸ್ವಲ್ಪ ಹೊತ್ತು ಜಗಳ ನಡೆದಿದೆ ಅಷ್ಟೇ. ಆದರೆ ಇದಕ್ಕೆ ಸಂಬಂಧಿಸದೇ ಇರುವ ಹಲವರು ಈ ಘಟನೆಯನ್ನು ದೊಡ್ದದು ಮಾಡಿದರು. ಡಾ ರಾಜ್‌ಕುಮಾರ್ ಹಾಗೂ ನಮ್ಮ ನಡುವೆ ವೈಮನಸ್ಯ ಇದೆ ಎಂಬ ಸುದ್ದಿ ಹಬ್ಬಿಸಿದರು. ಅದೇ ಸುದ್ದಿ ಊರ ತುಂಬೆಲ್ಲಾ ಹಬ್ಬಿ  ಸ್ಟಾರ್ ವಾರ್ ಕಥೆ ಹುಟ್ಟಿಕೊಂಡಿತು' ಎಂದು ಹೇಳಿದ್ದಾರೆ. ಇಂತಹ ಘಟನೆಗಳು ಅಂದು ಮಾತ್ರವಲ್ಲ, ಇಂದು ಕೂಡ ನಡೆಯುತ್ತವೆ. ಘಟನೆಗಿಂತ ಆಮೇಲೆ ನಡೆಯುವ ಕಥೆ ಬೇರೆಯದೇ ರೂಪ ಪಡೆದಿರುತ್ತದೆ ಎನ್ನಬಹುದು.

ರಾಕ್‌ಲೈನ್ ವೆಂಕಟೇಶ್ ನನ್ನ ಹಿಂದಿರುವ ನಿಜವಾದ ದೊಡ್ಡ ಶಕ್ತಿ; ಸುಮಲತಾ ಅಂಬರೀಷ್  

Follow Us:
Download App:
  • android
  • ios