ಬೆಂಗಳೂರು[ನ. 21]  ಡಾ. ರಾಜ್ ಅಭಿಮಾನಿಗಳಿಗೆ ಅನ್ಯಾಯ ಆಗುತ್ತಿದೆ ಎಂಬ ಕೂಗೆದ್ದಿದೆ. ಚಾಮರಾಜಪೇಟೆಯಲ್ಲಿರುವ ಡಾ. ರಾಜ್ ಕಲಾಭವನದ ಒಂದು ಆಡಿಟೋರಿಯಂಗೆ ಅಂಬರೀಶ್ ಹೆಸರಿಡಲು ಮುಂದಾಗಿದ್ದು ಈ ಕ್ರಮ ಸರಿಯಲ್ಲ ಎಂದು ಡಾ. ರಾಜ್ ಕುಮಾರ್ ಅಭಿಮಾನಿಗಳ ಒಕ್ಕೂಟ ಚಾಮರಾಜಪೇಟೆಯ ಡಾ. ರಾಜ್ ಕುಮಾರ್ ಕಲಾ ಭವನಕ್ಕೆ ಮನವಿ ಸಲ್ಲಿಸಿದೆ.

ಡಾ ರಾಜ್ ಮತ್ತು ಅಂಬರೀಶ್ ಅಭಿಮಾನಿಗಳಲ್ಲಿ ಒಡಕು ಮೂಡಿಸಲು ಕೆಲವರು ಸಂಚು ನಡೆಸಿದ್ದಾರೆ ಎಂದು ಒಕ್ಕೂಟ ಆರೋಪಿಸಿದೆ. ಒಂದು ವೇಳೆ ಮನವಿ ಧಿಕ್ಕರಿಸಿ ಅಂಬರೀಶ್ ಹೆಸರಿಡಲು ಮುಂದಾದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಒಕ್ಕೂಟ ಎಚ್ಚರಿಕೆ ನೀಡಿದೆ.

ಏನ್ ನೆನಪಿನ ಶಕ್ತಿ ಅವರದ್ದು: ಅಂಬಿ ಹೊಗಳಿದ ಬೆಳಗೆರೆ

ಕೂಡಲೇ ಅಂಬರೀಶ್ ಹೆಸರಿಡುವ ವಿಚಾರ ಕೈಬಿಡಬೇಕು ಎಂದು ಒಕ್ಕೂಟದ ಪರವಾಗಿ ವಿ.ತ್ಯಾಗರಾಜ್, ಟಿ. ನಾರಾಯಣ್, ಹೊನ್ನೇಗೌಡ, ಎಸ್.ಮಂಜುನಾಥ್, ಎಂ.ಮಲ್ಲ, ಎನ್.ಶ್ರೀಧರ್ ಮತ್ತು ಬನಾಮ ರಾಜು ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಮನವಿ ಮಾಡಿಕೊಳ್ಳಲಾಗಿದೆ.

ಕಲಾವಿದರ ಭವನದಲ್ಲಿ ಎಲ್ಲ ಕಲಾವಿದರ ಭಾವ ಚಿತ್ರಗಳು ಹಾಕಬೇಕು. ಕಲಾವಿದರ ಸಂಘದ ಭವನಕ್ಕಾಗಿ ಎಲ್ಲರೂ ದುಡಿದ್ದಿದ್ದಾರೆ ಎಂದು ಮನವಿಯಲ್ಲಿ ಹೇಳಿದೆ.