ಫೆಬ್ರವರಿ ೧೫-೧೬ ರಂದು ಮೈಸೂರಿನಲ್ಲಿ ನಟ ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ಅವರ ಅದ್ದೂರಿ ವಿವಾಹ. ಧನ್ಯತಾ ಅವರ ಸರಳತೆ ಮತ್ತು ವೃತ್ತಿಪರತೆ ಧನಂಜಯ್‌ಗೆ ಇಷ್ಟವಾಗಿದೆ. ಅಭಿಮಾನಿಯಾಗಿ ಭೇಟಿಯಾದ ಇವರಿಬ್ಬರ ಆಲೋಚನೆಗಳು ಹೊಂದಾಣಿಕೆಯಾಗಿದ್ದು, ಕುಟುಂಬದ ಒಪ್ಪಿಗೆ ಪಡೆದು ವಿವಾಹವಾಗುತ್ತಿದ್ದಾರೆ. ಸರಳ ವಿವಾಹದ ಬದಲು ಅದ್ದೂರಿಯಾಗಿ ನಡೆಸಲು ನಿರ್ಧರಿಸಿದ್ದಾರೆ.


ಇದೇ ತಿಂಗಳು, ಅಂದರೆ.. ಫೆಬ್ರವರಿ 15 ಹಾಗೂ 16ರಂದು ಧನಂಜಯ್ ಹಾಗೂ ಧನ್ಯತಾ ಮದುವೆ ಅದ್ದೂರಿಯಾಗಿ ನಡೆಯಲಿದೆ. ಮೈಸೂರಿನ ಅರಮನೆ ಮುಂಭಾಗದ ವಸ್ತುಪ್ರದರ್ಶನದ ಮೈದಾನದಲ್ಲಿ ಈ ಮದುವೆಗೆ ವೇದಿಕೆ ಸಿದ್ಧವಾಗುತ್ತಿದೆ. ಆಮಂತ್ರಣ ನೀಡುವುದರ ಜೊತೆಗೆ ಮದುವೆ ತಯಾರಿ ನಡೆಸಿದ್ದಾರೆ ಈ ಇಬ್ಬರೂ. ವೃತ್ತಿಯಲ್ಲಿ ಧನ್ಯತಾ ವೈದ್ಯರು. ಪ್ರಸೂತಿ ತಜ್ಞರಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 

ನಟ ಡಾಲಿ ಧನಂಜಯ್ ಅವರು 'ನನಗೆ ಧನ್ಯತಾ ಅವರ ಸಿಂಪ್ಲಿಸಿಟಿ, ವೃತ್ತಿಧರ್ಮ ಬಹಳ ಇಷ್ಟವಾಯಿತು. ಅವರೊಟ್ಟಿಗೆ ಜೀವನ ಪೂರ್ತಿ ಇರಬೇಕು ಎಂದು ಮದುವೆ ಆಗುತ್ತಿದ್ದೇನೆ' ಎಂದು ಮೊಟ್ಟಮೊದಲ ಮಾತಾಗಿ ಹೇಳಿದ್ದಾರೆ. ಧನ್ಯತಾ ಜೊತೆಗಿನ ಪರಿಚಯದ ಬಗ್ಗೆ ನಟ ಧನಂಜಯ್ ಮಾತನಾಡಿದ್ದಾರೆ. ಮನಸ್ಸಿಗೆ ಇಷ್ಟ ಆಗುವವರು ಸಿಕ್ಕರೆ ಮದುವೆ ಆಗ್ತೀನಿ ಎನ್ನುತ್ತಿದ್ದೆ. ಇವರನ್ನು ನೋಡಿದಾಗ ಹಾಗೆ ಅನ್ನಿಸಿತು. 

ಮದುಮಗ ಡಾಲಿ ಧನಂಜಯ್​ ದರ್ಶನ್​ರನ್ನು ಮದ್ವೆಗೆ ಯಾಕೆ ಕರೆದಿಲ್ಲ? ಕಾರಣ ಅವರ ಬಾಯಲ್ಲೇ ಕೇಳಿ...

ನಿಜವಾಗಿ ನಮ್ಮ ಲವ್ ಸ್ಟೋರಿ ಬಗ್ಗೆ ಹೇಳಬೇಕು ಎಂದರೆ, ಮೊದಲಿಗೆ ಒಬ್ಬ ಅಭಿಮಾನಿ ಆಗಿ ನಾನು ಧನ್ಯತಾ ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ಇನ್ನು ಓದುತ್ತಿದ್ದರು. ಜಯನಗರ 4ನೇ ಬ್ಲಾಕ್‌ನಲ್ಲಿ ಮೊದಲಿಗೆ ಭೇಟಿ ಆಗಿದ್ದೆವು. ಅವತ್ತು ಉತ್ತರ ಕರ್ನಾಟಕ ಹೋಟೆಲ್‌ನಲ್ಲಿ ಊಟ ಮಾಡಿಸಿ ಮಾತನಾಡಿಸಿ ಕಳುಹಿಸಿದ್ದೆ ಎಂದು ಧನಂಜಯ್ ನೆನಪಿಸಿಕೊಂಡಿದ್ದಾರೆ.

ನಮ್ಮ ತಂದೆ ನನ್ನ ಹಿಂದೆ ಬಿದ್ರು. ಅವರ ಮನೆಯಲ್ಲಿ ಮಾತನಾಡಬೇಕು ಅಂದ್ರು. ಹಾಗೆ ಮದುವೆವರೆಗೂ ಬಂದು ನಿಂತಿದೆ. ನಮ್ಮ ಅಜ್ಜಿಗೆ ಧನ್ಯಾ ಅವರನ್ನು ಭೇಟಿ ಮಾಡಿಸಿದ್ದೆ. ಅದು ಖುಷಿ ಇದೆ. ಈಗ ಅವರು ಇಲ್ಲ ಎಂದು ಧನಂಜಯ್ ಹೇಳಿದ್ದಾರೆ. ಧನ್ಯತಾ ಮಾತನಾಡಿ 'ಭೇಟಿಯಾದ ಬಳಿಕ ಅವರ ಆಲೋಚನೆ ರೀತಿ ಬಹಳ ಇಷ್ಟ ಆಯಿತು, ನಮ್ಮಿಬ್ಬರ ಯೋಚನಾ ಲಹರಿ ಒಂದೇ ರೀತಿ ಇದೆ. ಧನಂಜಯ್ ಸಿಂಪ್ಲಿಟಿಸಿ ನನಗಿಷ್ಟ' ಎಂದಿದ್ದಾರೆ.

ಯೋಗರಾಜ್‌ ಭಟ್ಟರ ಹೆಂಡ್ತಿ ಕಂಪ್ಲೇಂಟ್ ಕೇಳಿ ಸುಸ್ತಾಗ್ಬೇಡಿ, ಎಲ್ರ ಮನೆ ದೋಸೇನೂ ತೂತೇ!

ಮುಂದುವರಿದು ಮಾತನ್ನಾಡಿರುವ ಧನ್ಯತಾ 'ಧನಂಜಯ್ ನನಗೆ ಹತ್ತಿರವಾದಂತೆ ಅವರ ಕುಟುಂಬ ಸದಸ್ಯರು ನನಗೆ ಹತ್ತಿರವಾದರು. ನಾನು ಸಿನಿಮಾಗಳಿಂದ ಕೊಂಚ ದೂರ. ಕಾರಣ ನನ್ನ ವೃತ್ತಿ ಅಂಥಾದ್ದು. ಇಷ್ಟು ದಿನ ಅಷ್ಟೇನೂ ಸಿನಿಮಾಗಳನ್ನು ನಾನು ನೋಡಿರಲಿಲ್ಲ. ಈಗ ನೋಡುತ್ತಿದ್ದೇನೆ ಅಷ್ಟೇ. ಧನಂಜಯ್ ನಟನೆಯ 'ರತ್ನನ್ ಪ್ರಪಂಚ' ಸಿನಿಮಾ ನೋಡಿದೆ, ಅದು ನನಗೆ ತುಂಬಾ ಇಷ್ಟವಾಯ್ತು' ಎಂದಿದ್ದಾರೆ ಧನ್ಯತಾ.

'ನನ್ನ ಪ್ರಕಾರ, ಧನಂಜಯ್ ಅವರು ಪಾಸಿಟಿವ್, ನೆಗೆಟಿವ್ ಎರಡೂ ಪಾತ್ರಗಳನ್ನು ಚೆನ್ನಾಗಿ ಮಾಡ್ತಾರೆ. ನೆಗೆಟಿವ್ ಪಾತ್ರದಲ್ಲಿರುವ ಕ್ರೂರತೆಯನ್ನು ಒಬ್ಬ ನಟನಾಗಿ ಚೆನ್ನಾಗಿ ನಟಿಸಿ ತೋರಿಸುತ್ತಾರೆ ಕೂಡ.. ಎಂದಿದ್ದಾರೆ ಧನ್ಯತಾ. ಇನ್ನು ನಟ ಧನಂಜಯ್ ಮಾತನಾಡಿ 'ನಾನು ಸಿಂಪಲ್ ಆಗಿ ಮದುವೆ ಆಗೋಣ ಎಂದುಕೊಂಡಿದ್ದೆ. ಆದರೆ, ಆಮೇಲೆ ಅದಕ್ಕೂ ಸುಮ್ಮನೆ ಅದಕ್ಕೆ ಏನೇನೋ ಪ್ರಶ್ನೆಗಳು ಬರುತ್ತವೆ. ಮದುವೆ ಅಂದರೆ ಸಂಭ್ರಮ, ಹೀಗಾಗಿ ಸಂಭ್ರಮವಾಗಿರಲಿ ಎಂದು ನಿರ್ಧರಿಸಿದೆ. 

ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಕನ್ನಡದ ಬಿಗ್ ಸ್ಟಾರ್‌ ಚಿತ್ರದಲ್ಲಿ 'ಮಹಾಕುಂಭ ಮೇಳ'ದ ಮೊನಾಲಿಸಾ!

ಆದರೆ ಈಗ ಅನ್ನಿಸುತ್ತಿದೆ, ನಾನು ಅಂದುಕೊಂಡಂತೆ, ಸಿಂಪಲ್ ಆಗಿ ಮದುವೆ ಆಗಿದ್ದರೆ ಇಂತಹ ಒಳ್ಳೆ ಅನುಭವ ಆಗುತ್ತಿರಲಿಲ್ಲ. ಜನರ ಪ್ರೀತಿ ಮಿಸ್ ಮಾಡಿಕೊಳ್ಳುತ್ತಿದ್ದೆ ಎನಿಸುತ್ತದೆ. ಎಲ್ಲರೂ ಈಗಲೇ ಮದುವೆಗೆ ಹಾರೈಸುತ್ತಿರುವುದು ಬಹಳ ಖುಷಿಯಿದೆ' ಎಲ್ಲರೂ ತಪ್ಪದೇ ಬನ್ನಿ.. ಎಲ್ಲರನ್ನೂ ಈ ಮೂಲಕ ಕರೆಯುತ್ತಿದ್ದೇನೆ..' ಎಂದು ಧನಂಜಯ್ ಹೇಳಿದ್ದಾರೆ.