ದಿಯಾ ಖ್ಯಾತಿಯ ಖುಷಿ ರವಿ ಪತಿ ರಾಕೇಶ್, ಸುಖ ಸಂಸಾರಕ್ಕೆ ಮೂರು ಸೂತ್ರಗಳನ್ನು ಹೇಳಿದ್ದಾರೆ. ಹೆಂಡತಿ ಗಂಡನ ಫೋನ್ ನೋಡಬಾರದು, ಇನ್ಸ್ಟಾಗ್ರಾಮ್ ಫಾಲೋವರ್ಸ್ ಬಗ್ಗೆ ತಲೆಕೆಡಿಸಿಕೊಳ್ಳಬಾರದು, ಮತ್ತು ಬೇಗನೆ ರೆಡಿಯಾಗಬೇಕು ಎಂದಿದ್ದಾರೆ. ಖುಷಿ ರವಿ 'ದಿಯಾ' ಚಿತ್ರದ ಮೂಲಕ ಪ್ರಸಿದ್ಧಿ ಪಡೆದರು. ನಂತರ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಖುಷಿ ಮತ್ತು ರಾಕೇಶ್ ಪ್ರೀತಿಸಿ ಮದುವೆಯಾಗಿದ್ದು, ತನಿಷಾ ಎಂಬ ಮಗಳಿದ್ದಾಳೆ.
ಸುಖ ಸಂಸಾರಕ್ಕೆ 12 ಸೂತ್ರದಿಂದ ಹಿಡಿದು ಇದಾಗಲೇ ಹಲವಾರು ಹಲವು ಸೂತ್ರಗಳನ್ನು ಹೇಳಿಯಾಗಿದೆ. ಕೆಲವರು ತಮಾಷೆಯಾದ ಸೂತ್ರಗಳನ್ನು ಹೇಳಿದರೆ, ಮತ್ತೆ ಕೆಲವರು ಪತಿ ಮತ್ತು ಪತ್ನಿಯಲ್ಲಿ ಏನೆಲ್ಲಾ ಗುಣಗಳು ಇರಬೇಕು, ಬದುಕನ್ನು ಹೇಗೆ ಸುಖಮಯವಾಗಿಸಬೇಕು ಎಂದೆಲ್ಲಾ ಸಲಹೆ ಕೊಟ್ಟಿದ್ದಾರೆ. ಹೆಚ್ಚುತ್ತಿರುವ ವಿಚ್ಛೇದನದ ನಡುವೆ ಈ ಸೂತ್ರಗಳನ್ನು ಪಾಲಿಸಿ ಎನ್ನುವುದು ಅವರ ಸಲಹೆ. ಆದರೆ ಈ ಎಲ್ಲಾ ಸಲಹೆಗಳನ್ನು ಅಳವಡಿಸಿಕೊಳ್ಳುವುದು ಬದುಕಿನಲ್ಲಿ ಕಷ್ಟ ಎಂದೇ ಹಲವರು ಎಂದುಕೊಳ್ಳುವುದು ಉಂಟು.
ಅದೇನೇ ಇರಲಿ. ಆದರೆ ಇದೀಗ ಪತ್ನಿಗೆ ಈ ಸಿಂಪಲ್ ಮೂರು ಕ್ವಾಲಿಟಿ ಇದ್ದರೆ ಬದುಕು ಸ್ವರ್ಗ ಎಂದಿದ್ದಾರೆ ದಿಯಾ ಸಿನಿಮಾ ಖ್ಯಾತಿಯ ನಟಿ ಖುಷಿ ರವಿಯ ಪತಿ ರಾಕೇಶ್. ಕೀರ್ತಿ ಎಂಟರ್ಟೇನ್ಮೆಂಟ್ ಚಾನೆಲ್ಗೆ ಈ ದಂಪತಿ ಕೆಲವು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಒಂದು ತುಣುಕು ಈಗ ಸಕತ್ ವೈರಲ್ ಆಗ್ತಿದೆ. ಅದರಲ್ಲಿ ರಾಕೇಶ್ ಅವರು ಈಗಿನ ಆಧುನಿಕ ಪತಿ-ಪತ್ನಿಯರ ಸುಖ ಸಂಸಾರದ ಮೂರೇ ಮೂರು ಸೂತ್ರಗಳನ್ನು ಹೇಳಿದ್ದಾರೆ. ನಿಮ್ಮ ಪ್ರಕಾರ ಯಶಸ್ವಿ ಹೆಂಡತಿಗೆ ಇರಬೇಕಾದ ಮೂರು ಕ್ವಾಲಿಟಿ ಯಾವುದು ಎಂದು ಕೀರ್ತಿ ಅವರು ಪ್ರಶ್ನಿಸಿದಾಗ, ರಾಕೇಶ್, ಮೊದಲನೆಯದ್ದು ಆಕೆ ಗಂಡನ ಫೋನ್ ನೋಡಬಾರದು, ಎರಡನೆಯದ್ದು ಗಂಡನ ಇನ್ಸ್ಟಾಗ್ರಾಮ್ನಲ್ಲಿ ಇರೋ ಫಾಲೋವರ್ಸ್ನಲ್ಲಿ ಎಷ್ಟು ಜನ ಹುಡುಗಿಯರು ಇದ್ದಾರೆ ಎನ್ನುವುದನ್ನು ನೋಡಬಾರದು ಹಾಗೂ ಮೂರನೆಯದ್ದು ಎಲ್ಲಾದರೂ ಹೊರಡುವ ಮುನ್ನ ಬೇಗ ರೆಡಿ ಆಗ್ಬೇಕು. ಹೀಗಿದ್ದರೆ ಆಕೆ ಆದರ್ಶ ಪತ್ನಿ ಆಗ್ತಾಳೆ ಎನ್ನುವ ಮೂಲಕ ತಮಾಷೆ ಮಾಡಿದ್ದಾರೆ.
'ಅಪ್ಪು' ಸಿನಿಮಾಕ್ಕೆ ನಾಯಕಿಯಾಗಿ ರಮ್ಯಾ ರಿಜೆಕ್ಟ್ ಆಗಿದ್ದೇಕೆ? ಕುತೂಹಲದ ಕಾರಣ ಹೇಳಿದ ನಿರ್ದೇಶಕ
ಇನ್ನು ನಟಿ ಖುಷಿ ಕುರಿತು ಹೇಳುವುದಾದರೆ, ಇವರು 2020 ರಲ್ಲಿ ತೆರೆಕಂಡ `ದಿಯಾ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದು ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಇದಕ್ಕೂ ಮೊದಲು ಸೋಡಾಬುಡ್ಡಿಯಲ್ಲಿ ನಟಿಸಿದರು. ಆದರೆ ಅದು ಅಷ್ಟೊಂದು ಯಶಸ್ಸು ಕಾಣಿಸಲಿಲ್ಲ. ಆದರೆ ದಿಯಾ ಮೂಲಕ ಸಾಕಷ್ಟು ಮನ್ನಣೆ ಗಳಿಸಿದರು. ಇದನ್ನು ಹೊರತುಪಡಿಸಿದರೆ, ‘ಸ್ಪೂಕಿ ಕಾಲೇಜ್’ ಸಿನಿಮಾದಲ್ಲಿ ನಟನೆಯಿಂದ ಗಮನ ಸೆಳೆದಿದ್ದಾರೆ. ಬಳಿಕ ಕೇಸ್ ಆಫ್ ಕೊಂಡಣ್ಣ ಚಿತ್ರದಲ್ಲಿ ನಟಿಸಿದರು. ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಅವರ ಜೋಡಿಯಾದರು ಖುಷಿ. ಇದರಲ್ಲಿ ಅವರದ್ದು ಡಾಕ್ಟರ್ ಪಾತ್ರ. ರುದ್ರ ಮತ್ತು ಪಿಂಡಮ್‌ನಂತಹ ಚಿತ್ರಗಳೊಂದಿಗೆ ತೆಲುಗು ಚಿತ್ರರಂಗದಲ್ಲಿ ಖುಷಿ ರವಿ ಛಾಪು ಮೂಡಿಸಿದ್ದಾರೆ. ಫುಲ್ ಮೀಲ್ಸ್ ಮತ್ತು S/o ಮುತ್ತಣ್ಣನ ನಂತಹ ಪ್ರಾಜೆಕ್ಟ್‌ಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ,
ಅಂದಹಾಗೆ ಮದುವೆಯಾದ ಮೇಲೂ, ಮಗುವಾದ ಮೇಲೂ ನಟಿಗೆ ಡಿಮಾಂಡ್ ಇದೆ. ಇವರ ಪತಿಯ ಹೆಸರು ರಾಕೇಶ್. ಇವರು ಉದ್ಯಮಿ. ಖುಷಿ ಮತ್ತು ರಾಕೇಶ್ ಅವರದ್ದು ಲವ್ ಕಮ್ ಆರೆಂಜ್ ಮ್ಯಾರೇಜ್. ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದ ಖುಷಿ ಮತ್ತು ರಾಕೇಶ್ ಮನೆಯವರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದಾರೆ. 2000ನೇ ಸಾಲಿನಲ್ಲಿ ದಿಯಾ ಚಿತ್ರ ಸೆಟ್ಟೇರಿತ್ತು. ನಾಲ್ಕು ವರ್ಷಗಳ ಪ್ರಾಜೆಕ್ಟ್ ಇದು. ಈ ಸಮಯದಲ್ಲಿ ದಿಯಾ ಸಿಂಗಲ್ ಆಗಿದ್ದರು. ಸಿನಿಮಾ ಚಿತ್ರೀಕರಣ ಮುಗಿಯುತ್ತಿದ್ದಂತೆ ಖುಷಿ ರಾಕೇಶ್ ಜೊತೆ ಮದುವೆಯಾಯಿತು. ಈ ಜೋಡಿಗೆ ತನಿಷಾ ಎನ್ನುವ ಮಗಳಿದ್ದಾಳೆ. ಖುಷಿ ಅವರ ತಂದೆ ರವಿಯಾಗಿರುವ ಕಾರಣ ಖುಷಿ ರವಿ ಎಂದೇ ಫೇಮಸ್ ಆಗಿದ್ದಾರೆ. ಸಿನಿಮಾಗಿಂತ ಮೊದಲು ನಾಟಕ ಮತ್ತು ಕಿರುಚಿತ್ರಗಳಿಯೂ ಅಭಿನಯಿಸಿದ್ದಾರೆ. ಅಭಿನಯದ ಜೊತೆಗೆ ಖುಷಿ ಅದ್ಭುತ ಡ್ಯಾನ್ಸರ್ ಕೂಡ ಹೌದು. ಸಂಗೀತ ಕೂಡ ಕಲಿತ್ತಿದ್ದಾರೆ.
ಅಪ್ಪು ಕೊನೆಯ ಬಾರಿ ನೇರಪ್ರಸಾರದಲ್ಲಿ ಮಾತನಾಡಿದ ವಿಡಿಯೋ ಪುನಃ ವೈರಲ್: ಅಭಿಮಾನಿಗಳ ಕಣ್ಣೀರು
