"ಅಂದಿನಿಂದ ಇಂದಿನವರೆಗೂ ಹಾಡುತ್ತಲೇ ಇದ್ದಾನೆ " ಅಂತ ನಿರ್ದೇಶಕ ಯೋಗರಾಜ್ ಭಟ್ ಅವರು ಶೇರ್ ಮಾಡಿಕೊಂಡಿರುವ ವೀಡಿಯೋದಲ್ಲಿ ಇರುವ ಇಂದಿನ ಬಹುಬೇಡಿಕೆಯ ಅಪ್ಪಟ ಕನ್ನಡದ ಗಾಯಕ ಯಾರು ಗೊತ್ತಾ ?
ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದ ಗಾಯಕ ವಿಜಯ್ ಪ್ರಕಾಶ್!
ಈ ವೀಡಿಯೋ ನೋಡಿದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು ಆ ಬಾಲಕನ ಹಾಡುಗಾರಿಕೆಗೆ ಶಹಬಾಸ್ ಅನ್ನುತ್ತಿದಾರೆ .
ಈ ಬಾಲಕ ಅಂದಿನಿಂದ ಇಂದಿನವರೆಗೂ ಹಾಡುತ್ತಲೇ ಇದ್ದಾರೆ ಎಂದು ಬರೆದು ಯೋಗರಾಜ್ ಭಟ್ ಅವರು ಪೋಸ್ಟ್ ಮಾಡಿರುವ ವೀಡಿಯೋ ಈಗ ಸಕತ್ ವೈರಲ್ ಆಗುತ್ತಿದೆ . ಅಂದಹಾಗೆ ಈ ವಿಡಿಯೋದಲ್ಲಿ ಹಾಡುತ್ತಿರುವ ಬಾಲಕ ಇಂದು ತಮ್ಮ ಸುಮಧುರ ಗಾಯನದ ಮೂಲಕ ಬಹುಭಾಷಾ ಸಂಗೀತ ಪ್ರಿಯರನ್ನು ರಂಜಿಸುತ್ತಿರುವ ಗಾಯಕ ವಿಜಯ್ ಪ್ರಕಾಶ್ ಅವರು ಬಾಲ್ಯದಲ್ಲಿ ಅದ್ಭುತವಾಗಿ ಹಾಡಿರುವ ಅಪರೂಪದ ವೀಡಿಯೋ .
