ಚಿತ್ರರಂಗದಲ್ಲಿ ಅದ್ಧೂರಿಯಾಗಿ ಸೆಟ್‌ ಏರಲು ಸಿದ್ಧವಾಗುತ್ತಿರುವ ಚಿತ್ರಗಳೆಂದರೆ 'ಜಂಟಲ್‌ಮನ್' ಹಾಗೂ 'ಮಾಲ್ಗುಡಿ ಡೇಸ್'. ಗುರುದೇಶ್‌ ಪಾಂಡೆ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಜಂಟಲ್‌ಮನ್' ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌ ಹಾಗೂ ನಶ್ವಿಕಾ ನಾಯ್ಡು ಮಿಂಚಲು ಸಜ್ಜಾಗಿದ್ದಾರೆ. ಫೆ.7ರಂದು ತೆರೆ ಕಾಣಲಿದೆ.

'ಮಾಲ್ಗುಡಿ ಡೇಸ್‌' ಚಿತ್ರದಲ್ಲಿ ಸ್ಕೂಲ್‌ ಹುಡುಗನಾದ ವಿಜಯ್ ರಾಘವೇಂದ್ರ!

ಮತ್ತೊಂದೆಡೆ ಕಿಶೋರ್‌ ಮೂಡುಬಿದ್ರೆ ನಿರ್ದೇಶನದ 'ಮಾಲ್ಗುಡಿ ಡೇಸ್‌' ಚಿತ್ರವೂ ಇದೇ ದಿನ ಬಿಡುಯಾಗುತ್ತಿದೆ. ಈ ಎರಡು ಚಿತ್ರಗಳು ಒಂದೇ ದಿನ ತೆರೆ ಕಂಡರೆ, ಆಗೋಲ್ವಾ ಕ್ಲ್ಯಾಷ್?

ಈ ಎರಡೂ ಚಿತ್ರಗಳ ನಡುವೆ ಏನಿದು ಮನಸ್ತಾಪ?

ಜಂಟಲ್‌ಮನ್ ಬಿಡುಗಡೆ ಆಗುತ್ತಿರುವ ಮುಖ್ಯ ಚಿತ್ರಮಂದಿರದಲ್ಲಿ ಮಾಲ್ಗುಡಿ ಡೇಸ್ ಚಿತ್ರದ ಪ್ರಚಾರದ ಪೋಸ್ಟರ್‌ ಕಾಣಿಸಿಕೊಂಡಿದೆ. ಈ ವಿಚಾರ ಕುರಿತು ನಿರ್ದೇಶಕ ಗುರುದೇಶ್ ಪಾಂಡೆ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

'ಅದೇ ದಿನಾಂಕದಂದು ಅದೇ ಚಿತ್ರಮಂದಿರದಲ್ಲಿ ಬೇರೊಂದು ಚಿತ್ರದ ಪ್ರಚಾರವನ್ನು ಕಂಡು ನಮಗೆ ಗೊಂದಲ ಸೃಷ್ಟಿಯಾಗಿದೆ. ದಯವಿಟ್ಟು ಮಾನ್ಯರೆಲ್ಲರೂ ಸೇರಿ ನಮ್ಮ ಸಂಕಟವನ್ನು ನಿವಾರಿಸಿ,ನ್ಯಾಯ ದೊರಕಿಸಿಕೊಡಬೇಕು' ಎಂದು ಕಳಕಳಿಯಿಂದ ಪತ್ರ ಬರೆದಿದ್ದಾರೆ.

'ಜಂಟಲ್‌ಮನ್' ಟ್ರೈಲರ್‌ ರಿಲೀಸ್‌ನಲ್ಲಿ ಕನ್ನಡಿಗರಿಗೆ ವಾರ್ನಿಂಗ್ ಕೊಟ್ಟ ಡಿ-ಬಾಸ್!

'ಜಂಟಲ್‌ಮನ್‌' ಚಿತ್ರದ ಟ್ರೈಲರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌, 'ಅಂಡು ಬಗ್ಗಿಸಿಕೊಂಡು ಕನ್ನಡ ಸಿನಿಮಾ ನೋಡಿ. ನಾವು ಅಕ್ಕಪಕ್ಕದವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ನಮ್ಮವರನ್ನೇ ನಾವು ಮರೆತೋಗುತ್ತೇವೆ,' ಎಂದು ಕರೆ ನೀಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.