ಇಷ್ಟು ಕಲರ್‌ಫುಲ್ ಆಡಿಯೋ ಜಾತ್ರೆಗೆ ಸಾಕ್ಷಿ ಆಗಿದ್ದು ‘ಸಲಗ’ ಸಿನಿಮಾ. ಅಶ್ವಿನಿ ಆಡಿಯೋ ಕಂಪನಿ ‘ಎ೨’ ಹೆಸರಿನಲ್ಲಿ ಮತ್ತೆ ‘ಸಲಗ’ ಚಿತ್ರದ ಮೂಲಕ ಆಡಿಯೋ ಮಾರುಕಟ್ಟೆಗೆ ಇಳಿಯುತ್ತಿದೆ ಎಂಬುದು ಮತ್ತೊಂದು ಹೈಲೈಟ್. ಆ್ಯಂಟೋನಿ ದಾಸ್ ಹಾಡಿರುವ ‘ನಾಲ್ಕು ಕ್ವಾರ್ಟರ್ ಸೂರಿ ಅಣ್ಣ’ ಎಂದು ಸಾಗುವ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಗೂ ಮುನ್ನ ‘ಸಲಗ’ ಚಿತ್ರದ ಮೇಕಿಂಗ್ ಪ್ರದರ್ಶನವೂ ನಡೆಯಿತು. ಲಾಂಗು ಹಿಡಿದ ದುನಿಯಾ ವಿಜಯ್, ತಮ್ಮ ಚಿತ್ರವನ್ನು ಹೇಗೆ ನಿರ್ದೇಶನ ಮಾಡಿದ್ದಾರೆ ಎಂಬ ಕುತೂಹಲಕ್ಕೆ ಉತ್ತರದಂತೆ ಮೇಕಿಂಗ್ ದೃಶ್ಯಗಳು ತೆರೆ ಮೇಲೆ ಮೂಡಿದವು.

ಸೂರಿ ಅಣ್ಣನ ಕಿಕ್ ಗೆ ಕಳೆದೇ ಹೋದ ಟಗರು ಶಿವ!

ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿದ, ಕೆ ಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರದ ಲಿರಿಕಲ್ ವಿಡಿಯೋ ಶಿವಣ್ಣ ಬಿಡುಗಡೆ ಮಾಡಿದರು. ‘ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಬೇಕು. ನಾನಂತೂ ನಿರ್ದೇಶನಕ್ಕೆ ಬರಲ್ಲ. ಯಾಕೆಂದರೆ ಬರಕ್ಕೂ ಬಿಡುತ್ತಿಲ್ಲ. ನಾನೇ ಬೇಕು ಅಂತ ಹೀರೋ ಮಾಡುತ್ತಿದ್ದಾರೆ. ಸೂರಿ ಅಣ್ಣ ತುಂಬಾ ಚೆನ್ನಾಗಿದೆ. ಆ್ಯಂಟೋನಿ ದಾಸ್ ವಾಯ್ಸ್, ಚರಣ್ ರಾಜ್ ಸಂಗೀತ ಇದ್ದರೆ ಹಾಡು ಸೂಪರ್ ಹಿಟ್. ಇದು ನಮ್ಮ ಸಿನಿಮಾ. ನನ್ನಿಂದ ಎಲ್ಲ ರೀತಿಯ ಬೆಂಬಲ ಇರುತ್ತದೆ’ ಎಂದರು ಶಿವಣ್ಣ. ನಟ ವಿಜಯ್ ಹೆಚ್ಚು ಮಾತನಾಡಲಿಲ್ಲ.

'ಸಲಗ' ಚಿತ್ರದಲ್ಲಿ 'ಸೂರಿಯಣ್ಣ' ಸಾಂಗ್‌ಗೆ ಧ್ವನಿಯಾದ ಆಂಟೋನಿ ದಾಸನ್!

‘ನಾನು ಕೆಲಸ ಮಾಡಿ ತೋರಿಸುತ್ತೇನೆ. ನನ್ನ ಕೆಲಸ ಮಾತನಾಡಬೇಕು. ಈ ಸಿನಿಮಾ ನಿಮಗೆ ಇಷ್ಟವಾದರೆ ನಾನು ಗೆದ್ದಂತೆ’ ಎಂದರು ವಿಜಯ್. ಚಿತ್ರದ ನಾಯಕಿ ಸಂಜನಾ ಆನಂದ್ ಅವರಿಗೆ ದೊಡ್ಡ ಕಮರ್ಷಿಯಲ್ ಚಿತ್ರದಲ್ಲಿ ನಟಿಸಿದ ಖುಷಿ ಇತ್ತು. ಚರಣ್‌ರಾಜ್, ಧನಂಜಯ್, ಅಚ್ಯುತ್ ಕುಮಾರ್, ಕಾಕ್ರೋಜ್ ಸುಧೀರ್ ಹಲವರು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

ಸ್ಯಾಂಡಲ್‌ವುಡ್ 'ಸಲಗ' ಜೊತೆ ಮೇಕಿಂಗ್ ವಿಡಿಯೋ ಬಗ್ಗೆ ಮಾತುಕತೆ!

ನಾನು ಸಿನಿಮಾ ಅಭಿಮಾನಿಯಾಗಿ ಚಿತ್ರರಂಗಕ್ಕೆ ಬಂದವನು. ಈಗ ನಿರ್ಮಾಪಕನಾಗಿದ್ದೇನೆ ಎಂದರೆ ಅದಕ್ಕೆ ಕಾರಣ ಶಿವಣ್ಣ ಅವರೇ. ‘ಸಲಗ’ ಇಡೀ ಕನ್ನಡ ಸಿನಿಮಾ ಪ್ರೇಕ್ಷಕರು ಮೆಚ್ಚುವ ಸಿನಿಮಾ ಎಂದು ಹೇಳಿಕೊಂಡಿದ್ದು ಕೆ ಪಿ ಶ್ರೀಕಾಂತ್ ಅವರು. ನಿರ್ಮಾಪಕ ಸಂಘದ ಅಧ್ಯಕ್ಷ ಡಿ.ಕೆ.ರಾಮಕೃಷ್ಣ, ಉಪಾಧ್ಯಕ್ಷ ಬಿ. ಕೆ.ರಾಮಮೂರ್ತಿ, ಕೆ ಮಂಜು, ಸಾ ರಾ ಗೋವಿಂದು, ನಿರ್ದೇ
ಶಕರುಗಳಾದ ತರುಣ್‌ಸುದೀರ್, ಗುರುದತ್, ಯೋಗಿ.ಜಿ.ರಾಜ್,ಡಾ.ಸೂರಿ, ಎ.ಪಿ.ಅರ್ಜುನ್, ಪವನ್‌ಒಡೆಯರ್, ಚೇತನ್ ಕುಮಾರ್, ಮಹೇಶ್‌ಕುಮಾರ್, ರಾಜಕಾರಣಿ ಶಿವರಾಮೇ ಗೌಡ ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.