ಧ್ರುವ ಸರ್ಜಾ ಮುದ್ದು ಕಂದನಿಗೆ ಮೊದಲ ಹುಟ್ಟುಹಬ್ಬದ ಸಡಗರ: ಚಿರು ಪುತ್ರನ ಜೊತೆಗಿನ ಕ್ಯೂಟ್​ ವಿಡಿಯೋ ವೈರಲ್​

ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಯ ದ್ವಿತೀಯ ಮಗ  ಹಯಗ್ರೀವನಿಗೆ ಇಂದು ಮೊದಲ ಹುಟ್ಟುಹಬ್ಬದ ಸಂಭ್ರಮ. ಮೇಘನಾ ರಾಜ್​ ಪುತ್ರ ರಾಯನ್​ ಸರ್ಜಾ ಮಗುವನ್ನು ಆಟವಾಡಿಸುತ್ತಿರುವ ಕ್ಯೂಟ್​ ವಿಡಿಯೋ ವೈರಲ್​ ಆಗಿದೆ. 
 

Dhruva Sarjas child Hayagreevas First Birthday Cute Video With Rayan Sarja shared by Meghana Raj suc

ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಎಂದೇ ಫೇಮಸ್​ ಆಗಿರುವ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಯ ದ್ವಿತೀಯ ಮಗ  ಹಯಗ್ರೀವನಿಗೆ ಇಂದು ಮೊದಲ ಹುಟ್ಟುಹಬ್ಬದ ಸಂಭ್ರಮ. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯ ದಿನವೇ ಈ ದಂಪತಿ ಕಳೆದ ಜನವರಿ 22 ರಂದು ತಮ್ಮ ಇಬ್ಬರು ಮಕ್ಕಳಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದರು.  ಮಗಳಿಗೆ ರುದ್ರಾಕ್ಷಿ ಮತ್ತು ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದಾರೆ.  ಹನುಮ ಭಕ್ತನಾಗಿರುವ ಧ್ರುವ ಸರ್ಜಾ ಅವರು ಮಕ್ಕಳ ನಾಮಕರಣಕ್ಕೆ ಈ ದಿನವನ್ನು ಆಯ್ಕೆ ಮಾಡಿಕೊಂಡಿದ್ದರು.  ಧ್ರುವ ಸರ್ಜಾ ಮಕ್ಕಳ ನಾಮಕರಣವನ್ನು ಮಾವ ಅರ್ಜುನ್ ಸರ್ಜಾ ಮುಂದೆ ನಿಂತು ನಡೆಸಿಕೊಟ್ಟಿದ್ದರು.

ಇದೀಗ ಮೊದಲ ಹುಟ್ಟುಹಬ್ಬದಂದು ಮೇಘನಾ ರಾಜ್​ ಪುತ್ರ ರಾಯನ್​ ಸರ್ಜಾ ಆಟವಾಡಿಸುತ್ತಿದ್ದಾನೆ. ಇದರ ವಿಡಿಯೋ ಅನ್ನು ಮೇಘನಾ ರಾಜ್​ ಶೇರ್​ ಮಾಡಿಕೊಂಡಿದ್ದಾರೆ. ಅಂದಹಾಗೆ  ಮೇಘನಾ-ಚಿರಂಜೀವ ಪುತ್ರ  ರಾಯನ್​ ಸರ್ಜಾ ಬರುವ ಅಕ್ಟೋಬರ್​ 22ರಂದು ನಾಲ್ಕನೇ ವರ್ಷಕ್ಕೆ ಕಾಲಿಡಲಿದ್ದಾನೆ. ತಮ್ಮ-ತಂಗಿಯ ಜೊತೆ ಆಗಾಗ್ಗೆ ಆಟ, ತುಂಟಾಟ ಆಡುತ್ತಾನೆ.  ಅಣ್ಣನನ್ನು ತದೇಕ ಚಿತ್ತದಿಂದ  ನೋಡುವ ಪುಟಾಣಿಗಳು  ತೊದಲು ಭಾಷೆಯಲ್ಲಿ ಅಣ್ಣನಿಗೆ ಉತ್ತರಿಸುತ್ತಾರೆ.  ರಾಯನ್​ ಕೂಡ ಅದರ ಜೊತೆ ತನ್ನದೇ ಮುದ್ದು ಭಾಷೆಯಲ್ಲಿ ಮಾತುಕತೆಯಲ್ಲಿ ತೊಡಗುತ್ತಾನೆ. ಈಗ ಅಂಥದ್ದೇ ವಿಡಿಯೋ ವೈರಲ್​ ಆಗಿದೆ. 

ಚಂದನ್​ ಶೆಟ್ಟಿ ಹುಟ್ಟುಹಬ್ಬಕ್ಕೆ ನಿವೇದಿತಾ ಹೀಗೆ ವಿಷ್​? ವಿಡಿಯೋ ನೋಡಿ ತಲೆ ಬಿಸಿ ಮಾಡ್ಕೊಂಡ ಫ್ಯಾನ್ಸ್​!

ಅಂದಹಾಗೆ ಹಾಗೆ,  24 ನವೆಂಬರ್‌ 2019ರಂದು ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್‌ ಮದುವೆಯಾಗಿದ್ದರು. ಮದುವೆಯಾಗಿ ಮೂರು ವರ್ಷಗಳ ನಂತರ, ಅಂದರೆ 2022ರ  ಅಕ್ಟೋಬರ್‌ 2 ರಂದು ಪ್ರೇರಣಾ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.  ಇದಾದ ಬಳಿಕ ಕಳೆದ ಸಪ್ಟೆಂಬರ್​ 18ರಂದು ಎರಡನೆಯ ಮಗುವಿನ ಪಾಲಕರಾಗಿದ್ದಾರೆ ಧ್ರುವ ಮತ್ತು ಪ್ರೇರಣಾ.  ಇದೀಗ ಎರಡೂ ಮಕ್ಕಳ ಲಾಲನೆ ಪಾಲನೆಯಲ್ಲಿದ್ದಾರೆ ಪ್ರೇರಣಾ. ಆಗಾಗ್ಗೆ ಮಗಳ ಕ್ಯೂಟ್​ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ.  ಎರಡನೆಯ ಮಗು ಹುಟ್ಟಿದರೂ ಮೊದಲ ಮಗಳ  ಹೆಸರನ್ನು  ಇವರು ರಿವೀಲ್​ ಮಾಡಿರಲಿಲ್ಲ.  ಕೊನೆಗೂ ಇಬ್ಬರ ನಾಮಕರಣ ಮಾಡಿ ಫ್ಯಾನ್ಸ್​ ಕಾತರಕ್ಕೆ ತೆರೆ ಎಳೆದರು. 

ಇನ್ನು ಮೇಘನಾ ರಾಜ್​ ಕುರಿತು ಹೇಳುವುದಾದರೆ ದೊಡ್ಡ ಬ್ರೇಕ್​ ಬಳಿಕ  ತತ್ಸಮ ತತ್ಭದ ಚಿತ್ರದಲ್ಲಿ ನಟಿಸಿದರು.ಸದ್ಯ ಮಗನ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ.  ರಾಯನ್ (Rayan) ಚಿಕ್ಕಪ್ಪ ಧ್ರುವ ಸರ್ಜಾ ಅವರು ರಾಯನ್​ಗೆ ಆಗಾಗ್ಗೆ ಡ್ಯಾನ್ಸ್ ಕಲಿಸಿಕೊಡುತ್ತಾರೆ.  ಚಿಕ್ಕಪ್ಪ ಹೇಳಿಕೊಟ್ಟಂತೆಯೇ ಡ್ಯಾನ್ಸ್​ ಮಾಡುವ ರಾಯನ್​ ಮುಗ್ಧತೆಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಭವಿಷ್ಯದ ಸ್ಯಾಂಡಲ್​ವುಡ್​ ಸ್ಟಾರ್​ ಎಂದೇ ಅಭಿಮಾನಿಗಳು ರಾಯನ್​ನನ್ನು ಗುರುತಿಸುತ್ತಿದ್ದಾರೆ. 

ನಗುಮೊಗದಿಂದಲೇ ರ‍್ಯಾಂಪ್ ವಾಕ್ ಮುಗಿಸಿ, ಸಾವನ್ನು ಜಯಿಸಲು ಆಸ್ಪತ್ರೆಗೆ ದಾಖಲಾದ ನಟಿ ಹಿನಾ ಖಾನ್!

 
 
 
 
 
 
 
 
 
 
 
 
 
 
 

A post shared by Meghana Raj Sarja (@megsraj)

Latest Videos
Follow Us:
Download App:
  • android
  • ios