ನಗುಮೊಗದಿಂದಲೇ ರ‍್ಯಾಂಪ್ ವಾಕ್ ಮುಗಿಸಿ, ಸಾವನ್ನು ಜಯಿಸಲು ಆಸ್ಪತ್ರೆಗೆ ದಾಖಲಾದ ನಟಿ ಹಿನಾ ಖಾನ್!
3ನೇ ಹಂತದ ಸ್ತನ ಕ್ಯಾನ್ಸರ್ ಬೆನ್ನಲ್ಲೇ ಮ್ಯೂಕೋಸಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದರೂ ನಗುಮೊಗದಿಂದಲೇ ರ‍್ಯಾಂಪ್ ವಾಕ್ ಮುಗಿಸಿದ್ದಾರೆ ನಟಿ ಹಿನಾ ಖಾನ್. ಪುನಃ ಆಸ್ಪತ್ರೆಗೆ ದಾಖಲಾದ ನಟಿಗೆ ಶ್ಲಾಘನೆಗಳ ಮಹಾಪೂರ ಹರಿದುಬರುತ್ತಿದೆ.
ಕಿರುತೆರೆ ನಟಿ ಹಿನಾ ಖಾನ್ ಕ್ಯಾನ್ಸರ್ ಜೊತೆ ಹೋರಾಟ ಮಾಡುತ್ತಿದ್ದಾರೆ. ಮೂರನೆಯ ಹಂತದ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವ ನಡುವೆಯೇ, ಮ್ಯೂಕೋಸಿಟಿಸ್ ಎಂಬ ಮಹಾಮಾರಿಯೂ ಅವರ ದೇಹ ಸೇರಿದೆ. ಕ್ಯಾನ್ಸರ್ನಿಂದ ಹೊರಬರಲು ನಿರ್ಧರಿಸಿದ್ದೇನೆ ಎಂದು 36 ವರ್ಷದ ಹಿನಾ ಖಾನ್ ಹೇಳಿದ್ದರು. ನನಗೆ ಮೂರನೇ ಹಂತದ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇದೊಂದು ಸವಾಲಿನ ರೋಗದ ವಿರುದ್ಧ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಎಲ್ಲರಿಗೂ ಭರವಸೆ ನೀಡಲು ನಾನು ಬಯಸುತ್ತೇನೆ. ನಾನು ಬಲಶಾಲಿ, ದೃಢನಿಶ್ಚಯ ಹೊಂದಿದ್ದೇನೆ. ಈ ರೋಗವನ್ನು ಜಯಿಸಲು ನಿಜವಾಗಿಯೂ ಬದ್ಧನಾಗಿದ್ದೇನೆ. ನನ್ನ ಚಿಕಿತ್ಸೆಯು ಈಗಾಗಲೇ ಪ್ರಾರಂಭವಾಗಿದೆ ಮತ್ತು ಇದರಿಂದ ಇನ್ನಷ್ಟು ಶಕ್ತಿಶಾಲಿಯಾಗಿ ಹೊರಬರಲು ಅಗತ್ಯವಿರುವ ಎಲ್ಲವನ್ನೂ ಮಾಡಲು ನಾನು ಸಿದ್ಧನಿದ್ದೇನೆ ಎಂದು ಬರೆದುಕೊಂಡಿದ್ದರು. ಇದು ಪಬ್ಲಿಸಿಟಿಯ ಸ್ಟಂಟ್ ಎಂದವರೂ ಇದ್ದಾರೆ. ಆದರೆ ಈಕೆಯ ನೋವಿಗೆ ಹಲವರು ಸ್ಪಂದಿಸಿದ್ದಾರೆ. ಆಕೆಯ ಧೈರ್ಯದ ಮಾತುಗಳಿಗೆ ಅನೇಕ ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕ್ಯಾನ್ಸರ್ ಸಮಯದಲ್ಲಿ ನೀಡಲಾಗುವ ಕಿಮೋ ಥೆರಪಿ ಹಲವು ಸಂದರ್ಭಗಳಲ್ಲಿ ಇದು ಅಡ್ಡ ಪರಿಣಾಮ ಬೀರುತ್ತದೆ. ಅದೇ ರೀತಿ ಹಿನಾ ಖಾನ್ ಅವರಿಗೂ ಆಗಿದೆ. ಈ ಕುರಿತು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಪೋಸ್ಟ್ ಮಾಡಿಕೊಂಡಿರುವ ನಟಿ, ಕಿಮೋಥೆರಪಿಯ ಅಡ್ಡ ಪರಿಣಾಮಗಳಿಂದ ಮ್ಯೂಕೋಸಿಟಿಸ್‌ನಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ! ನಟಿ ತಮ್ಮ ಚಿಕಿತ್ಸೆ ಮತ್ತು ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿದ್ದಾರೆ. ಈಗ ಮ್ಯೂಕೋಸಿಟಿಸ್ ಬಗ್ಗೆ ಹೇಳಿಕೊಂಡಿದ್ದು, ಅಭಿಮಾನಿಗಳಲ್ಲಿ ಆತಂಕ ಮನೆಮಾಡಿದೆ.
ಮಗಳ ಪಾಲನೆಯೇ ಸರ್ವಸ್ವ ಎಂದಿದ್ದ ದೀಪಿಕಾ ಹೊಸ ಕೆಲಸಕ್ಕೆ ಸಹಿ! ಉದ್ಯೋಗ ಕಳಕೊಂಡ ರಣವೀರ್ ಸಿಂಗ್
ಇವೆಲ್ಲವುಗಳ ನಡುವೆಯೇ ಹಿನಾ ಖಾನ್ ನಗುಮೊಗದಿಂದಲೇ ರ‍್ಯಾಂಪ್ ವಾಕ್ ಮಾಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ. ಮದುಮಗಳಂತೆ ರೆಡಿಯಾಗಿರುವ ನಟಿ, ತಮಗೆ ಯಾವುದೇ ಸಮಸ್ಯೆ ಇಲ್ಲ ಎನ್ನುವಂತೆ ರ‍್ಯಾಂಪ್ ವಾಕ್ ಮಾಡಿದ್ದಾರೆ. ಈ ಕಾರ್ಯಕ್ರಮ ಮುಗಿಸಿ ಪುನಃ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ. ಸಾವನ್ನು ಜಯಿಸುವ ಬಲವಾದ ನಂಬಿಕೆಯೊಂದೇ ಇಂಥ ಮಹಾಮಾರಿಯನ್ನೂ ಹಿಮ್ಮೆಟ್ಟಿಸಲು ಸಾಧ್ಯ ಎನ್ನುವ ಬಗ್ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಕ್ಯಾನ್ಸರ್ನಂಥ ರೋಗ ಮೈ ಹೊಕ್ಕಾಗ ಧೃತಿಗೆಡದೇ ಚಿಕಿತ್ಸೆಗೆ ಸ್ಪಂದಿಸಿದರೆ, ಸಾವು ಸಮೀಪ ಸುಳಿಯುವುದಿಲ್ಲ. ಮನೋಬಲದಿಂದ ಏನುಬೇಕಾದರೂ ಮಾಡಲು ಸಾಧ್ಯ ಎಂದಿರುವ ನೆಟ್ಟಿಗರು, ಇದಕ್ಕೆ ಹಿನಾ ಖಾನ್ ಅವರೇ ಸಾಕ್ಷಿ ಎಂದಿದ್ದಾರೆ.
ಅಂದಹಾಗೆ, ಹಿಂದಿ ದೂರದರ್ಶನ ಉದ್ಯಮದಲ್ಲಿ ಜನಪ್ರಿಯ ಹೆಸರಾಗಿದ್ದಾರೆ ಹಿನಾ ಖಾನ್. ಬಿಗ್ಬಾಸ್ನಿಂದ ಫೇಮಸ್ ಆಗಿರೋ ಇವರು ಕೆಲವು ಬಾಲಿವುಡ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಖತ್ರೋನ್ ಕೆ ಖಿಲಾಡಿ ಸೀಸನ್ 8, ನಾಗಿನ್ 5 ನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇದರಲ್ಲದೆ ಹ್ಯಾಕ್, ಸ್ಮಾರ್ಟ್‌ಫೋನ್, ಲೈನ್‌ಗಳು, ವಿಶ್‌ಲಿಸ್ಟ್ ಮತ್ತು ಅನ್‌ಲಾಕ್ ಎಂಬ ಸಿನೆಮಾಗಳು ಮತ್ತು ಡ್ಯಾಮೇಜ್ಡ್ 2 ನ ಎರಡನೇ ಸೀಸನ್ ವೆಬ್-ಸರಣಿಯಲ್ಲಿ ಕೂಡ ನಟಿಸಿದ್ದಾರೆ. ಪ್ರಖ್ಯಾತ ಸೀರಿಯಲ್ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈನಲ್ಲಿ ಅಕ್ಷರಾ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ತುಂಬಾ ಪ್ರಸಿದ್ಧರಾದರು. ನಟಿ ಕಸೌಟಿ ಜಿಂದಗಿ ಕೇ 2 ನಲ್ಲಿ ಕೂಡ ನಟಿಸಿದ್ದರು. ಆದರೆ ಇದೀಗ ನಟಿಯ ಬಾಳಿನಲ್ಲಿ ಬಿರುಗಾಳಿ ಎದ್ದಿದೆ. ಇತ್ತೀಚೆಗಷ್ಟೇ ನಟಿ ತಮಗೆ ಮೂರನೇ ಹಂತದ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಮತ್ತು ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಹಿರಂಗ ಪಡಿಸಿದ್ದರು.
ಚಂದನ್ ಶೆಟ್ಟಿ ಹುಟ್ಟುಹಬ್ಬಕ್ಕೆ ನಿವೇದಿತಾ ಹೀಗೆ ವಿಷ್? ವಿಡಿಯೋ ನೋಡಿ ತಲೆ ಬಿಸಿ ಮಾಡ್ಕೊಂಡ ಫ್ಯಾನ್ಸ್!