Asianet Suvarna News Asianet Suvarna News

ಅಣ್ಣನ ಬರ್ತ್‌ಡೇ ದಿನ ಧ್ರುವ ಹೊಸ ಸಿನಿಮಾ ಅನೌನ್ಸ್: ಫ್ಯಾನ್ಸ್‌ಗೆ ಸರ್ಪೈಸ್

ಅಣ್ಣನ ಹುಟ್ಟುಹಬ್ಬದ ದಿನದಂದೇ ಧ್ರುವ ಹೊಸ ಸಿನಿಮಾ ಅನೌನ್ಸ್ | ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ

Dhruva sarja performs pooja of his next film on brother Chiru sarjas birthday dpl
Author
Bangalore, First Published Oct 17, 2020, 11:41 AM IST
  • Facebook
  • Twitter
  • Whatsapp

ಅಣ್ಣನ ಹುಟ್ಟುಹಬ್ಬದ ದಿನದಂದೇ ಧ್ರುವ ಹೊಸ ಸಿನಿಮಾ ಅನೌನ್ಸ್ ಮಾಡಿ ಫ್ಯಾನ್ಸ್‌ಗೆ ಬಿಗ್ ಸರ್ಪೈಸ್ ಕೊಟ್ಟಿದ್ದಾರೆ. ಪೊಗರು ಹುಡುಗ ದ್ರುವನ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮಾಡಲಾಗಿದೆ.

ಬೆಂಗಳೂರಿನ ಬಸವೇಶ್ವರ ನಗರದಲ್ಲಿರೋ ಗಣಪತಿ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ಮಾಡಲಾಗಿದ್ದು, ಅಣ್ಣನ ಹುಟ್ಟಿದ ದಿನವನ್ನ ಹೊಸ ಸಿನಿಮಾ ಅನೌನ್ಸ್ ಮಾಡಿ ಆಚರಿಸಿದ್ದಾರೆ ಧ್ರುವ.

ಸ್ವಾಗತಂ ಕೃಷ್ಣ: ಚಿರು ಬರ್ತ್‌ಡೇಗೆ ಮೇಘನಾ ಉಡುಗೊರೆ!

ಧ್ರುವ ಹೊಸ ಸಿನಿಮಾಗೆ ನಂದಕಿಶೋರ್ ನಿರ್ದೇಶನ ಮಾಡುತ್ತಿದ್ದು, ಪೊಗರು ಚಿತ್ರದ ಬಳಿಕ ಧ್ರುವ ಮತ್ತು ನಂದಕಿಶೋರ್ ಮತ್ತೊಮ್ಮೆ ಜೊತೆಯಾಗುತ್ತಿದ್ದಾರೆ. ಉದಯ್ ಕೆ ಮೆಹ್ತಾ ನಿರ್ಮಾಣದಲ್ಲಿ ಮೂಡಿ ಬರಲಿದೆ ಧ್ರುವ ಹೊಸ ಸಿನಿಮಾ ಶೂಟಿಂಗ್ ನವೆಂಬರ್ ನಿಂದ ಪ್ರಾರಂಭವಾಗಲಿದೆ.

ಪ್ರತಿ ಸಿನಿಮಾ ಪೂಜೆ ಇದ್ದಾಗ ಧ್ರುವನ ಜೊತೆ ಚಿರಂಜೀವಿ ಸರ್ಜಾ ಇರುತ್ತಿದ್ದರು. ಈ ವರ್ಷ ಅಣ್ಣ ಇಲ್ಲದಿದ್ದಿದ್ದಕ್ಕೆ ಚಿರು ಬರ್ತಡೇ ದಿನವೇ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಲಾಗಿದೆ. ಸಿನಿಮಾದ ಟೈಟಲ್ ಇನ್ನೂ ಫೈನಲ್ ಆಗಿಲ್ಲ .

Follow Us:
Download App:
  • android
  • ios