ಮಾಚ್‌ರ್‍ 11ರಂದು ತೆಲುಗಿನಲ್ಲಿ ನಾಲ್ಕೈದು ಚಿತ್ರಗಳು ಬಿಡುಗಡೆಯಾಗುತ್ತಿವೆ. ತಮ್ಮ ಭಾಷೆಯಲ್ಲೇ ನಾಲ್ಕೈದು ಚಿತ್ರಗಳು ಬಿಡುಗಡೆಯಾಗುತ್ತಿರುವ ಕಾರಣ, ದರ್ಶನ್‌ ನಟನೆಯ ‘ರಾಬರ್ಟ್‌’ ಚಿತ್ರದ ಬಿಡುಗಡೆ ದಿನಾಂಕವನ್ನು ಒಂದು ವಾರದ ಮಟ್ಟಿಗೆ ಮುಂದೂಡಲು ವಿತರಕರು ಸಲಹೆ-ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ತಮ್ಮ ಭಾಷೆಯ ಚಿತ್ರಗಳು ಹಾಗೂ ಹೀರೋಗಳಿಗೆ ತೊಂದರೆ ಆಗುತ್ತದೆ ಎನ್ನುವುದು ಅವರ ಮತ್ತೊಂದು ವಾದ. ಆದರೆ ಈ ವಾದವನ್ನು ದರ್ಶನ್‌ ನಿರಾಕರಿಸಿದ್ದಾರೆ.

"

ಕೃಷಿ ಇಲಾಖೆಗೆ 'ಡಿ'ಬಾಸ್.. ರೈತರ ಬೆನ್ನೆಲುಬಾಗಿ ನಿಲ್ಲಲಿರುವ ದರ್ಶನ್..!

‘ರಾಬರ್ಟ್‌’ ಸಿನಿಮಾ ಮಾಚ್‌ರ್‍ 11ರಂದು ಬಿಡುಗಡೆಯಾಗಲಿದೆ ಎಂದು ಆ ನಾಲ್ಕು ಚಿತ್ರಗಳಿಗೂ ಮುನ್ನ ನಾವೇ ದಿನಾಂಕ ಪ್ರಕಟಣೆ ಮಾಡಿದ್ದೇವೆ. ತೆಲುಗು ವರ್ಷನ್‌ ವಿತರಣೆ ಮಾಡಲು ಮುಂದೆ ಬಂದವರಿಗೂ ಇದು ಗೊತ್ತು. ಆದರೂ ಈಗ ಇದ್ದಕ್ಕಿದ್ದಂತೆ ಬಿಡುಗಡೆ ದಿನಾಂಕ ಮುಂದೂಡಿ ಅಂದರೆ ಹೇಗೆ? ಚಿತ್ರಮಂದಿರಗಳನ್ನು ಕೊಡಲ್ಲ ಅಂದರೆ ಯಾವ ನ್ಯಾಯ ಎಂಬುದು ದರ್ಶನ್‌ ಹಾಗೂ ಉಮಾಪತಿ ಅವರ ಪ್ರಶ್ನೆ.

ಸೌಹಾರ್ದ ಸಭೆ:

ದರ್ಶನ್‌ ನೀಡಿರುವ ದೂರು ಸ್ವೀಕರಿಸಿರುವ ವಾಣಿಜ್ಯ ಮಂಡಳಿ ಈಗಾಗಲೇ ಸಂಬಂಧಪಟ್ಟತೆಲುಗು ಸಿನಿಮಾ ಮಂದಿ ಜತೆ ಮಾತುಕತೆ ನಡೆಸಿದ್ದು, ಸೌತ್‌ ಇಂಡಿಯನ್‌ ಫಿಲಮ್‌ ಚೇಂಬರ್‌ಗೂ ವಿಷಯ ಮುಟ್ಟಿಸಿದೆ. ‘ಕನ್ನಡ ಚಿತ್ರಗಳಿಗೆ ನಿಮ್ಮಲ್ಲಿ ತೊಂದರೆಯಾದರೆ ಮುಂದೆ ಕರ್ನಾಟಕದಲ್ಲೂ ನಿಮ್ಮ ಭಾಷೆಯ ಚಿತ್ರಗಳಿಗೆ ತೊಂದರೆ ಆಗುವ ಸಾಧ್ಯತೆಗಳಿವೆ. ಹೀಗೆ ಪರಸ್ಪರ ವಿರೋಧ ಬೆಳೆಸಿಕೊಳ್ಳುವ ವಾತಾವರಣ ನಿರ್ಮಿಸಿಕೊಳ್ಳುವುದು ಬೇಡ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಭಿಪ್ರಾಯ ವ್ಯಕ್ತಪಡಿಸಿದೆ. ಜ.31ರಂದು ಸೌತ್‌ ಇಂಡಿಯಾ ಫಿಲಮ್‌ ಚೇಂಬರ್‌ನ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಅಲ್ಲಿ ಈ ವಿಷಯ ಪ್ರಸ್ತಾಪಿಸಿ ಇಡೀ ಪ್ರಕರಣಕ್ಕೆ ಸೌಹಾರ್ದಯುತವಾದ ಪರಿಹಾರ ಕಂಡುಕೊಳ್ಳಲು ವಾಣಿಜ್ಯ ಮಂಡಳಿ ಮುಂದಾಗಿದೆ.

ಥಿಯೇಟರ್‌ನಲ್ಲಿ ದರ್ಶನ್-ಸುದೀಪ್‌ ಮುಖಾಮುಖಿ? 

ಈ ವಿಚಾರದ ಕುರಿತು ಮಾತನಾಡಿರುವ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ‘ತೆಲುಗಿನಲ್ಲಿ ಅಂದುಕೊಂಡ ದಿನಾಂಕಕ್ಕೆ ರಾಬರ್ಟ್‌ ಚಿತ್ರ ಬಿಡುಗಡೆ ಮಾಡಲು ಅವಕಾಶ ಕೊಡದಿದ್ದರೆ ಅವರು ತೀವ್ರ ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ. ಸೌತ್‌ ಇಂಡಿಯಾ ಫಿಲಮ್‌ ಚೇಂಬರ್‌ ಅಧ್ಯಕ್ಷ ಪ್ರಸಾದ್‌ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಒಂದು ವೇಳೆ ನಮಗೆ ತೊಂದರೆ ಆದರೆ, ಖಂಡಿತ ಮುಂದಿನ ಸಮಸ್ಯೆಗಳಿಗೆ ಅವರೇ ಕಾರಣಕರ್ತರು’ ಎಂದಿದ್ದಾರೆ.

"

ಅಲ್ಲಿ ನಮ್ಮ ಸಿನಿಮಾಗೆ ತಕರಾರು: ದರ್ಶನ್‌

- ಆದ್ರೆ ನಾವು ಪ್ರಶ್ನಿಸಬಾರ್ದು: ಚಾಲೆಂಜಿಂಗ್‌ ಸ್ಟಾರ್‌

‘ನಾವು ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು. ಬೇರೆ ಭಾಷೆಯ ನಟರು ಇಲ್ಲಿಗೆ ಬಂದಾಗ ನಾವು ಅವರ ಭಾಷೆಯಲ್ಲೇ ಮಾತನಾಡುತ್ತೇನೆ. ಅವರು ನಮ್ಮ ಭಾಷೆಯಲ್ಲಿ ಮಾತನಾಡಲ್ಲ. ತೆಲುಗು, ತಮಿಳಿನವರಿಗೆ ಇರುವ ಭಾಷಾಭಿಮಾನ ನಮಗೆ ಕಿಂಚಿತ್ತೂ ಇಲ್ಲ.’

ಈ ಮಾತು ಹೇಳಿದ್ದು ದರ್ಶನ್‌. ವಾಣಿಜ್ಯ ಮಂಡಳಿಗೆ ದೂರು ನೀಡಲು ಬಂದ ಸಂದರ್ಭ ಅವರು ಈ ಮಾತು ಹೇಳಿದರು.

‘ನಾವು ಅಲ್ಲಿಗೆ ಹೋದರೆ ಮಾರುಕಟ್ಟೆಕಬಳಿಸುತ್ತೇವೆ ಎನ್ನುವ ಭಯ ಶುರುವಾಗಿದೆ. ಅವರು ಇಲ್ಲಿ ದೊಡ್ಡ ಮಟ್ಟದಲ್ಲಿ ನೂರಾರು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ನಾವು ಮಾತ್ರ ಅವರನ್ನು ಪ್ರಶ್ನೆ ಮಾಡಬಾರದು. 50 ಸಿನಿಮಾಗಳನ್ನು ಪೂರೈಸಿರುವ ನಟ ನಾನು. ನನ್ನ ಚಿತ್ರಕ್ಕೇ ಹೀಗೆ ಮಾಡಿದರೆ ನಾಳೆ ಹೊಸಬರ ಚಿತ್ರಗಳ ಕತೆ ಏನು’ ಎಂದು ಅವರು ಪ್ರಶ್ನಿಸಿದರು.