ಸ್ಯಾಂಡಲ್‌ವುಡ್ ಬಾಕ್ಸ್‌ ಆಫೀಸ್‌ ಸುಲ್ತಾನ್‌ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಭದ್ರಾವತಿ ಬೆಡಗಿ, ಸುಪ್ರಾ ಇಂಟರ್‌ನ್ಯಾಷನಲ್ ಪ್ರಶಸ್ತಿ ವಿಜೇತೆ ಆಶಾ ಭಟ್ ನಟನೆಯ ಬಹು ನಿರೀಕ್ಷಿತ ಸಿನಿಮಾ 'ರಾಬರ್ಟ್' ತೆರೆ ಕಾಣಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈಗಾಗಲೇ ಪೋಸ್ಟರ್ ಲುಕ್‌ ಮೂಲಕ ಕುತೂಹಲ ಹೆಚ್ಚಿಸಿರುವ ಸಿನಿಮಾ ಕಡೇ ಹಂತದ ಶೂಟಿಂಗ್ ವೇಳೆ ವಿಘ್ನ ಎದುರಿಸುತ್ತಿದೆ. ಚಿತ್ರದ ಮಖ್ಯ ಸನ್ನಿವೇಷಗಳನ್ನು ವಾರಣಾಸಿಯಲ್ಲಿ ಚಿತ್ರೀಕರಿಸಲಾಗಿದೆ. ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಯುರೋಪ್‌ನಲ್ಲಿ ಚಿತ್ರೀಕರಿಸಲು ತಂಡ ನಿರ್ಧರಿಸಿತ್ತು. ಆದರೆ ಅಲ್ಲಿ ಕರೋನಾ ವೈರಸ್‌ ಭೀತಿ ಇರೋದ್ರಿಂದ ಶೂಟಿಂಗ್ ಕ್ಯಾನ್ಸಲ್ ಮಾಡಲಾಗಿದೆ, ಎಂದು ರಾಬರ್ಟ್ ಟೀಂ ತಿಳಿಸಿದೆ.

ದರ್ಶನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್; ರಾಬರ್ಟ್ ರಿಲೀಸ್‌ಗೆ ಡೇಟ್‌ ಫಿಕ್ಸ್!

ಸ್ಪೇನ್‌ನಲ್ಲಿ ಚಿತ್ರದ ಮುಖ್ಯ ಹಾಡೊಂದನ್ನು ಚಿತ್ರೀಕರಿಸಲು ನಿರ್ಧರಿಸಲಾಗಿತ್ತು. ಅದನ್ನೂ ಮತ್ತೊಂದು ಸ್ಥಳದಲ್ಲಿ ಚಿತ್ರೀಕರಿಸಲು ನಿರ್ಮಾಪಕರು ನಿರ್ಧಿರಿಸಿದ್ದು, ಸ್ಥಳ ಶೋಧ ನಡೆಸಲಾಗುತ್ತಿದೆ. 

ಎರಡು ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಈ ಚಿತ್ರದಲ್ಲಿ ದರ್ಶನ್‌ಗೆ ಜೋಡಿಯಾಗಿ ಆಶಾ ಭಟ್ ಕಾಣಿಸಿಕೊಂಡರೆ ಸಿನಿಮಾ ವಿಶೇಷತೆಯನ್ನು ಎತ್ತಿ ಹಿಡಿಯುವುದು ಹಾಡುಗಳು. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಕಮಾಲ್‌ಗೆ ತಲೆದೂಗಲು ಅಭಿಮಾನಿಗಳು ಕಾತುರದಲ್ಲಿದ್ದಾರೆ. 

ಬರ್ತಡೇ ದಿನ ದರ್ಶನ್ ಹೊಡೆದ ಆ ವ್ಯಕ್ತಿ ಯಾರು?

ಮೈಸೂರಿನಲ್ಲಿ ಅರ್ಜುನ್ ಜನ್ಯಗೆ ಹೃದಯಾಘಾತವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗಿದ್ದು, ವಿಶ್ರಾಂತಿಯಲ್ಲಿದ್ದಾರೆ. ಮಾರ್ಚ್ 21ಕ್ಕೆ ಅರ್ಜುನ್ ಜನ್ಯ ನೈಟ್ಸ್‌ನೊಂದಿಗೆ ರಾಬರ್ಟ್ ಆಡಿಯೋ ಲಾಂಚ್ ಮಾಡುವ ಯೋಚನೆ ಚಿತ್ರ ತಂಡಕ್ಕಿದೆ. ನಂತರ ಟ್ರೇಲರ್ ಲಾಂಚ್ ಮಾಡಿ, ಚಿತ್ರ ಪ್ರಚಾರ ಮಾಡುವ ಯೋಜನೆ ಇದೆ. 

ಈ ಶೆಡ್ಯೂಲ್‌ಗೆ ಅರ್ಜುನ್ ಜನ್ಯಾ ಅನಾರೋಗ್ಯದಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲವೆಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.