ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ 'ರಾಬರ್ಟ್' ಕಾರ್ಮಿಕರ  ದಿನಾಚರಣೆಯಂದು ಎಲ್ಲಾ ಸಿನಿ ಕಾರ್ಮಿಕರಿಗೆ ಮೇಕಿಂಗ್ ವಿಡಿಯೋ ಮೂಲಕ ಶುಭಾಶಯ ಕೋರಿದ್ದಾರೆ.  

ತರುಣ್‌ ಸುಧೀರ್‌ ಆಕ್ಷನ್ ಕಟ್‌ ಹೇಳಿ ಡಿ-ಬಾಸ್‌ ಅಭಿನಯದಲ್ಲಿ ಮೂಡಿ ಬರುತ್ತಿರುವ ರಾಬರ್ಟ್‌ ಚಿತ್ರ ದಿನೇ ದಿನೇ ಕನ್ನಡ ಸಿನಿ ಪ್ರೇಕ್ಷಕರಲ್ಲಿ  ಕುತೂಹಲ ಹೆಚ್ಚಿಸುತ್ತಿದೆ.  ಈಗಾಗಲೇ  ರಿಲೀಸ್‌ ಆಗಿ ಸೂಪರ್ ಹಿಟ್‌ ಕಾಣಬೇಕಿದ್ದ  ಸಿನಿಮಾ ಲಾಕ್‌ಡೌನ್‌ನಿಂದ ರಿಲೀಸ್‌ ದಿನಾಂಕವನ್ನು ಮುಂದೂಡಲಾಗಿದೆ. ಪೋಸ್ಟರ್‌ ಹಾಗೂ ಹಾಡುಗಳ ಮೂಲಕವೇ ಕಿಚ್ಚು ಹೆಚ್ಚಿಸಿರುವ  ರಾಬರ್ಟ್‌ ಮೇಕಿಂಗ್ ವಿಡಿಯೋ ನೋಡಿ.... 

ರಾಬರ್ಟ್‌ ಚಿತ್ರದ 'ಜೈ ಶ್ರೀರಾಮ್' ಮೇಕಿಂಗ್‌ ವಿಡಿಯೋ ವೈರಲ್!

'ನಮ್ಮ ಕನಸು ಸಾಕಾರಗೊಳಿಸುವ ನಿಜವಾದ ನಾಯಕರು, ಬೆಳ್ಳಿ ಪರದೆಯ ಹಿಂದಿನ ನಿಜವಾದ ಮಿಂಚು ನಮ್ಮ ರಾಬರ್ಟ್‌ ಚಿತ್ರ ತಾಂತ್ರಿಕ ವರ್ಗಕ್ಕೆ ಕಾರ್ಮಿಕರ ದಿನದ ಶುಭಾಶಯಗಳು' ಎಂದು ವಿಡಿಯೋ ಮುಕ್ತಾಯದಲ್ಲಿ ತಿಳಿಸಿದ್ದಾರೆ.

ವಿಡಿಯೋದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಫೈಟಿಂಗ್ ಸನ್ನಿವೇಶ ಶುರು ಮಾಡುವ ಮುನ್ನ ನಮಸ್ಕರಿಸಲು ಬಂದ ಸಹ ಕಲಾವಿದರಿಗೆ ಶಿರ ಭಾಗಿ ನಮಸ್ಕರಿಸಿರುವುದು. ಚಿತ್ರದ ಬಹುತೇಕ ಶೂಟಿಂಗ್‌ ಸೆಟ್‌ಗಳನ್ನು ತೋರಿಸಲಾಗಿದೆ. ಈಗಾಗಲೇ  ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಜೈ ಶ್ರೀರಾಮ್‌ ಹಾಡಿನ ಸೆಟ್‌ ಎಷ್ಟು ದೊಡ್ಡದು ಎಂದು ನಾವು ಈ ವಿಡಿಯೋದಲ್ಲಿ ಕಾಣಬಹುದು. 

ರಾಬರ್ಟ್‌ ಚಿತ್ರ 'Brothers from another mother' ಸಾಂಗ್‌ ಇಲ್ಲಿದೆ ನೋಡಿ!

ಈ ಹಿಂದೆ ಶ್ರೀರಾಮ ನವಮಿಯ ಪ್ರಯುಕ್ತ 'ಜೈ ಶ್ರೀರಾಮ್‌' ಹಾಡಿನ ಮೇಕಿಂಗ್ ವಿಡಿಯೋ ರಿಲೀಸ್ ಮಾಡಲಾಗಿತ್ತು. ಹನುಮನಂತೆ ವೇಷ ಧರಿಸಿರುವ ದರ್ಶನ್‌ ಲುಕ್‌ ವೈರಲ್‌ ಆಗಿತು. ಚಿತ್ರದ ಮೂರನೇ ಹಾಡು 'ದೋಸ್ತಾ ಕಣೋ..ಬ್ರದರ್‌ ಫ್ರಂ ಅನದರ್ ಮದರ್‌' ಸ್ನೇಹದ  ಮಹತ್ವನ್ನು ಸಾರುವ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.  

'ಸರ್ವರಿಗೂ ಕಾರ್ಮಿಕರ ದಿನಾಚರಣೆಯ ಹಾರ್ದಿಕ  ಶುಭಾಶಯಗಳು. ಕ್ಯಾಮೆರಾ ಹಿಂದೆ ಕೆಲಸ ಮಾಡುವ ಕಾಣದ ಕೈಗಳಿಗೆ ಈ ನಮ್ಮ #Roberrt ಚಿತ್ರದ ಮೇಕಿಂಗ್ ವಿಡಿಯೋ ಅರ್ಪಣೆ'  ಎಂದು ದರ್ಶನ್‌ ಟ್ಟಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

 

ಇನ್ನು ರಾಬರ್ಟ್‌ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಆಶಾ ಭಟ್‌ ತನ್ನ ಪಾತ್ರದ ಬಗ್ಗೆ ಮಾತ್ರವಲ್ಲದೆ ಚಿತ್ರದ ಬಗ್ಗೆಯೂ ಹೆಚ್ಚು ನಿರೀಕ್ಷೆ ಹೊಂದಿದ್ದಾರಂತೆ.  ರಾಬರ್ಟ್‌ನಲ್ಲಿ ನಾಯಕ ನಟಿಯ  ಪಾತ್ರ ಪಡೆದ ನಂತರ ಆಶಾಗೆ ಅನೇಕ  ಚಿತ್ರಗಳಿಗೆ  ಆಫರ್‌ಗಳು ಬಂದಿದೆ ಆದರೆ ರಾಬರ್ಟ್‌ ಮೇಲಿರುವ ನಿರೀಕ್ಷೆಗೆ ಆಶಾ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿಕೊಂಡಿದ್ದಾರೆ.