ಅಂತೂ ಇಂತೂ ರಾಬರ್ಟ್ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ನಿರ್ದೇಶಕ ತರುಣ್ ಸುಧೀರ್ ಡಿ-ಬಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಸಿನಿಮಾ 'ರಾಬರ್ಟ್' ದಿನೇ ದಿನೇ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದೆ.
ನಿರ್ದೇಶಕ ತರುಣ್ ಸುಧೀರ್. 'ಫೆ. 29 ರ ಸಂಜೆ 5 ಕ್ಕೆ ಪೋಸ್ಟರ್ ರಿವೀಲ್ ಮಾಡುತ್ತೇನೆ. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕಿದೆ ' ಎಂದು ಟ್ಟೀಟ್ ಮಾಡಿದ್ದರು. ಅದರಂತೆ ಫೆ.29 ರಂದು ಪೋಸ್ಟರ್ ರಿವೀಲ್ ಮಾಡಿದ್ದಾರೆ.
ಫೈಟರ್‌ಗೆ ಡೈಲಿ ಪೇಮೆಂಟ್, ವಿನೋದ್‌ಗೆ ಹೈ ಪೇಮೆಂಟ್; ನಿರ್ಮಾಪಕರಿಗೆ ದರ್ಶನ್ ಖಡಕ್ ಮಾತು!
'ರಾಬರ್ಟ್ ಚಿತ್ರದ ಮೊದಲ ಹಾಡನ್ನು ಮಾರ್ಚ್ 3 ರ ಸಂಜೆ 5 ಕ್ಕೆ ರಿಲೀಸ್ ಮಾಡಲಾಗುತ್ತದೆ. ಇದು ಸ್ಪೆಷಲ್ ಆಗಿ ಡಿ-ಬಾಸ್ ಫ್ಯಾನ್ಸ್‌ಗೆ. ಶೀಘ್ರದಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ' ಎಂದು ಹಾಡಿನ ಮೊದಲ ಸಾಲುಗಳನ್ನು ರಿವೀಲ್ ಮಾಡಿದ್ದಾರೆ.
ಚಿತ್ರೀಕರಣದ ಕೊನೆಯ ಹಂತದಲ್ಲಿರುವ ರಾಬರ್ಟ್ ಟೀಂ ಏಪ್ರಿಲ್ 10 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ವಿಶೇಷ ಹಾಡಿನ ಚಿತ್ರೀಕರಣಕ್ಕೆಂದು ಯೂರೋಪ್‌ಗೆ ತೆರೆಳಿದ ಟೀಂ ಕೊರೋನ ವೈರಸ್ ಭೀತಿಯಿಂದ ಲೊಕೇಷನ್ ಬದಲಾಯಿಸಿದೆ.
