ಸೈಮಾದಲ್ಲಿ 4 ಪ್ರಶಸ್ತಿ ಗೆದ್ದು ಕಮಾಲ್ ಮಾಡಿದ ದರ್ಶನ್ ಚಿತ್ರ 'ಕಾಟೇರ'...; ಆದರೆ....!
ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯೇ ಕಾಟೇರ ಪಾಲಾಗಿದೆ. ಇನ್ನೂ ಅತ್ಯುತ್ತಮ ಸಂಗೀತ ನಿರ್ದೇಶ ಪ್ರಶಸ್ತಿ ಹರಿಕೃಷ್ಣಗೆ ಸಿಕ್ಕಿದ್ರೆ , ಬೆಸ್ಟ್ ಡೆಬ್ಯೂ ಆಕ್ಟ್ರೆಸ್ ಅವಾರ್ಡ್ ಆರಾಧನಾ ಪಾಲಾಗಿದೆ. ಅಷ್ಟೇ ಅಲ್ಲ, 'ಪಸಂದಾಗವ್ನೇ..' ಹಾಡನ್ನ ಹಾಡಿದ ಮಂಗ್ಲಿಗೆ ಅತ್ಯುತ್ತಮ ಗಾಯಕಿ ಸೈಮಾ ಅವಾರ್ಡ್ ಸಿಕ್ಕಿದೆ...
ಈ ಬಾರಿಯ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭ ದುಬೈನಲ್ಲಿ ಅದ್ಧೂರಿಯಾಗಿ ನಡೀತಾ ಇದೆ. ವಿಶೇಷ ಅಂದ್ರೆ ಈ ಬಾರಿ ಕನ್ನಡದಿಂದ ಕಾಟೆರ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿಕೊಂಡಿದೆ. ಅಷ್ಟೇ ಅಲ್ಲ 4 ವಿಭಾಗಗಳಲ್ಲಿ ಕಾಟೇರ ಅವಾರ್ಡ್ ಪಡೆದುಕೊಂಡಿದೆ. ಬೇರೆಲ್ಲ ತಾರೆಯರು ದುಬೈನಲ್ಲಿ ಸಂಭ್ರಮದಿಂದ ಅವಾರ್ಡ್ ಪಡಿತಾ ಇದ್ರೆ ರಿಯಲ್ ಕಾಟೆರ ದರ್ಶನ್ ಮಾತ್ರ ಬಳ್ಳಾರಿ ಜೈಲಲ್ಲಿ ಕಂಬಿ ಎಣಿಸುತ್ತಾ ಇದ್ದಾರೆ.. ಈ ಬಗ್ಗೆ ಚಿಕ್ಕದೊಂದು ವರಧಿ ಇಲ್ಲಿದೆ
ಯೆಸ್ ಕಾಟೇರ ಸಿನಿಮಾ ಈ ಬಾರಿಯ ಸೈಮಾ ರೇಸ್ ನಲ್ಲಿ 8 ವಿಭಾಗಗಳಲ್ಲಿ ಪ್ರಶಸ್ತಿಯ ರೇಸ್‌ನಲ್ಲಿ ಇತ್ತು. ದರ್ಶನ್ ನಟನೆಯ ಈ ಸಿನಿಮಾಗೆ ಪ್ರಶಸ್ತಿ ಕೊಡ್ತಾರಾ ಅನ್ನೋ ಅನುಮಾನವೂ ಜೊತೆ ಜೊತೆಗೆ ಇತ್ತು. ಯಾಕೆ ಅಂದ್ರೆ ಫಿಲ್ಮ್ ಫೇರ್ ನಲ್ಲೂ ಕಾಟೇರ 8 ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ಆದ್ರೆ ದರ್ಶನ್ ಜೈಲಿನಲ್ಲಿರೋ ಕಾರಣಕ್ಕೆ ಸುಮ್ಮನೇ ವಿವಾದಗಳೇ ಬೇಡ ಅಂತ ಫಿಲ್ಮ್ ಫೇರ್ ಆಯೋಜಕರು ಯಾವ ವಿಭಾಗದಲ್ಲೂ ಕಾಟೇರಗೆ ಪ್ರಶಸ್ತಿ ಕೊಡದೇ ಹೊರಹಾಕಿದ್ರು.
ಕಾಕತಾಳೀಯವೋ ಶಾಪವೋ..? 'ಕುರುಕ್ಷೇತ್ರ'ದ ಈ ಇಬ್ಬರೂ ಈಗ ಜೈಲುಪಾಲು!
ಸಿನಿಮಾದ ನಾಯಕ ಮಾಡಿದ ತಪ್ಪಿಗೆ ಇಡೀ ಸಿನಿತಂಡಕ್ಕೆ ಶಿಕ್ಷೆ ಅನ್ನುವಂತೆ ಆಗಿತ್ತು. ಆದ್ರೆ ಸೈಮಾನಲ್ಲಿ ಮಾತ್ರ ಕಾಟೇರನಿಗೆ ಅನ್ಯಾಯ ಆಗಿಲ್ಲ. 8 ವಿಭಾಗಗಳಲ್ಲಿ ಈ ಸಿನಿಮಾ ಪ್ರಶಸ್ತಿ ರೇಸ್ ನಲ್ಲಿತ್ತು. ಇದೀಗ 4 ವಿಭಾಗಗಳಲ್ಲಿ ಪ್ರಶಸ್ತಿಯನ್ನ ಗಳಿಸಿಕೊಂಡಿದೆ. ಈ ಬಾರಿ ದುಬೈನಲ್ಲಿ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭ ನಡೀತಾ ಇದ್ದು ಕಾಟೇರ ಟೀಮ್ ಗೆ 4 ಅವಾರ್ಡ್ ಗಳು ಒಲಿದು ಬಂದಿವೆ.
ಮೊದಲನೇಯದ್ದಾಗಿ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯೇ ಕಾಟೇರ ಪಾಲಾಗಿದೆ. ಇನ್ನೂ ಅತ್ಯುತ್ತಮ ಸಂಗೀತ ನಿರ್ದೇಶ ಪ್ರಶಸ್ತಿ ಹರಿಕೃಷ್ಣಗೆ ಸಿಕ್ಕಿದ್ರೆ , ಬೆಸ್ಟ್ ಡೆಬ್ಯೂ ಆಕ್ಟ್ರೆಸ್ ಅವಾರ್ಡ್ ಆರಾಧನಾ ಪಾಲಾಗಿದೆ. ಅಷ್ಟೇ ಅಲ್ಲ, 'ಪಸಂದಾಗವ್ನೇ..' ಹಾಡನ್ನ ಹಾಡಿದ ಮಂಗ್ಲಿಗೆ ಅತ್ಯುತ್ತಮ ಗಾಯಕಿ ಸೈಮಾ ಅವಾರ್ಡ್ ಸಿಕ್ಕಿದೆ.
ಕನ್ನಡ ಸಿನಿರಂಗಕ್ಕೆ ದೊಡ್ಡ ತಲೆನೋವು ತಂದಿಟ್ಟ ಮೀಟೂ, ಕಾಸ್ಟಿಂಗ್ ಕೌಚ್ ಭೂತ.., ಏನಾಗ್ತಿದೆ ನೋಡಿ..!
ನಿಜ ಹೇಳಬೇಕು ಅಂದ್ರೆ ದರ್ಶನ್ ಕರೀಯರ್ ನಲ್ಲೇ ಕಾಟೇರ ದಿ ಬೆಸ್ಟ್ ಸಿನಿಮಾ. ಬರೀ ಕರುನಾಡಿನಲ್ಲೇ ಈ ಸಿನಿಮಾ 200ಕೋಟಿ ಗೂ ಅಧಿಕ ಗಳಿಕೆ ಮಾಡಿ ದಾಖಲೆ ಬರೆದಿತ್ತು. ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಮೀರಿಸುವಂತೆ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿತ್ತು. ಕಮರ್ಷಿಯಲ್ ಫಾರ್ಮುಲಾ ಬಿಟ್ಟು ಈ ನೆಲದ ಮಣ್ಣಿನ ಶೋಷಿತ ವರ್ಗದ ಕಥೆ ಹೇಳಿದ್ದ ಕಾಟೇರ ಕನ್ನಡಿಗರ ಮನಸು ಗೆದ್ದಿದ್ದ.
ಇನ್ನೂ ಹಿಂದಿನ ಸಿನಿಮಾಗಳಿಗೆ ಹೋಲಿಸಿದ್ರೆ ಇಲ್ಲಿ ದರ್ಶನ್ ಕೂಡ ಅದ್ಭುತವಾಗಿ ನಟಿಸಿದ್ರು. ನಿಜ ಹೇಳಬೇಕು ಅಂದ್ರೆ ಈ ಸಿನಿಮಾ ನೋಡಿದ ವಿಮರ್ಷಕರು ಈ ಬಾರಿ ದರ್ಶನ್ ಗೆ ಸ್ಟೇಟ್, ನ್ಯಾಷನಲ್ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ನಿರಾಯಾಸವಾಗಿ ದೊರೆಯಲಿವೆ ಅಂದಿದ್ರು.
ಎಲ್ಲಾ ಅಂದುಕೊಂಡಂತೆ ಆಗಿದ್ರೆ ದಾಸ ಪ್ರಶಸ್ತಿ ಫಲಕಗಳನ್ನ ಕೊರಳಲ್ಲಿ ಹಾಕಿಕೊಂಡು ಮೆರೆಯಬೇಕಿತ್ತು., ಆದ್ರೆ ದುರಂತ ಅಂದ್ರೆ ದರ್ಶನ್ ಇವತ್ತು ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದಾರೆ.
ಫಿಲ್ಮ್ ಚೇಂಬರ್‌ನಲ್ಲಿ 'ಮೀಟೂ-ಫೈರ್' ವಾರ್; ಕಮೀಟಿ ಬೇಕಾ ಬೇಡ್ವಾ ಬಿಸಿಬಿಸಿ ಚರ್ಚೆ!
ಕಾಟೇರ ಸಿನಿಮಾದಲ್ಲಿ ದರ್ಶನ್ ಜೈಲಗೆ ಹೋಗುವ ದೃಶ್ಯ ಇದೆ. ಒಮ್ಮೆಲೆ ವೃದ್ಧನಾದ ಮೇಲೆ ದರ್ಶನ್ ಜೈಲಿಂದ ವಾಪಸ್ ಬರ್ತಾರೆ. ಸದ್ಯದ ಸನ್ನಿವೇಶ ನೋಡ್ತಾ ಇದ್ರೆ ಇದು ರಿಯಲ್ ನಲ್ಲೂ ನಡೆದು ಹೋಗುತ್ತ ಅನ್ನೋ ಅನುಮಾನ ಕಾಡ್ತ ಇದೆ.