ಫಿಲ್ಮ್ ಚೇಂಬರ್‌ನಲ್ಲಿ 'ಮೀಟೂ-ಫೈರ್' ವಾರ್; ಕಮೀಟಿ ಬೇಕಾ ಬೇಡ್ವಾ ಬಿಸಿಬಿಸಿ ಚರ್ಚೆ!

ಮಲಯಾಳಂ ಚಿತ್ರರಂಗದಲ್ಲಿ ಜಸ್ಟೀಸ್ ಹೇಮಾ ವರದಿ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲೂ ಈ ಕುರಿತ ಚರ್ಚೆ ಶುರುವಾಯ್ತು. ಫೈರ್ ಕಮೀಟಿ ಸದಸ್ಯರು ಸಿಎಂ ಭೇಟಿ ಮಾಡಿ, ನಮ್ಮ ಚಿತ್ರೋದ್ಯಮದಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೀತಾ ಇದೆ. ಆ ಕುರಿತ ತನಿಖೆಗೆ..

Karnataka film chamber meeting about women artistes safety srb

ಕನ್ನಡ ಸಿನಿರಂಗದಲ್ಲೂ ಜಸ್ಟೀಸ್ ಹೇಮಾ ಮಾದರಿಯ ಕಮೀಟಿ ರಚನೆ ಆಗಬೇಕು ಅನ್ನೋ ಕೂಗು ಎದ್ದಿರೋದು ನಿಮಗೆ ಗೊತ್ತೇ ಇದೆ. ಕನ್ನಡ ಚಿತ್ರರಂಗದಲ್ಲೂ ಮಹಿಳೆಯರ ಮೇಲೆ ಆಗ್ತಿರೋ ಶೋಷಣೆಗಳ ಬಗ್ಗೆ ತನಿಖೆಯಾಗಲಿ ಅಂತ ಫೈರ್ ಸದಸ್ಯರು ಸಿಎಂಗೆ ಮನವಿ ಸಲ್ಲಿಸಿದ್ದಾರೆ. ಸದ್ಯ ಮಹಿಳಾ ಆಯೋಗ ಕೂಡ ಈ ವಿಚಾರಕ್ಕೆ ಎಂಟ್ರಿಯಾಗಿದ್ದು, ಫಿಲ್ಮ್ ಚೇಂಬರ್ ನಲ್ಲಿ ಈ ಕುರಿತ ಚರ್ಚೆ ನಡೆದಿದೆ. ಚಿತ್ರರಂಗದ ಕಲಾವಿದರು-ತಂತ್ರಜ್ಞರೆಲ್ಲಾ ಸೇರಿ ನಡೆಸಿದ ಮೀಟು ಮೀಟಿಂಗ್ ನಲ್ಲಿ ಏನೆಲ್ಲಾ ನಡೀತು..? ನೋಡೋಣ ಬನ್ನಿ.

ಫಿಲ್ಮ್ ಚೇಂಬರ್ ಅಂಗಳದಲ್ಲಿ ‘ಮೀಟು’ ವಾರ್; ಕಮೀಟಿ ಬೇಕಾ..ಬೇಡ್ವಾ..ಚೇಂಬರ್ v/s ಫೈರ್!
ಯೆಸ್ ಮಲಯಾಳಂ ಚಿತ್ರರಂಗದಲ್ಲಿ ಜಸ್ಟೀಸ್ ಹೇಮಾ ವರದಿ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲೂ ಈ ಕುರಿತ ಚರ್ಚೆ ಶುರುವಾಯ್ತು. ಫೈರ್ ಕಮೀಟಿ ಸದಸ್ಯರು ಸಿಎಂ ಭೇಟಿ ಮಾಡಿ, ನಮ್ಮ ಚಿತ್ರೋದ್ಯಮದಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೀತಾ ಇದೆ. ಆ ಕುರಿತ ತನಿಖೆಗೆ  ಜಸ್ಟೀಸ್ ಹೇಮಾ ಮಾದರಿಯಲ್ಲೇ ಒಂದು ಕಮೀಟಿಯನ್ನ ಮಾಡಿ ಅಂತ ಒತ್ತಾಯಿಸಿದ್ರು. 

ಕನ್ನಡ ಸಿನಿರಂಗಕ್ಕೆ ದೊಡ್ಡ ತಲೆನೋವು ತಂದಿಟ್ಟ ಮೀಟೂ, ಕಾಸ್ಟಿಂಗ್ ಕೌಚ್ ಭೂತ.., ಏನಾಗ್ತಿದೆ ನೋಡಿ..!

ಇದರ ಬೆನ್ನಲ್ಲೇ ಮಹಿಳಾ ಆಯೋಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು, ಚಿತ್ರರಂಗದಲ್ಲಿನ ಮಹಿಳಾ ಶೋಷಣೆ ಬಗ್ಗೆ ತ್ವರಿತವಾಗಿ ಚರ್ಚೆ ನಡೆಸಿ ಅಂತ ಸೂಚಿಸಿತ್ತು. ಅಂತೆಯೇ ಇವತ್ತು ಫಿಲ್ಮ್ ಚೇಂಬರ್ ನಲ್ಲಿ ಈ ಮೀಟು ಕುರಿತ ಮೀಟಿಂಗ್ ನಡೀತು. 
ಫಿಲ್ಮ್ ಚೇಂಬರ್ ಸದಸ್ಯರು, ಪಧಾದಿಕಾರಿಗಳ ಜೊತೆಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಸಭೆಯಲ್ಲಿ  ಭಾಗಿಯಾದ್ರು. 

ಹಿರಿಯ ನಟಿ ತಾರಾ, ಸಂಜನಾ, ಅನಿತಾ ಭಟ್ , ಕವಿತಾ ಲಂಕೇಶ್,  ಭಾವನಾ ರಾಮಣ್ಣ , ನೀತು ಶೆಟ್ಟಿ , ವಾಣಿಶ್ರೀ ಸೇರಿದಂತೆ ಅನೇಕ ಕಲಾವಿದೆಯರು ಭಾಗಿಯಾಗಿದ್ರು. ಫಿಲ್ಮ್ ಚೇಂಬರ್ ಕಡೆಯಿಂದ ಫೈರ್ ಸದಸ್ಯರಿಗೆ ಆಹ್ವಾನ ಏನೂ ಇರಲಿಲ್ಲ. ಆದ್ರೆ ಫೈರ್ ಅಧ್ಯಕ್ಷೆಯೂ ಆಗಿರೋ ನಿರ್ದೇಶಕಿ ಕವೀತಾ ಲಂಕೇಶ್ ಸಭೆಯಲ್ಲಿ ಭಾಗಿಯಾಗಿ ತಾವು ಸರ್ಕಾರದ ಮುಂದೆ ಕಮೀಟಿ ರಚನೆಗೆ ಒತ್ತಾಯಿಸಿದ್ದು ಯಾಕೆ ಅನ್ನೋದನ್ನ ವಿವರಿಸಿದ್ರು.

ಚೇತನ್ ಅಹಿಂಸಾ 'ಫೈರ್'ಗೆ ಉಗಿದು ಜನ್ಮ ಜಾಲಾಡಿ ಸಾರಾ ಗೋವಿಂದು ಏನ್ ಹೇಳ್ಬಿಟ್ರು ನೋಡಿ!

ನಮ್ಮಲ್ಲಿಲ್ಲ ಮೀಟು.. ಹಿರಿಯರ ಮಾತಿನೇಟು; ಶೋಷಣೆಗೆ ನಾನಾ ರೂಪ.. ನಟಿಯರು ಕೆಂಡ!
ರಾಕ್ ಲೈನ್ ವೆಂಕಟೇಶ್, ಸಾ ರಾ ಗೋವಿಂದು, ಪ್ರವೀಣ್  ಸೇರಿದಂತೆ ಸಭೆಯಲ್ಲಿ ಭಾಗಿಯಾದ ಹಲವು ಹಿರಿಯ ನಿರ್ಮಾಪಕರು ನಮ್ಮ ಉದ್ಯಮದಲ್ಲಿ ಮೀಟು ಆಥದ್ದೆಲ್ಲಾ ಇಲ್ಲವೇ ಇಲ್ಲ. ಇಂಥಾ ಆರೋಪ ಮಾಡಿ ಕನ್ನಡ ಚಿತ್ರರಂಗದ 9 ದಶಕಗಳ ಇತಿಹಾಸಕ್ಕೆ ಕಪ್ಪು ಚುಕ್ಕೆ ಆಗಬೇಡಿ ಅಂತ ಮನವಿ ಮಾಡಿದ್ರು. ಆದ್ರೆ ಅನೇಕ ನಟಿಯರು ಶೋಷಣೆ ಅಂದ್ರೆ ಬರೀ ಲೈಂಗಿಕ ಶೋಷಣೆ ಅಲ್ಲ ನಾನಾ ರೂಪದಲ್ಲಿ ಸ್ತ್ರೀಯರ ಮೇಲೆ ದೌರ್ಜನ್ಯ ನಡೀತಾ ಇವೆ ಅನ್ನೋ ಮಾತು ಹೇಳಿದ್ರು. ಈ ವಿಚಾರವಾಗಿ ಬಿಸಿ ಬಿಸಿ ಚರ್ಚೆ ಕೂಡ ನಡೀತು.

ಎಷ್ಟೋ ಸಾರಿ ಕಾಡುಗಳಲ್ಲಿ, ದೂರದ ಜಾಗಗಳಲ್ಲಿ ಶೂಟಿಂಗ್ ನಡೆಯುತ್ತೆ. ಆಗ ನಟಿಯರ ಸೇಫ್ಟಿ ಬಗ್ಗೆ ಕಾಳಜಿ ವಹಿಸೋದಿಲ್ಲ. ಖಾಸಗಿ ದೃಶ್ಯಗಳಲ್ಲಿ ನಟಿಸೋವಾಗ ನಟಿಯರ ಭಾವನೆಗೆ ಬೆಲೆ ಕೊಡೋದಿಲ್ಲ. ಶೂಟಿಂಗ್ ಸ್ಥಳದಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಕೂಡ ಇರೋದಿಲ್ಲ. ಇಂಥವುಗಳು ಕೂಡ ಶೋಷಣೆಯೇ. ಸೋ ಇವೆಲ್ಲವನ್ನೂ ಸರಿಪಡಿಸೋಕೆ ಒಂದು ಕಮೀಟಿ ಆಗಬೇಕು ಅಂತ ಮಹಿಳಾ ಆಯೋಗದ ಪರ ನಾಗಲಕ್ಷ್ಮೀ ಬಾಯಿ ಒತ್ತಾಯಿಸಿದ್ರು. 

ನಟಿಯರ ಸಮಸ್ಯೆಗಳನ್ನ ಆಲಿಸಿದ ಮೇಲೆ ಬಹುತೇಕ ಫಿಲ್ಮ್ ಚೇಂಬರ್ ಕಮೀಟಿ ರಚನೆಗೆ ಒಪ್ಪಿಕೊಂಡಿದೆ. ಆದ್ರೆ ಚೇಂಬರ್ ನೇತೃತ್ವದಲ್ಲೇ ಕಮೀಟಿ ಆಗಬೇಕು, ತನಿಖೆ ನಡೀಬೇಕು ಅನ್ನೋದು ಚೇಂಬರ್ ಮತ್ತು ಹಿರಿಯ ನಿರ್ಮಾಪಕರುಗಳ ಒತ್ತಾಯವಾಗಿದೆ. ಯಾವ ನಟಿಗೆ ಸಮಸ್ಯೆಯಾದ್ರೂ ಅವರ ಬೆಂಬಲಕ್ಕೆ 24/7 ಚೇಂಬರ್ ಇರುತ್ತೆ ಅನ್ನೋ ಭರವಸೆ ನೀಡಿದೆ. 

ವಿವಾದಕ್ಕೆ ಗುರಿಯಾಗಿದ್ದ'H2O' ಸಿನಿಮಾ ಹಾಗೂ ಆ ದಿನಗಳ ಬಗ್ಗೆ ಬಾಯ್ಬಿಟ್ಟ ಉಪೇಂದ್ರ!

ಒಟ್ಟಾರೆ ಮಲಯಾಳಂ ಚಿತ್ರರಂಗದಲ್ಲಿ ಹುಟ್ಟಿಕೊಂಡ ಕಿಡಿ ಈಗ ಕನ್ನಡ ಸಿನಿರಂಗದಲ್ಲೂ ಫೈರ್ ಹೊತ್ತಿಸಿದೆ. ಫೈರ್ ಕಮೀಟಿ, ಮಹಿಳಾ ಆಯೋಗ, ಫಿಲ್ಮ್ ಚೇಂಬರ್ ಈ ವಿಚಾರದಲ್ಲಿ ಚರ್ಚೆ ನಡೆಸಿವೆ. ಸರ್ಕಾರದ ಮುಂದೆ ತಮ್ಮ ಅಭಿಪ್ರಾಯ ಮಂಡಿಸಲಿವೆ. ಈ ವಿಚಾರದಲ್ಲಿ ಕಮೀಟಿ ಮಾಡುವ ಬಗ್ಗೆ ಸರ್ಕಾರ ನಿರ್ಧಾರ ಮಾಡಲಿದೆ. ಒಟ್ನಲ್ಲಿ  ಚಿತ್ರರಂಗದಲ್ಲಿ ಮಹಿಳಾ ದೌರ್ಜನ್ಯ ನಿಲ್ಲಿಸಬೇಕು ಅನ್ನೋ ನಿಟ್ಟಿನಲ್ಲಿ ದೊಡ್ಡ ಮಟ್ಟದ ಚರ್ಚೆಯಂತೂ ಶುರುವಾಗಿದೆ.. ಅಷ್ಟರ ಮಟ್ಟಿಗೆ ಕನ್ನಡ ಚಿತ್ರೋದ್ಯಮದಲ್ಲಿ ಒಂದು ಒಳ್ಳೆ ಬೆಳವಣಿಗೆ ಶುರುವಾಗಿದೆ ಅನ್ನಬಹುದು.

Latest Videos
Follow Us:
Download App:
  • android
  • ios